Audio by Mrs. Nandini Sripad
ವ್ಯಾಸವಿಟ್ಠಲಾಂಕಿತ ಶ್ರೀಕಲ್ಲೂರು ಸುಬ್ಬಣ್ಣಾಚಾರ್ಯ ದಾಸಾರ್ಯ ವಿರಚಿತ
ಶ್ರೀಮಹಾಲಕ್ಷ್ಮೀದೇವಿ ಸ್ತೋತ್ರ ಸುಳಾದಿ
( ಶ್ರೀಲಕ್ಷ್ಮೀದೇವಿಯರ ಮಹಿಮಾಲಂಕಾರ ವರ್ಣನ ಪೂರ್ವಕ , ಶ್ರೀಸತ್ಯಬೋಧರಿಗೊಲಿದ ಮಹಾಲಕ್ಷ್ಮೀದೇವಿ ಸ್ತೋತ್ರ )
ರಾಗ ಶಂಕರಾಭರಣ
ಧ್ರುವತಾಳ
ಚಿತ್ತ ಚಂಚಲಿಸದೆ ಚೆನ್ನಾಗಿ ನಿಂದೆ ಶ್ರೀ -
ಸತ್ಯಬೋಧಾರ್ಯರಲ್ಲಿ ಶ್ರೀಲಕ್ಷ್ಮೀಯು
ಅತ್ಯಂತ ಅಜಭವ ರುದ್ರ ಇಂದ್ರಾದಿಗಳ
ವತ್ತಿಯಾಳುವಂಥ ವಾರಿಜ ಸದನೆ
ಪೃಥಿವಿಯೊಳಗೆ ನಿನಗೆ ಪ್ರತಿ ಕಕ್ಷೆಗಳಿವರೆಂದು
ಮತ್ತೆ ನೀ ಸೋತು ನಿಂತೆ ಮಾತಾಡಮ್ಮಾ ನೈ -
ಮಿತ್ಯ ಮಹಾ ಪ್ರಳಯದಲ್ಲಿದೆ ಹರಿಯ ಪೂಜೆ
ಅತ್ಯಂತವಾಗಿ ಮಾಡಿ ಧನ್ಯಳಾದೆ ಇಲ್ಲಿ
ನಿಂತು ಮುನಿಪ ದಿನ ದಿನ ರಾತ್ರಿಯಲ್ಲಿ , ಯೆ -
ಚ್ಚತ್ತು ಪೂಜಿಸುವಂಥ ಬೆಡಗು ನೋಡಿ
ಎತ್ತ ಮರುಳಾಗಿ ಒಂದೆ ವರದಿ ಭಯದಿ ಇವರ ವಶವಾದ್ಯೋ
ಉತ್ತರ ಇದಕ್ಕೊಂದು ತಿಳಿಸಬೇಕು
ಹತ್ತಾವತಾರ ನಮ್ಮ ವ್ಯಾಸವಿಠ್ಠಲನ್ನ ಪಾ -
ಡುತ್ತ ಸುಖಿಸುವಂಥ ಪಾವನ ಚರಿತಳೆ ॥ 1 ॥
ಮಟ್ಟತಾಳ
ಜಲಜನಾಭಗೆ ನೀನು ಸಲಿಗೆ ಬಿನ್ನೈಸಿದೆ
ಹಲವು ಬಗೆಯಿಂದ ಸ್ಥಿತಿಕಾಲದಿ ನಿನಗೆ
ಕುಳಿತಿರಲಿಂಬಿರದೆ ದೇವತೆಗಳ ಸರಿ ತಾ
ಬಲು ಬಗೆಯಲ್ಲಿ ಜಗದ ವ್ಯಾಪಾರವು ನಿನಗೆ
ನೆಲೆ ಇಲ್ಲವು ನೋಡೆ ಇದರಿಂದಲಿ ನಿನ್ನ
ಸಲೆ ಸಂಪೂಜೆ ನಿಚ್ಚಳ ಮುಗಿಯದು ಎಂದು
