ಗಯಾ ವಿಷ್ಣು ಪಾದದ ಮಹಿಮೆಯನ್ನು ತಿಳಿಸುವ ವಿಜಯದಾಸರ ಸುಳಾದಿ
ಗಯಾ ವಿಷ್ಣು ಪಾದ ಮಹಿಮೆ ಸುಳಾದಿ
ಪಿತೃ ಕಾರ್ಯ ಮಾಡಬೇಕಾದ ಸಮಯದಲ್ಲಿ ಇದನ್ನು ಸಹ ಪಾರಾಯಣ ಮಾಡಬಹುದು. ಇದರಲ್ಲಿ ಭಗವಂತನ ಪಾದದ ವರ್ಣನೆ ಬಹಳ ಸುಂದರವಾಗಿ ಸೊಗಸಾಗಿ ಶ್ರೀ ವಿಜಯದಾಸರು ವರ್ಣನೆ ಮಾಡಿದ್ದಾರೆ. ಇದು ಅವರು (ವಿಜಯದಾಸ) ಗಯೆಗೆ ತಮ್ಮ ಪರಿವಾರದವರು ಜೊತೆಯಲ್ಲಿ ಹೋದಾಗ, ಈ ಸುಳಾದಿಯನ್ನು ರಚಿಸಿ,ಇದರ ಬಗ್ಗೆ ವಿವರಣೆ ನೀಡಿ ತಮ್ಮ ಜೊತೆಯಲ್ಲಿ ಇದ್ದವರಿಗೆ ಪಿತೃ ಕಾರ್ಯ ಮಾಡಲು ಮಹಾ ಶ್ರದ್ಧೆ ಹುಟ್ಟಿಸಿದರು.ಅಂತ ಹಿರಿಯರು ಹೇಳಿದ್ದು.
ಧ್ರುವತಾಳ|೧|
ಜಗವೆಲ್ಲ ವ್ಯಾಪಿಸಿದ ಬಲು ಅತೀಂದ್ರಿಯಪಾದ |
ಪಗೆಗಳ ಮಸ್ತಕಾದ್ರಿಗೆ ವಜ್ರಪ್ರಹರಪಾದ |
ಝಗಝಗಿಸುವ ಪರಮಮಂಗಳ ಖಣಿಯ ಪಾದ |
ನಿಗಮಾವಳಿಗೆ ಇದು ನಿಲುಕದ ಪಾದ |
ಅಗಣಿತಗುಣಪೂರ್ಣ ಸೌಮ್ಯಪಾದ |
ತ್ರಿಗುಣಾತೀತವಾದ ಶೃಂಗಾರನಿಧಿಪಾದ |
ಗಗನ ನದಿಯ ಪೆತ್ತ ಗಂಭೀರ ಪಾದ |
ಖಗರಾಜನ ದಿವ್ಯ ಪೆಗಲಲ್ಲಿ ಪೊಳೆವ ಪಾದ |
ಯುಗಯುಗದಲ್ಲಿ ಇಲ್ಲಿ ಪೂಜೆಗೊಂಬುವ ಪಾದ |
ಬಗೆ ಬಗೆ ವರಗಳ ಕೊಡುವ ಪಾದ |
ಮಿಗೆ ಸಾಹಸವುಳ್ಳ ಮಿಸುಣಿಯಾಭರಣ ಪಾದ|
ಅಘದೂರ ಪಾದ ಅತಿ ಚಿತ್ರ ಪಾದ|
ನಗವೈರಿನುತ ನಮ್ಮ ವಿಜಯವಿಠಲ
ಪನ್ನಗ ಶಾಯಿಯ ಪಾದ ವಿಷ್ಣುಪಾದ
ಮಟ್ಟತಾಳ||೨||
ಧರ್ಮಶಿಲೆಯ ಮೇಲೆ ಮೆರೆವ ಮಣಿಯ ಪಾದ |
ಕರ್ಮ ಖಂಡನೆ ಮಾಳ್ಪ ಕಲುಷವಿಗತಪಾದ|
ಕರ್ಮವರ್ಮ ಮರ್ಮ ಕರ್ಮ ಸಂಗದ ಪಾದ |
ಪೇರ್ಮೆಯುನ್ನತವಾದ ಪ್ರೇಮ ಭರಿತ ಪಾದ |
ಕೂರ್ಮರೂಪ ನಮ್ಮ ವಿಜಯವಿಠಲರೇಯನ |
ಧರ್ಮ ಮೂರುತಿಯ ಪಾದ ಸಿರಿಪಾದ
ತ್ರಿವಿಡಿತಾಳ||೩||
ದಹರಾಕಾಶದಲ್ಲಿ ಮಿಂಚುವ ಘನಪಾದ |
ಬಹು ಗಮನವಾಗಿದ್ದ ಭಾಗ್ಯಪಾದ |
