ರಾಗ ತೋಡಿ
Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಕಪಿಲದೇವರ ಸ್ತೋತ್ರಸುಳಾದಿ
ಧ್ರುವತಾಳ
ಸಿದ್ದಿದಾಯಕ ಶಿಷ್ಯಜನಪರಿಪಾಲ ಪರಮ -
ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿ
ನಿದ್ರಾರಹಿತ ಭದ್ರಾರಮಣ ನಿರ್ವಿಕಾರ
ಚಿದ್ದೇಹ ಸರ್ವಕಾಲ ಸುಂದರಸಾರ
ಪದ್ಮಸಂಭವ ಬಲಿಪ್ರಕ್ಷಾಲಿತ ಪಾದ ಮಹ -
ಹೃದ್ರೋಗನಾಶ ವೈಕುಂಠವಾಸ
ವಿದ್ಯಾತೀತ ವಿಶ್ವನಾಟಕ ನಾರಾಯಣ
ವಿದ್ಯ ಉದ್ದಾರಕ ಉದಧಿಸದನ
ಸಿದ್ಧಾದಿ ವಿನುತ ಸಂತತ ಪಾತಾಳವಾಸಿ
ಬುದ್ಧಿವಿಶಾಲ ಮಹಿಮ ಪಾಪಹಾರಿ
ಖದ್ಯೋತವರ್ಣ ಸಕಲವ್ಯಾಪ್ತ ಆಕಾಶ ಅಮಿತ
ಬದ್ಧವಿಚ್ಛೇದ ನಾನಾರೂಪಾತ್ಮಕ
ಅದ್ವೈತಕಾಯಾ ಮಾಯಾರಮಣ ರಾಜೀವನೇತ್ರ
ಅದ್ವಯ ಅನಾದಿ ಪುರುಷ ಚಿತ್ರ
ಕರ್ದಮ ಮುನಿಸೂನು ವಿಜಯವಿಠ್ಠಲ ಕಪಿಲ
ನಿರ್ದೋಷ ಕರುಣಾಬ್ದಿ ಸರ್ವರಾಧಾರಿ ॥ 1 ॥
ಮಟ್ಟತಾಳ
ಆದಿಮನ್ವಂತರದಿ ಜನಿಸಿದ ಮಹದೈವ
ಆದಿಪರಬೊಮ್ಮ ಬೊಮ್ಮನಯ್ಯ ಜೀಯ
ಸಾಧುಜನ ಪ್ರೀಯ ಸಂತತ ಮುನಿತಿಲಕ
ಬೋಧಶರೀರ ಭಕುತರ ಮನೋಹಾರಿ
ಮಾಧವ ಸಿರಿ ವಿಜಯವಿಠ್ಠಲ ವಿಮಲೇಶ
ಮೋದಮತಿ ಕೊಡುವ ಕಪಿಲ ಭಗವನ್ಮೂರ್ತಿ ॥ 2 ॥
ತ್ರಿವಿಡಿತಾಳ
ಘನ ಮಹಿಮ ಗೌಣಾಂಡದೊಳಗೆ ಲೀಲೆಯಿಂದ
ಜನಿಸಿ ಮೆರೆದೆ ಬಿಂದುಸರೋವರದಲ್ಲಿ
ಮಿನುಗುವ ದ್ವಯಹಸ್ತ ಅಪ್ರಾಕೃತಕಾಯ
ಇನನಂತೆ ಒಪ್ಪುವ ಶಿರೋರುಹವೊ
ಕನಕ ಪುತ್ಥಳಿಯಂತೆ ಕಾಂತಿ ತ್ರಿಭುವನಕ್ಕೆ
ಅನವರತ ತುಂಬಿ ಸೂಸುತಲಿದಕೋ
ಜನನಿ ದೇವಹೂತಿಗೆ ಉಪದೇಶವನು ಮಾಡಿ
ಗುಣಮೊದಲಾದ ತತ್ವವ ತಿಳಿಸಿದೆ
ತನುವಿನೊಳಗೆ ನೀನೆ ತಿಳಿದು ನಿತ್ಯದಲ್ಲಿ
ಜನರನ್ನು ಪಾಲಿಸುವ ಕಪಿಲಾಖ್ಯನೆ
ಅನುದಿನ ನಿನ್ನ ಧ್ಯಾನವ ಮಾಡಿ ಮಣಿಯಿಂದ
ಎಣಿಸುವ ಸುಜನಕ್ಕೆ ಜ್ಞಾನ ಕೊಡುವೆ
ಎಣೆಗಾಣೆ ನಿನ್ನ ಲೋಚನದ ಶಕ್ತಿಗೆ ಸಗರ -
ಜನಪನಂದನರನ್ನು ಭಂಗಿಸಿದೆ
ಅನುಮಾನವಿದಕಿಲ್ಲ ನಿನ್ನ ನಂಬಿದ ಮೂಢ
ಮನುಜನಿಗೆ ಮಹಪದವಿ ಬರುವುದೈಯ್ಯಾ