ಪ್ರಳಯದಿ ನೀನೇ ಸೇವೆ ಪಾಲಿಸಲಿಲ್ಲೆಂದು ಬೇಡೆ
ನೆಲೆಯಾಗಿ ನಿನಗೆ ವರವಿತ್ತನು ನೋಡಾ
ಬಲಿಮರ್ದನ ನಮ್ಮ ವ್ಯಾಸವಿಠ್ಠಲನ್ನ
ಘಳಿಗೆ ಬಿಡದೆಯಿಪ್ಪ ಬಲವಂತಳೆ ಕೇಳು ॥ 2 ॥
ತ್ರಿವಿಡಿತಾಳ
ಸಾಧನ ಲೋಭದಿ ಶ್ರೀ ಸತ್ಯಬೋಧರು
ಆದಿಯಿಂದ ಹೇಗೆ ಬಿನ್ನೈಸಿದರು
ಭೂದೇವ ಜನು-ಮದಿ ಹಗಲು ಸ್ನಾನ ಜಪ
ಆದ ವ್ಯಾಖ್ಯಾನ ಕಾರಣದಲ್ಲಿ
ಸಾಧಿಸಿದರು ಮನಕೆ ಸಾಲದೆನಿಸಿ ಯಲ್ಲೆ
ಮೋದ ಮನಸಿಲಿ ಹರಿಯ ಪೂಜಿಪೆನೆಂದು " ಸತ್ಯ -
ಬೋಧಾ ನಿದ್ರೆಯಾನಿದ್ರೆ ಆಹಾರ ರಾಗತಃ ಪ್ರಾಪ್ತಿ "
ಯಾದದೆ ನಿಜವೆಂದು ನೀ ಕರಿಸೆ
ಶ್ರೀದೇವಿ ನಿನ್ನ ಕೂಡ ಶಣಿಸಲು ಮನದೆಗಿ -
ಯಾದೆ ನಿಂತ್ಯೋ ಹೇಗೋ ವ್ಯಾಸವಿಠ್ಠಲನ ರಾಣಿ ॥ 3 ॥
ಅಟ್ಟತಾಳ
ಆ ಮಹಾ ಪ್ರಳಯದಿ ಬ್ರಹ್ಮಾದಿಗಳ ಕಾರ್ಯ
ಒಮ್ಮಿಗು ಕೊಳದಂತೆ ಹರಿ ಉದರದೊಳಿಟ್ಟು
ಈ ಮಹಾ ಮುನಿಗಳು ಹಿಮ್ಮೆಟ್ಟಿ ಅಂಜದೆ
ಆಮ್ಮನೊ ವೃತ್ಯಾಭಿಮಾನಿ ದೇವತಿಗಳ
ಘಮ್ಮನೆ ಕರುಣಾಭಿಮಾನಿ ದಿವಿಜರನೆಲ್ಲ
ತಮ್ಮ ಸ್ಥಾನದಲ್ಲಿ ಸುಮ್ಮನೆ ಇರ ಪೇಳಿ
ಘಮ್ಮನೆ ಚಿನ್ಮನಸಿನ ಕಾರ್ಯ ಪ್ರಾಚುರ್ಯ
ಆ ಮಹಾಮಹಿಮನ ಅರ್ಚಿಪರು ಅನು -
ಪಮ ಮೂರುತಿ ನಮ್ಮ ವ್ಯಾಸವಿಠಲನ್ನ
ಸಮ್ಮಾನವೆನಿಪಳೆ ಸಾಕು ನಿನ್ನ ಬಿರಿದು ॥ 4 ॥
ಆದಿತಾಳ
ಮತ್ತೆ ಜಲ ಭೂಮಿ ಬಗೆಬಗೆ ವಸ್ತುಗಳಿಂದ ಹರಿಯ
ಜತ್ತಾಗಿ ಪೂಜಿಸಿದೆನೆಂಬೊ ಗರ್ವವೆ ಬೇಡ
