Sunday 8 December 2019

ಗೋಪಿ ನಂದನೆ ಮುಕ್ತೆ ದೈತ್ಯ vijaya vittala suladi ದುರ್ಗಾ ಸುಳಾದಿ

ದುರ್ಗಾ ಸುಳಾದಿ
ತಾಳ : ಆದಿ

ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ । ಸಂ । ತಾಪವ ಕೊಡುತಿಪ್ಪ ಮಹಾ ಕಠೋರೇ । ಉಗ್ರ । ರೂಪ ವೈಲಕ್ಷಿಣೆ ಅಜ್ಞಾನಕ್ಕಭಿಮಾನಿನಿ । ತಾಪತ್ರಯ ವಿನಾಶೆ ಓಂಕಾರೆ ಹೂ೦ಕಾರೆ । ಪಾಪಿ ಕಂಸಗೆ ದಯ ತೋರಿದ ಬಾಲ ಲೀಲೆ । ವ್ಯಾಪುತೆ ಧರ್ಮಮಾರ್ಗ ಪ್ರೇರಕೆ ಅಪ್ರಾಕೃತೆ । ಸ್ವಾಪದಲಿ ನಿನ್ನ ನೆನಿಸಿದ ಶರಣನಿಗೆ । ಅಪಾರವಾಗಿದ್ದ ಶರಧಿಯಂತೆ ಮಹಾ । ಆಪತ್ತು ಬಂದಿರಲು ಹಾರಿಪೋಗೋವು ಸಪ್ತ । ದ್ವೀಪ ನಾಯಿಕೆ ನರಕನಿರ್ಲೇಪೆ ತಮೋ ಗುಣದ । ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ । ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ । ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ । ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮ ವಾಣಿ । ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ । ಆಪಾದಮೌಳಿ ತನಕ ಭಜಿಸಿ ಭವ್ಯರಾದರು । ನಾ ಪೇಳುವುದೇನು ಪಾಂಡವರ ಮನೋಭೀಷ್ಟೆ । ಈ ಪಂಚ ಭೌತಿಕದಲ್ಲಿ ಆವ ಸಾಧನ ಕಾಣೆ । ಶ್ರೀಪತಿ ನಾಮವೊಂದೇ ಜಿಹ್ವಾಗ್ರದಲಿ ನೆನೆವ । ಔಪಾಸನ ಕೊಡು ರುದ್ರಾದಿಗಳ ವರದೆ । ತಾಪಸ ಜನ ಪ್ರಿಯ ವಿಜಯವಿಠ್ಠಲ ಮೂರ್ತಿಯ । ಶ್ರೀಪಾದಾರ್ಚನೆ ಮಾಳ್ವ ಶ್ರೀ ಭೂ ದುರ್ಗಾ ವರ್ಣಾತ್ರಯೇ ।।

ಜತೆ

ದುರ್ಗೆ ಹಾ ಹೆ ಹೂ ಹಾ: ದುರ್ಗೆ ಮಂಗಲದುರ್ಗೆ ।
ದುರ್ಗತಿ ಕೊಡದಿರು ವಿಜಯವಿಠ್ಠಲ ಪ್ರಿಯೆ ।।
*********

No comments:

Post a Comment