Friday, 6 December 2019

ಹರಿಯ ದಾಸರಗಿನ್ನು ಸರಿಯುಂಟೆ purandara vittala

ರಾಗ ಕಾಮವರ್ಧನಿ/ಪಂತುವರಾಳಿ. ಆದಿ ತಾಳ 

ಹರಿಯ ದಾಸರಗಿನ್ನು ಸರಿಯುಂಟೆ
ನರಹರಿಯ ನಂಬಿದವರಿಗೆ ಕೇಡುಂಟೆ

ಮಾರಿಯಾ ಕೈಯಲ್ಲಿ ನೀರು ಹೊರಿಸುವರು
ಮಸಣಿಯಾ ಕೈಲಿ ಕಸ ಬಳಿಸುವರು
ಘೋರ ಮೃತ್ಯುವಿನ ಕೈ ಭತ್ತ ಕುಟ್ಟಿಸುವರು
ಜವನ ಕೈಲಿ ಜಂಗುಳಿ ಕಾಯಿಸುವರು

ಬೊಮ್ಮ ಬೀರ ಬೇತಾಳ ಜಟ್ಟಿಂಗಳೆಲ್ಲ
ಕರ್ಮದ ಕಡಲೊಳು ಮುಳುಗಿರಲು
ಒಮೆಗಾ ಹರಿದಾಸರ ಪಾದವು ಸೋಕಲು
ಕರ್ಮದ ಕಡಲಿಂದ ಕಡೆಹಾಯುವರು

ಜಕಣಿಯು ಜಲದೇವರು ಮೊದಲಾದ
ಭಿಕಾರಿ ದೈವಗಳ ಪೂಜಿಸರವರು
ಲೋಕ ನಾಯಕ ಶ್ರೀ ಪುರಂದರ ವಿಠಲನ್ನ
ಸಾಕಾರ ದಯದ ಪರಮ ಭಾಗವತರು
***

pallavi

hariya dAsaraginnu sariyuNTe narahariya nambidavarige kEDuNTe

caraNam 1

mAriyA kaiyalli nIru horisuvaru masaNiyA kaili kasa baLisuvaru
ghOra mrtyuvina kai bhatta kuTTisuvaru javana kaili janguLi kAyisuvarau

caraNam 2

bomma bira bEtALa jaTTingaLella karmada kaDaloLu muLugiralu
ommegA haridAsara pAdavu sOkalu karmada kaDalinda kaDehAyuvaru

caraNam 3

jakaNiyu jala dEvaru modalADa bhikAri daivagaLa pUjisaravaru
lOka nAyaka shrI purandara viTTalanna sAkAra dayada parama bhAgavataru
***

No comments:

Post a Comment