ಅಹೋರಾತ್ರಿಯಲಿ ಬಿಡದೆ ಆನಂದದ ಪಾದ |
ಮಹಪುಣ್ಯತಂದೀವ ಮಂತ್ರಪಾದ |
ದ್ರೋಹಿ ಮಾನವರಿಗೆ ದೂರವಾದ ಪಾದ |
ಗಹನವಾದಪಾದ ಗುಪ್ತಪಾದ |
ಸ್ನೇಹಭಾವದಿಂದ ಸಾಕುವ ನಿಧಿಪಾದ |
ರಹಸ್ಯವಾಗಿ ಜಪಿಸುವ ಪಾದ |
ತ್ರಾಹಿತಾವರೆನಯನ ವಿಜಯವಿಠಲ ಸರಸಿ |
ರುಹ ಪೋಲುವಪಾದ ಆರ್ಜವಪಾದ
ಅಟ್ಟತಾಳ||೪|
ಅಸುರಗಯನ ಶಿರದಲ್ಲಿನಿಂದ ಪಾದ |
ಎಸೆವ ಹದಿನೆಂಟು ಪಾದದೊಳಿಪ್ಪ ಪಾದ |
ಶಶಿಮುಖಿ ಗೋಪೇರಮನಕೆ ಮೋಹನಪಾದ |
ವಶವಾಗಿ ಭಕ್ತರ ಬಳೀಯಲಿಪ್ಪ ಪಾದ |
ವಿಷವರ್ಜಿತ ವಿಲಕ್ಷಣ ಪಾದ |
ಬೆಸನೆಲಾಲಿಸಿ ಲಾಲನೆಮಾಡುವ ಪಾದ |
ಅಸಮದೈವ ನಮ್ಮ ವಿಜಯವಿಠಲರೇಯಾ |
ಪೆಸರಾದ ಪಾದ ಪರಮಸೌಖ್ಯಪಾದ
ಆದಿತಾಳ||೫||
ಎಲ್ಲರಿಂದಲಿ ಪಿಂಡ ಹಾಕಿಸಿಕೊಂಬ ಪಾದ |
ಮಲ್ಲ ಮೊದಲಾದ ಖಳರ ಜೈಸಿದ ಪಾದ |
ಮೆಲ್ಲಮೆಲ್ಲನೆ ಶುದ್ಧಸ್ತೋತ್ರ ಕೈಕೊಂಬ ಪಾದ |
ಸಲ್ಲಲಿತ ಪಾದ ಸರ್ವ ಸೌಕಾರ್ಯ ಪಾದ |
ಎಲ್ಲೆಲ್ಲಿ ನೋಡಿದರೂ ವ್ಯಕ್ತವಾದ ಪಾದ |
ಬಲ್ಲಿದ ಹರಿ ನಮ್ಮ ವಿಜಯವಿಠಲರೇಯ |
ವಲ್ಲಭನ ಪಾದ ವಜ್ರಾಂಕಿತಪಾದ
ಜತೆ
ಫಲ್ಗುಣಿ ತೀರದಲಿ ಮೆರೆವ ಮಹತ್ತು ಪಾದ |
ಫಲ್ಗುಣ ಸಾರಥಿ ವಿಜಯವಿಠಲನ ಪಾದ||
**************
Audio by Mrs. Nandini Sripad
ಪಿತೃ ಕಾರ್ಯ ಮಾಡಬೇಕಾದ ಸಮಯದಲ್ಲಿ ಇದನ್ನು ಸಹ ಪಾರಾಯಣ ಮಾಡಬಹುದು. ಇದರಲ್ಲಿ ಭಗವಂತನ ಪಾದದ ವರ್ಣನೆ ಬಹಳ ಸುಂದರವಾಗಿ ಸೊಗಸಾಗಿ ಶ್ರೀ ವಿಜಯದಾಸರು ವರ್ಣನೆ ಮಾಡಿದ್ದಾರೆ. ಇದು ಅವರು (ವಿಜಯದಾಸ) ಗಯೆಗೆ ತಮ್ಮ ಪರಿವಾರದವರು ಜೊತೆಯಲ್ಲಿ ಹೋದಾಗ, ಈ ಸುಳಾದಿಯನ್ನು ರಚಿಸಿ,ಇದರ ಬಗ್ಗೆ ವಿವರಣೆ ನೀಡಿ ತಮ್ಮ ಜೊತೆಯಲ್ಲಿ ಇದ್ದವರಿಗೆ ಪಿತೃ ಕಾರ್ಯ ಮಾಡಲು ಮಹಾ ಶ್ರದ್ಧೆ ಹುಟ್ಟಿಸಿದರು.ಅಂತ ಹಿರಿಯರು ಹೇಳಿದ್ದು.
