Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ವೆಂಕಟೇಶ ಪರ್ವತದ ಮಹಾತ್ಮೆ ಸುಳಾದಿ
ರಾಗ ಮೋಹನ
ಧ್ರುವತಾಳ
ಶ್ರೀನಿವಾಸನ ನಿಧಿಯಾನು ಬಣ್ಣಿಸಲಿನ್ನು
ನಾನೆಲ್ಲಿ ಇದರ ಸಮಾನಧಿಕವಾದ
ಭೂ ನಿತಂಬಿನಿಯೊಳು ಕಾಣೆನೊ ಅರಸಲು
ಆ ನಿರ್ಜರನುದಿನ ಎಣಿಸೆಣಿಸೆ
ವಾಣಿ ಬರಿದೆ ಗುಣವಾನು ತೋರದೆ ನಿತ್ಯ
ಈ ನಿಧಿಯಾ ಪುಣ್ಯಶ್ರೇಣಿಯನೊ
ಧೇನಿಸಲಾರದೆ ಮೌನವಾಗುವನಯ್ಯಾ
ಹೀನ ಮಾನವ ಮಿತಿಯಾನು ನುಡಿದ ಫಲ
ವೇಣಿಕೆ ಗೈವನೆ ಚೂಣಿ ಅಂತ ವಿಡಿದು
ಚಾಣುರಾರಿ ರಂಗ ವಿಜಯವಿಠ್ಠಲರೇಯಾ
ನೀನೆ ಬಲ್ಲವ ನಿದರ ಆನಂದ ವೈಭವ ॥ 1 ॥
ಮಟ್ಟತಾಳ
ರತುನ ಸಮವಿನ ಸುತಗೆ ವೆಂಕಟ ಪ -
ರ್ವತ ನೆಂಬಭಿದಾನಾ ಹಿತವಾಗಿ ಇರಲೂ
ಗತ ಶ್ರವಣ ಮಾರುತ ದೇವಗೆ ಬಿಡದೆ
ಪ್ರತಿವಾದಗಳಾಗೆ ಖತಿಯವನಂತೆ ಮಾ -
ರುತಿ ಪತಿ ಬೀಸಾಲು ಗತಿ ತಪ್ಪಿ ಉರಗ
ಪತಿ ಪರ್ವತ ಸಹಿತ ಕ್ಷಿತಿಯೊಳಗೀ ಭ -
ರತ ಖಂಡದೊಳಗೆ ದ್ಯುತಿಯಾಗಿ ಪೊಳವುತ್ತ
ರತಿಪತಿ ಪಿತ ಸಿರಿ ವಿಜಯವಿಠ್ಠಲನ್ನ
ನುತಿಸಿ ನಿರಂತರ ಸ್ತುತಿಸಿ ಕರವ ಮುಗಿಯೆ ॥ 2 ॥
ರೂಪಕತಾಳ
ಕುಂಡಲಿ ಈ ಪರಿ ಕೊಂಡಾಡಿ ದೈನ್ನ್ಯದಲಿ
ದಂಡ ಪ್ರಣಾಮದಿಂದ ಅಂಡಜ ಗಮನನ್ನ
ತಂಡ ತಂಡದ ಭಕುತಿ ಖಂಡವಾಗದಂತೆ
ಪುಂಡರೀಕಾಕ್ಷನು ಕಂಡು ವೇಗದಲ್ಲಿ
ಅಂಡಲಿಯದಂತೆ ವಿಜಯವಿಠ್ಠಲ ತನ್ನಾ
ತೊಂಡಗೆ ವರವ ಮುಂಕೊಂಡು ಪಾಲಿಸಿದಾ ॥ 3 ॥
ಝಂಪೆತಾಳ
ವರವಿತ್ತು ಭಕುತಗೆ ಪರಿಹರಿಸಿ ಭಯವನ್ನು
ಸ್ಥಿರವಾಗಿ ನಿಂದ ನೀ ಗಿರಿಯ ಮದ್ಧ್ಯ
ಸುರರಿಂದ ವಾಲಗವ ಭರದಿಂದ ಕೈಕೊಳುತ