ಮತ್ತೆ ನಮ್ಮ ಗುರುಗಳು ವಾಸನಮಯದಿಂದ
ಮುತ್ತು ಮಾಣಿಕ ರಜತ ಹೇಮ ಚಾಮರ ನವ -
ರತ್ನ ಖಚಿತವಾದ ಮಂಟಪ ಕುಸುಮಗಳು
ಛತ್ರ ಪರಿಮಳ ಭೋಜನಗಳು ನಿತ್ಯ ಈ ಬಗೆ ನಿರ್ಮಿಸಿ
ಇತ್ತ ಇದರ ವಿನಃ ಬಾಹ್ಯ ಪೂಜೋಪಸ್ಕಾರ ವಸ್ತ್ರಾಭರಣ -
ವಿತ್ತ ನಿತ್ಯ ಎಲ್ಲ ಪರಿ ಇತ್ತಂಡವಾಗಿ ಹರಿಯಾರಾಧನೆ ಮಾಡಿದರು
ಯತ್ನವಿಂದು ಕೊಳ್ಳದು ಏನು ಮಾಡಲೆಂದು ಇವರ
ಚಿತ್ತವನುಸರಿಸಿ ತಿದ್ದಿಕೊಂಡ ಬಗೆಯೊ ದೂ -
ರತ್ತ ಪೋದರೆ ಮತ್ತಿನ್ನೇನಾಹದೆಂಬೋ ಚಿಂತ್ಯೋ
ಸತ್ಯಭೋಧರ ದಿವ್ಯ ಭಕ್ತಿಗೊಲಿದು ನಿಂದ್ಯೊ
ಕೃತ್ಯ ಮತ್ತೊಂದು ಬಿಡದೆ ಎನಗೆ ತೋರುವದು ಪ್ರೀತಿಲಿ
ಹತ್ತಿಲಿರುವದು ನಿಗಮ ಸಮ್ಮತವೆಂಬೊ ಬಗೆಯೊ
ಭೃತ್ಯವತ್ಸಲ ನಮ್ಮ ವ್ಯಾಸವಿಠ್ಠಲನ್ನ
ಅತ್ಯಂತ ಪ್ರಿಯಳೆ ಅನುವಾಗಿ ತಿಳಿಸಬೇಕು ॥ 5 ॥
ಜತೆ
ಆವ ಬಗೆಯಲಿ ನಿನ್ನ ಭಕ್ತರ ಬಿಡದಿಪ್ಪ
ಭಾವ ನಿನ್ನದೆ ನಿಜವು ವ್ಯಾಸವಿಠ್ಠಲನ ರಾಣಿ ॥
**********
ಚಿತ್ತ ಚಂಚಲಿಸದೆ ಚೆನ್ನಾಗಿ ನಿಂದೆ ಶ್ರೀಸತ್ಯಬೋಧಾರ್ಯರಲ್ಲಿ ಶ್ರೀ ಲಕ್ಷೀಯುಅತ್ಯಂತ ಅಜಭವ ರುದ್ರ ಇಂದ್ರಾದಿಗಳಒತ್ತಿಯಾಳುವಂಥ ವಾರಿಜ ಸದನೆಪೃಥಿವಿಯೊಳಗೆ ನಿನಗೆ ಪ್ರತಿ ಕಕ್ಷಿಗಳಿವರೆಂದುಮತ್ತೆ ನೀ ಸೋತು ನಿಂತೆ ಮಾತಾಡಮ್ಮಾ ನೈ-ಮಿತ್ಯ ಮಹಾ ಪ್ರಳಯದಲ್ಲಿದೆ ಹರಿಯ ಪೂಜೆಅತ್ಯಂತವಾಗಿ ಮಾಡಿ ಧನ್ಯಳಾದೆ ಇಲ್ಲಿನಿಂತು ಮುನಿಪ ದಿನ ದಿನ ರಾತ್ರಿಯಲ್ಲಿಯೆಚ್ಚತ್ತು