ಮುನಿಕುಲೋತ್ತಮ ಕಪಿಲ ವಿಜಯವಿಠ್ಠಲರೇಯ
ಎನಗೆ ಯೋಗಮಾರ್ಗ ತೋರು ತವಕದಿಂದ ॥ 3 ॥
ಅಟ್ಟತಾಳ
ಕಪಿಲ ಕಪಿಲಯೆಂದು ಪ್ರಾತಃ ಕಾಲದಲೆದ್ದು
ಸಪುತಸಾರಿ ನಾಲಿಗೆಲಿ ನುಡಿದ ಮಾನವನಿಗೆ
ಅಪಜಯ ಮೊದಲಾದ ಕ್ಲೇಶಗಳೊಂದಿಲ್ಲ
ಅಪರಿಮಿತ ಸೌಖ್ಯ ಅವನ ಕುಲಕೋಟಿಗೆ
ಗುಪುತ ನಾಮವಿದು ಮನದೊಳಗಿಡುವುದು
ಕಪಟ ಜೀವರು ಈತನ ಒಬ್ಬ ಋಷಿಯೆಂದು
ತಪಿಸುವರು ಕಾಣೊ ನಿತ್ಯ ನರಕದಲ್ಲಿ
ಕೃಪಣವತ್ಸಲ ನಮ್ಮ ವಿಜಯವಿಠ್ಠಲರೇಯಾ
ಕಪಿಲಾವತಾರನು ಬಲ್ಲವಗೆ ಬಲು ಸುಲಭ ॥ 4 ॥
ಆದಿತಾಳ
ಬಲಹಸ್ತದಲ್ಲಿ ಯಜ್ಞಶಾಲೆಯಲ್ಲಿ ಕಂ -
ಗಳ ಕಪ್ಪಿನಲ್ಲಿ ಹೃದಯಸ್ಥಾನ ನಾಭಿಯಲ್ಲಿ
ಜಲಧಿ ಗಂಗಾ ಸಂಗಮದಲ್ಲಿ ಗಮನದಲ್ಲಿ
ತುಲಸಿ ಪತ್ರದಲ್ಲಿ ತುರಗ ತುರುವಿನಲ್ಲಿ
ಮಲಗುವ ಮನೆಯಲ್ಲಿ ನೈವೇದ್ಯ ಸಮಯದಲ್ಲಿ
ಬಲುಕರ್ಮಬಂಧಗಳು ಮೋಚಕವಾಗುವಲ್ಲಿ
ಚೆಲುವನಾದವನಲ್ಲಿ ವಿದ್ಯೆಪೇಳುವನಲ್ಲಿ
ಫಲದಲ್ಲಿ ಪ್ರತಿಕೂಲ ಇಲ್ಲದ ಸ್ಥಳದಲ್ಲಿ
ಬೆಳೆದ ದರ್ಭಗಳಲ್ಲಿ ಅಗ್ನಿಯಲ್ಲಿ ಹರಿವ -
ಜಲದಲ್ಲಿ ಜಾಂಬುನದ ನದಿಯಲ್ಲಿ ಶ್ಲೋಕದಲ್ಲಿ
ಬಲಿಮುಖ ಬಳಗದಲ್ಲಿ ಆಚಾರ ಶೀಲನಲ್ಲಿ
ಘಳಿಗೆ ಆರಂಭದಲ್ಲಿ ಪಶ್ಚಿಮ ಭಾಗದಲ್ಲಿ
ಪೊಳೆವ ಮಿಂಚಿನಲ್ಲಿ ಬಂಗಾರದಲ್ಲಿ ಇನಿತು
ಕಾಲಕಾಲಕ್ಕೆ ಬಿಡದೆ ಸ್ಮರಿಸು ಕಪಿಲ ರೂಪಾತ್ಮನ್ನ
ಗೆಲುವುಂಟು ನಿನಗೆಲವೋ ಸಂಸಾರದಿಂದ ವೇಗ
ಕಲಿಯುಗದೊಳಗಿದೆ ಕೊಂಡಾಡಿದವರಿಗೆ
ಖಳರ ಅಂಜಿಕೆಯಿಲ್ಲ ನಿಂದಲ್ಲಿ ಶುಭಯೋಗ
ಬಲವೈರಿನುತ ನಮ್ಮ ವಿಜಯವಿಠ್ಠಲರೇಯ
ಇಳಿಯೊಳು ಕಪಿಲನಾಗಿ ನಮ್ಮ ಭಾರವೊಹಿಸುವ ॥ 5 ॥
ಜತೆ
ತಮಪರಿಚ್ಛೇದ ಈತನ ಸ್ಮರಣೆ, ನೋಡು ಹೃ -
ತ್ಕಮಲದೊಳಗೆ ವಿಜಯವಿಠ್ಠಲ ನ್ನ ಚರಣಾಬ್ಜ ॥
***
pallavi
siddhidAyaka (kapila shuLAdi). rAgA: ? no given tALA. Vijayadasa.
1: siddhidAyaka shiSyajana paripAla paramA shuddAtmA suguNa sAndra sukha vAridi