ಮೆರೆದು ಪೆಸರಾಗಿ ತ್ರ್ಯೆಧರಿಯಾ ವೊಳಗೆ
ಶರಣೆಂದವರ ಮನಾದರ ಮರೆಯನು ಬಿಡಿಸಿ
ಪೊರೆವ ಪರಿಪರಿಯಲ್ಲಿ ಪರಮ ಪುರುಷ
ತಿರುವೆಂಗಳೇಶ ತಿರುಪತಿ ವಿಜಯವಿಠ್ಠಲ
ಜರ ಮರಣ ರಹಿತ ಭೂಸುರ ವೃತದಾತ ॥ 4 ॥
ತ್ರಿಪುಟತಾಳ
ಈ ಗಿರಿಯಲ್ಲಿ ತಪಸು ವೇಗದಿಂದಲಿ ನೆಸಗಿ
ಆ ಗಂಧಾ ವಾಹನ್ನ ಲಾಗ ಸ್ತುತಿಸಲಾಗೆ
ತಾ ಗುಣದಲಿ ಪ್ರಥಮಾಂಗದ ನೆನಿಸಿದ ಸಾಗರ ಶಯನಗೆ
ಅಗಸ್ತ್ಯಮುನಿ ಯಿದರ ಆಗಮ ಬಲ್ಲಾನು
ಭೂಗೋಳದೊಳಾಗನು ರಾಗದಿಂದಲಿ ಮಿಕ್ಕ
ಯೋಗಿಗಳೆಲ್ಲಾ ಭಾಗಿಸು ತಿಪ್ಪದು
ಭೋಗಿಶಯನಾ ವಿಜಯವಿಠ್ಠಲನ್ನ
ಭೋಗವೇನು ಪೇಳಲಿ ಭೋಗಾಗಿರಿಯಲ್ಲಿ ॥ 5 ॥
ಅಟ್ಟತಾಳ
ಐದು ಯೋಜನ ವಿಸ್ತಾರದ ಗಿರಿಯನು
ವೈದಿಕದಿಂದಲಿ ಸುತ್ತ ಪ್ರದಕ್ಷಿಣೆ
ಐದೊಂದು ಸಾರಿಗೆ ತಿರಿಗಿ ಭಕುತಿಯಲ್ಲಿ
ಐದು ಹತ್ತು ಹದಿನಾರು ಕೋಟಿ ತೀರ್ಥ ಹಾ -
ಯಿದು ನೆನೆಸುವಂಥ ಮೈದೆಗಿಯದ ನರಾ
ಕೋಯಿದು ಹಾಕುವನಯ್ಯಾ ಮೈದುಗುಡದ ಪಾಶಾ
ಐದು ವಿರಹಿತ ವಿಜಯವಿಠ್ಠಲನ್ನ
ಕೈದಣಿಸಿ ಪೂಜಿಸಿ ಪೂಜಿಸಿ ಐದಿದವರುಮತಿ ॥ 6 ॥
ಆದಿತಾಳ
ಸ್ವಾಮಿ ಪುಷ್ಕರಣಿ ಸ್ನಾನ ಈ ಮಹತ್ಮನ ದರ್ಶನ
ಈ ಮಹಿಯೊಳಗೊಮ್ಮೆ ನೇಮದಲ್ಲಿ ಮಾಡಿದವನು
ವ್ಯೋಮಾ ಭೂ ಪಾತಾಳದೊಳಗೆ ನಿಸ್ಸೀಮವಾಗಿ ಚರಿಸಿ ನಿಜ
ಕಾಮಿತಾರ್ಥವ ಬೇಡದೆ ಕಾಮಿಸಿ ಹರಿಯ ಪಾದಾ
ಪಾಮರಾ ನಾಗದೆ ನಮ್ಮ ವಿಜಯವಿಠ್ಠಲನ್ನ
ನಾಮವನೆ ಉಂಡು ನಿಜ ಧಾಮಾದಲ್ಲಿ ಸೇರುವನು ॥ 7 ॥
ಜತೆ
ವೆಂಕಟೇಶನೆ ನಮೊ ವೆಂಕಟೇಶನೆ ನಮೊ
ಸಂಕಟ ಪರಿಹರಿಸೊ ವಿಜಯವಿಠ್ಠಲರೇಯಾ ॥
*******
No comments:
Post a Comment