ಪೂಜಿಸುವಂಥ ಬೆಡಗು ನೋಡಿಎತ್ತ ಮರುಳಾಗಿ ಬಂದೆ ವರದಿ ಭಯದಿ ಇರುವ ವಶವಾದ್ಯೋಉತ್ತರ ಇದಕ್ಕೊಂದು ತಿಳಿಸಬೇಕುಹತ್ತಾವತಾರ ನಮ್ಮ ವ್ಯಾಸವಿಠಲನ್ನ ಪಾ-ಡುತ್ತ ಸುಖಿಸುವಂಥ ಪಾವನಚರಿತಳೆ 1
ಮಟ್ಟತಾಳ
ಜಲಜನಾಭಗೆ ನೀನು ಸಲಿಗೆ ಬಿನ್ನೈಸಿದೆಹಲವು ಬಗೆಯಿಂದ ಸ್ಥಿತಿಕಾಲದಿ ನಿನಗೆಕುಳಿತಿರಲಿಂಬಿರದೆ ದೇವತೆಗಳ ಸರಿ ತಾಬಲು ಬಗೆಯಲ್ಲಿ ಜಗದ ವ್ಯಾಪಾರವು ನಿನಗೆನೆಲೆ ಇಲ್ಲವು ನೋಡೆ ಇದರಿಂದಲಿ ನಿನ್ನಸಲೆ ಸಂಪೂಜೆ ನಿಚ್ಚಳ ಮುಗಿಯದು ಎಂದುಪ್ರಳಯದಿ ನೀನೆ ಸೇವೆ ಪಾಲಿಸಲಿಲ್ಲೆಂದು ಬೇಡೆನೆಲೆಯಾಗಿ ನಿನಗೆ ವರವಿತ್ತನು ನೋಡಾಬಲಿಮರ್ದನ ನಮ್ಮ ವ್ಯಾಸವಿಠ್ಠಲನ್ನಘಳಿಗೆ ಬಿಡದೆಯಿಪ್ಪ ಬಲವಂತಳೆ ಕೇಳು 2
ತ್ರಿವಿಡಿತಾಳ
ಸಾಧನ ಲೋಭದಿ ಶ್ರೀ ಸತ್ಯಬೋಧರುಆದಿಯಿಂದ ಹೇಗೆ ಬಿನ್ನೈಸಿದರು ಭೂ ದೇವ ಜನು-ಮದಿ ಹಗಲು ಸ್ನಾನ ಜಪ ಆದಿ ವ್ಯಾಖ್ಯಾನ ಕಾರಣದಲ್ಲಿಸಾಧಿಸಿದರು ಮನಕೆ ಸಾಲದೆನಿಸಿ ಯಲ್ಲೆಮೋದ ಮನಸಿಲಿ ಹರಿಯ ಪೂಜಿಪೆನೆಂದು ``ಸತ್ಯ ಬೋಧಾ ನಿದ್ರೆಯಾ ನಿದ್ರೆ ಆಹಾರ ರಾಗತಃ ಪ್ರಾಪ್ತಿ’’ಯಾದದೆ ನಿಜವೆಂದು ನೀ ಕರಿಸೆಶ್ರೀದೇವಿ ನಿನ್ನ ಕೂಡ ಸೆಣಿಸಲು ಮನದೆಗಿ-ಯದೆ ನಿಂತ್ಯೋ ಹೇಗೋ ವ್ಯಾಸವಿಠ್ಠಲನ ರಾಣಿ 3
ಅಟ್ಟತಾಳ