nidrarahitanidrA ramaNa nirvikAra ciddeha sarvakAla sundara sAra padmasambhava bali prakSAlita pAda mahA
hradrOga nAsha vaikuNThavAsa vidyAtIta vishwanATaka nArAyaNA vidya uddAraka udadi sadanA
siddAdi vinuta santata pAtALavAsi buddi vishAla mahima pApahAri kadhyOta varNa sakala vyAptA AkAsha amita
badda vichcheda nAnA roopAtmakA advaita kAyA mAyAramaNa rAjIvanEtrA advaya anaadi puruShA citra
kardama muNisUnu vijaya viThThala kapila nirdoSha karunAbdi sarvarAdAri
caraNam 2
aadi manvantaradi janisida mahadaiva Adi para bomma bomanayya jIyA
sAdhu janara priya santata munitilakA bhOdA sharIra bhakutara manohara
hari mAdhava siri vijaya viThThala vimalEshA mOdamati koDuva kapila bhagavanmUrti
caraNam 3
ghana mahima ghauNANDadolage leeleyinda janisi merede biMdu sarovaradalli
minuguva dwayahasta aprAkrata kAyA inanante oppuva shiroruhavO
kanaka puththaliyante kAnti tribhuvanakke anavarata tumbi susutalidako
janani devahutige upadeshavanu mADi guNa modalAda tatvava tiliside
tanuvinolage nIne tilidu tilide nitya janaranna pAlisuva kapilaakhyane
anudinadi ninna dhyAnava mADi maNiyinda yenisuva sujanakke jyAna koDuve
eNegANe ninna locanada shaktige sagara janapa nandanarannu bhangiside
anumAnavidakilla ninna nambida mUDha-manujanige maha padavi baruvadaiyya