ಆ ಮಹಾ ಪ್ರಳಯದಿ ಬ್ರಹ್ಮಾದಿಗಳ ಕಾರ್ಯಒಮ್ಮಿಗು ಕೊಳದಂತೆ ಹರಿ ಉದರದೊಳಿಟ್ಟುಈ ಮಹಾ ಮುನಿಗಳು ಹಿಮ್ಮಟ್ಟಿ ಅಂಜದೆಅಮ್ಮನೊ ವೃತ್ಯಾಭಿಮಾನಿ ದೇವತೆಗಳಘಮ್ಮನೆ ಕರುಣಾಭಿಮಾನಿ ದಿವಿಜರನೆಲ್ಲತಮ್ಮ ಸ್ಥಾನದಲ್ಲಿ ಸುಮ್ಮನೆ ಇರಪೇಳಿಘಮ್ಮನೆ ಚಿನ್ಮನಸಿನ ಕಾರ್ಯ ಪ್ರಾಚುರ್ಯಆ ಮಹಾಮಹಿಮನ ಅರ್ಚಿಪರು ಅನುಪಮ ಮೂರುತಿ ನಮ್ಮ ವ್ಯಾಸವಿಠಲನ್ನಸಮಾನವೆನಿಪಳೆ ಸಾಕು ನಿನ್ನ ಬರಿದು 4
ಆದಿತಾಳ
ಮತ್ತೆ ಜಲ ಭೂಮಿ ಬಗೆ ಬಗೆ ವಸ್ತುಗಳಿಂದ ಹರಿಯಜತ್ತಾಗಿ ಪೂಜಿಸಿದೆನೆಂಬೊ ಗರ್ವವೆ ಬೇಡ ಮತ್ತೆ ನಮ್ಮ ಗುರುಗಳು ವಾಸನಮಯದಿಂದ ಮುತ್ತು ಮಾಣಿಕ ರಜತ ಹೇಮ ಚಾಮರ ನವರತ್ನಖಚಿತವಾದ ಮಂಟಪ ಕುಸುಮಗಳುಛತ್ರ ಪರಿಮಳ ಭೋಜನಗಳು ನಿತ್ಯ ಈ ಬಗೆ ನಿರ್ಮಿಸಿಇತ್ತ ಇದರ ವಿನಃ ಬಾಹ್ಯ ಪೂಜೋಪಸ್ಕಾರ ವಸ್ತ್ರಾಭರಣವಿತ್ತು ನಿತ್ಯ ಎಲ್ಲ ಪರಿ ಇತ್ತಂಡವಾಗಿ ಹರಿಯಾರಾಧನೆ ಮಾಡಿದರುಯತ್ನವಿಂದು ಕೊಳ್ಳದು ಏನು ಮಾಡಲೆಂದು ಇವರಚಿತ್ತವನುಸರಿಸಿ ತಿದ್ದಿಕೊಂಡ ಬಗೆಯೊ ದೂ- ರತ್ತ ಪೋದರೆ ಮತ್ತಿನೇನಾಹದೆಂಬೋ ಚಿಂತ್ಯೋಸತ್ಯಭೋಧರ ದಿವ್ಯ ಭಕ್ತಿಗೊಲಿದು ನಿಂದ್ಯೊ ಕೃತ್ಯಮತ್ತೊಂದು ಬಿಡದೆ ಎನಗೆ ತೋರುವುದು ಪ್ರೀತಿಲಿಹತ್ತಿಲಿರುವುದು ನಿಗಮ ಸಮ್ಮತವೆಂಬೊ ಬಗೆಯೊಭೃತ್ಯವತ್ಸಲ ನಮ್ಮ ವ್ಯಾಸವಿಠ್ಠಲನ್ನಅತ್ಯಂತ ಪ್ರಿಯಳೆ ಅನುವಾಗಿ ತಿಳಿಸಬೇಕು 5
ಜತೆ
ಆವ ಬಗೆಯಲಿ ನಿನ್ನ ಭಕ್ತರ ಬಿಡದಿಪ್ಪಭಾವ ನಿನ್ನದೆ ನಿಜವು ವ್ಯಾಸವಿಠಲನ ರಾಣಿ ||
**************
No comments:
Post a Comment