muni kulottama kapila vijayaviThThalarEya enege yOgamArga tOru tavakadinda
caraNam 4
kapila kapilayendu pAtahkAladaleddu saputa sArigeli nuDida manavanige apajaya
modalAda kleshagaLondillA aparimita soukhya avana kulakoTige guputa nAmavidu
manadoLagiDuvadu kapaTa jIvaru itanu obba riSi endu tapisuvaru kANo nitya narakadalli
kripaNavatsala namma vijayaviThThala rEyAkapilAvatAranu ballavage balu sulabha
caraNam 5
bala hastadalli yajya shAleyalli kangala kappinalli hrudaya stAna nAbhiyalli jaladi
gangAsangamadalli gamanadalli tulasipatradalli turaga turuvinalli malaguva maneyalli
naivEdya samayadalli balukarma bandagalu mOcakavAguvalli celuvanAdavanalli
vidya pEluvanalli phaladalli pratikUla illada sthaladalli beleda darbhegaLalli agniyalli
hariva jaladalli jAmbunada nadiyalli shlOkadalli balimukha balagadalli AchAra shIlanalli
caraNam 6
ghalige Arambhadalli pascima bhAgadalli poleva mincinalli bangAradalli initu kAla kAlakke
biDade smarisu kapila paramAtmanna geluvuNTu ninagelavo samsAradinda vEga kaliyugadoLagida
koNDADidavarige khaLara anjikeyilla nindalli shubhayOga balavairi nuta namma
vijayaviThThala rEya iLeyoLage kapilAvatAranAgi namma bhAravahisuva
tama pariccheda Itana smaraNe noDu hrtkamaladoLage vijayaviThalanna caraNAbjA
***
ಶ್ರೀ ಕಪಿಲದೇವರ ಸ್ತೋತ್ರ ಸುಳಾದಿ (ಶ್ರೀ ವಿಜಯದಾಸರು)
ಶ್ರೀ ಕಪಿಲದೇವರ ಸ್ತೋತ್ರ ಸುಳಾದಿ (ಶ್ರೀ ವಿಜಯದಾಸರು)
ಸಿದ್ಧಿದಾಯಕ ಶಿಷ್ಯಜನ ಪರಿಪಾಲ ಪರಮಾ
ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿ
ನಿದ್ರಾರಹಿತ ನಿದ್ರಾರಮಣ ನಿರ್ವಿಕಾರ
ಚಿದ್ದೇಹ ಸರ್ವಕಾಲ ಸುಂದರಸಾರ
ಪದ್ಮಸಂಭವ ಬಲಿ ಪ್ರಕ್ಷಾಲಿತ ಪಾದ ಮಹಾ
ಹೃದ್ರೋಗನಾಶ ವೈಕುಂಠವಾಸ
ವಿದ್ಯಾತೀತ ವಿಶ್ವನಾಟಕ ನಾರಾಯಣ
ವಿದ್ಯ ಉದ್ಧಾರಕೆ ಉದಧಿ ಸದನಾ
ಸಿದ್ಧಾದಿ ವಿನುತ ಸಂತತ ಪಾತಾಳವಾಸಿ
ಬುದ್ಧಿ ವಿಶಾಲ ಮಹಿಮ ಪಾಪಹಾರಿ
ಖದ್ಯೋತವರ್ಣ ಸಕಲ ವ್ಯಾಪ್ತ ಆಕಾಶ ಅಮಿತ
ಬದ್ಧ ವಿಚ್ಛೇದ ನಾನಾ ರೂಪಾತ್ಮಕಾ
ಅದ್ವೈತಕಾಯಾ ಮಾಯಾರಮಣ ರಾಜೀವ ನೇತ್ರಾ
ಅದ್ವೈಯ ಅನಾದಿ ಪುರುಷ ಚಿತ್ರ
ಕರ್ದಮ ಮುನಿಸೂನು ವಿಜಯ ವಿಠ್ಠಲ ಕಪಿಲ
ನಿರ್ದೋಷಕರುಣಾಬ್ಧಿ ಸರ್ವರಾಧಾರಿ || ೧ ||
ತಾಳ – ಮಟ್ಟ
ಆದಿಮನ್ವಂತರದಿ ಜನಿಸಿದ ಮಹದೈವ
ಆದಿಪೊರಬೊಮ್ಮ ಬೊಮ್ಮನಯ್ಯ ಜೀಯಾ
ಸಾಧುಜಾನರ ಪ್ರಿಯಾ ಸಂತತ ಮುನಿತಿಲಕಾ
ಬೋಧ ಶರೀರ ಭಕುತ ಮನೋಹರ ಹರಿ
ಮಾಧವ ಸಿರಿ ವಿಜಯ ವಿಠ್ಠಲ ವಿಮಲೇಶಾ
ಮೋದ ಮತಿಯ ಕೊಡುವ ಕಪಿಲ ಭಗವನ್ಮೂರ್ತಿ || ೨ ||
ತಾಳ – ತ್ರಿವಿಡಿ
ಘನಮಹಿಮ ಗೌಣಾಂಡದೊಳಗೆ ಲೀಲೆಯಿಂದ
ಜನಿಸಿ ಮೆರೆದೆ ಬಿಂದು ಸರೋವರದಲ್ಲಿ
ಮಿನುಗುವ ದ್ವಯ ಹಸ್ತ ಅಪ್ರಾಕೃತ ಕಾಯ
ಇನನಂತೆ ಒಪ್ಪುವ ಶಿರೋರುಹವೋ
ಕನಕ ಪುತ್ಥಳಿಯಂತೆ ಕಾಂತಿ ತ್ರಿಭುವನಕ್ಕೆ
ಅನವರತ ತುಂಬಿ ಸೂಸುತಲಿದಕೋ
ಜನನಿ ದೇವಹೂತಿಗೆ ಉಪದೇಶವನು ಮಾಡಿ
ಗುಣ ಮೊದಲಾದ ತತ್ವ ತಿಳಿಸಿದೆ
ತನುವಿನೊಳಗೆ ನೀನೆ ತಿಳಿದು ತಿಳಿದೆ ನಿತ್ಯ
ಜನರನ್ನು ಪಾಲಿಸುವ ಕಪಿಲಾಖ್ಯನೆ
ಅನುದಿನ ನಿನ್ನ ಧ್ಯಾನವ ಮಾಡಿ ಮಣಿಯಿಂದ
ಎಣಿಸುವ ಸುಜನಕ್ಕೆ ಜ್ಞಾನ ಕೊಡುವೆ
ಎನೆಗಾಣೆ ನಿನ್ನ ಲೋಚನದ ಶಕ್ತಿಗೆ ಸಗರ
ಜನಪ ನಂದನರನ್ನು ಭಂಗಿಸಿದೆ
ಅನುಮಾನವಿದಕಿಲ್ಲ ನಿನ್ನ ನಂಬಿದ ಮೂಢ
ಮನುಜನಿಗೆ ಮಹಪದವಿ ಬರುವದಯ್ಯ
ಮುನಿಕುಲೋತ್ತಮ ಕಪಿಲ ವಿಜಯ ವಿಠ್ಠಲರೇಯ
ಎನಗೆ ಯೋಗ ಮಾರ್ಗವನು ತೋರೊ ತವಕದಿಂದ || ೩ ||
ತಾಳ – ಅಟ್ಟ
ಕಪಿಲ ಕಪಿಲಯೆಂದು ಪ್ರಾತಃಕಾಲದಲೆದ್ದು
ಸಪುತ ಸಾರಿಗೆಯಲಿ ನುಡಿದ ಮಾನವನಿಗೆ
ಅಪಜಯ ಮೊದಲಾದ ಕ್ಲೇಶಗಳೊಂದಿಲ್ಲಾ
ಅಪರಮಿತ ಸೌಖ್ಯ ಅವನ ಕುಲಕೋಟಿಗೆ
ಗುಪುತ ನಾಮವಿದು ಮನದೊಳಗಿಡುವುದು
ಕಪಟ ಜೀವರು ಈತನು ಒಬ್ಬ ಋಷಿಯೆಂದು
ತಪಿಸುವರು ಕಾಣೋ ನಿತ್ಯ ನರಕದಲ್ಲಿ
ಕೃಪಣ ವತ್ಸಲ ನಮ್ಮ ವಿಜಯ ವಿಠ್ಠಲರೇಯ
ಕಪಿಲಾವತಾರ ಬಲ್ಲವಗೆ ಬಲು ಸುಲಭ || ೪ ||
ತಾಳ – ಆದಿ
ಬಲ ಹಸ್ತದಲ್ಲಿ ಯಜ್ಞಶಾಲೆಯಲ್ಲಿ ಕಂ
ಗಳಕಪ್ಪಿನಲ್ಲಿ ಹೃದಯಸ್ಥಾನ ನಾಭಿಯಲ್ಲಿ
ಜಲಧಿ ಗಂಗಾ ಸಂಗಮದಲ್ಲಿ ಗಮನದಲ್ಲಿ
ತುಲಸಿ ಪತ್ರದಲ್ಲಿ ತುರಗ ತುರುವಿನಲ್ಲಿ
ಮಲಗುವ ಮನೆಯಲ್ಲಿ ನೈವೇದ್ಯ ಸಮಯದಲ್ಲಿ
ಬಲುಕರ್ಮ ಬಂಧಗಳು ಮೋಚಕವಾಗುವಲ್ಲಿ
ಚಲುವನಾದವನಲ್ಲಿ ವಿದ್ಯೆ ಪೇಳುವನಲ್ಲಿ
ಫಲದಲ್ಲಿ ಪ್ರತಿಕೂಲವಿಲ್ಲದ ಸ್ಥಳದಲ್ಲಿ
ಬೆಳೆದ ದರ್ಭಗಳಲ್ಲಿ ಅಗ್ನಿಯಲ್ಲಿ ಹರಿವ
ಜಲದಲ್ಲಿ ಜಾಂಬುದ ನದಿಯಲ್ಲಿ ಶ್ಲೋಕದಲ್ಲಿ
ಬಲಿಮುಖ ಬಳಗದಲ್ಲಿ ಆಚಾರಶೀಲನಲ್ಲಿ
ಘಳಿಗೆ ಆರಂಭದಲ್ಲಿ ಪಶ್ಚಿಮ ಭಾಗದಲ್ಲಿ
ಪೊಳೆವ ಮಿಂಚಿನಲ್ಲಿ ಬಂಗಾರದಲ್ಲಿ ಇನಿತು
ಕಾಲ ಕಾಲಕ್ಕೆ ಬಿಡದೆ ಸ್ಮರಿಸು ಕಪಿಲ ಪರಮಾತ್ಮನ್ನ
ಗೆಲವುಂಟು ನಿನಗೆಲವೊ ಸಂಸಾರದಿಂದ ವೇಗ
ಕಲಿಯುಗದೊಳಗಿದೆ ಕೊಂಡಾಡಿದವರಿಗೆ
ಖಳರ ಅಂಜಿಕೆಯಿಲ್ಲ ನಿಂದಲ್ಲೆ ಶುಭಯೋಗ
ಬಲವೈರಿನುತ ನಮ್ಮ ವಿಜಯ ವಿಠ್ಠಲರೇಯಾ
ಇಳೆಯೊಳಗೆ ಕಪಿಲಾವತಾರನಾಗಿ ನಮ್ಮ ಭಾರವಹಿಸಿದ || ೫ ||
ಜತೆ
ತಮ ಪರಿಚ್ಛೇದ ಈತನ ಸ್ಮರಣೆ ನೋಡು ಹೃ-
ತ್ಕಮಲದೊಳಗೆ ವಿಜಯ ವಿಠ್ಠಲನ್ನ ಚರಣಾಬ್ಜಾ || ೬ ||
***********
***********
No comments:
Post a Comment