ಧ್ರುವತಾಳ|೧|
ಜಗವೆಲ್ಲ ವ್ಯಾಪಿಸಿದ ಬಲು ಅತೀಂದ್ರಿಯಪಾದ |
ಪಗೆಗಳ ಮಸ್ತಕಾದ್ರಿಗೆ ವಜ್ರಪ್ರಹರಪಾದ |
ಝಗಝಗಿಸುವ ಪರಮಮಂಗಳ ಖಣಿಯ ಪಾದ |
ನಿಗಮಾವಳಿಗೆ ಇದು ನಿಲುಕದ ಪಾದ |
ಅಗಣಿತಗುಣಪೂರ್ಣ ಸೌಮ್ಯಪಾದ |
ತ್ರಿಗುಣಾತೀತವಾದ ಶೃಂಗಾರನಿಧಿಪಾದ |
ಗಗನ ನದಿಯ ಪೆತ್ತ ಗಂಭೀರ ಪಾದ |
ಖಗರಾಜನ ದಿವ್ಯ ಪೆಗಲಲ್ಲಿ ಪೊಳೆವ ಪಾದ |
ಯುಗಯುಗದಲ್ಲಿ ಇಲ್ಲಿ ಪೂಜೆಗೊಂಬುವ ಪಾದ |
ಬಗೆ ಬಗೆ ವರಗಳ ಕೊಡುವ ಪಾದ |
ಮಿಗೆ ಸಾಹಸವುಳ್ಳ ಮಿಸುಣಿಯಾಭರಣ ಪಾದ|
ಅಘದೂರ ಪಾದ ಅತಿ ಚಿತ್ರ ಪಾದ|
ನಗವೈರಿನುತ ನಮ್ಮ ವಿಜಯವಿಠಲ
ಪನ್ನಗ ಶಾಯಿಯ ಪಾದ ವಿಷ್ಣುಪಾದ
ಮಟ್ಟತಾಳ||೨||
ಧರ್ಮಶಿಲೆಯ ಮೇಲೆ ಮೆರೆವ ಮಣಿಯ ಪಾದ |
ಕರ್ಮ ಖಂಡನೆ ಮಾಳ್ಪ ಕಲುಷವಿಗತಪಾದ|
ಕರ್ಮವರ್ಮ ಮರ್ಮ ಕರ್ಮ ಸಂಗದ ಪಾದ |
ಪೇರ್ಮೆಯುನ್ನತವಾದ ಪ್ರೇಮ ಭರಿತ ಪಾದ |
ಕೂರ್ಮರೂಪ ನಮ್ಮ ವಿಜಯವಿಠಲರೇಯನ |
ಧರ್ಮ ಮೂರುತಿಯ ಪಾದ ಸಿರಿಪಾದ
ತ್ರಿವಿಡಿತಾಳ||೩||
ದಹರಾಕಾಶದಲ್ಲಿ ಮಿಂಚುವ ಘನಪಾದ |
ಬಹು ಗಮನವಾಗಿದ್ದ ಭಾಗ್ಯಪಾದ |
ಅಹೋರಾತ್ರಿಯಲಿ ಬಿಡದೆ ಆನಂದದ ಪಾದ |
ಮಹಪುಣ್ಯತಂದೀವ ಮಂತ್ರಪಾದ |
ದ್ರೋಹಿ ಮಾನವರಿಗೆ ದೂರವಾದ ಪಾದ |
ಗಹನವಾದಪಾದ ಗುಪ್ತಪಾದ |
ಸ್ನೇಹಭಾವದಿಂದ ಸಾಕುವ ನಿಧಿಪಾದ |
ರಹಸ್ಯವಾಗಿ ಜಪಿಸುವ ಪಾದ |
ತ್ರಾಹಿತಾವರೆನಯನ ವಿಜಯವಿಠಲ ಸರಸಿ |
ರುಹ ಪೋಲುವಪಾದ ಆರ್ಜವಪಾದ
ಅಟ್ಟತಾಳ||೪|
ಅಸುರಗಯನ ಶಿರದಲ್ಲಿನಿಂದ ಪಾದ |
ಎಸೆವ ಹದಿನೆಂಟು ಪಾದದೊಳಿಪ್ಪ ಪಾದ |
ಶಶಿಮುಖಿ ಗೋಪೇರಮನಕೆ ಮೋಹನಪಾದ |
ವಶವಾಗಿ ಭಕ್ತರ ಬಳೀಯಲಿಪ್ಪ ಪಾದ |
ವಿಷವರ್ಜಿತ ವಿಲಕ್ಷಣ ಪಾದ |
ಬೆಸನೆಲಾಲಿಸಿ ಲಾಲನೆಮಾಡುವ ಪಾದ |
ಅಸಮದೈವ ನಮ್ಮ ವಿಜಯವಿಠಲರೇಯಾ |
ಪೆಸರಾದ ಪಾದ ಪರಮಸೌಖ್ಯಪಾದ
ಆದಿತಾಳ||೫||
ಎಲ್ಲರಿಂದಲಿ ಪಿಂಡ ಹಾಕಿಸಿಕೊಂಬ ಪಾದ |
ಮಲ್ಲ ಮೊದಲಾದ ಖಳರ ಜೈಸಿದ ಪಾದ |
ಮೆಲ್ಲಮೆಲ್ಲನೆ ಶುದ್ಧಸ್ತೋತ್ರ ಕೈಕೊಂಬ ಪಾದ |
ಸಲ್ಲಲಿತ ಪಾದ ಸರ್ವ ಸೌಕಾರ್ಯ ಪಾದ |
ಎಲ್ಲೆಲ್ಲಿ ನೋಡಿದರೂ ವ್ಯಕ್ತವಾದ ಪಾದ |
ಬಲ್ಲಿದ ಹರಿ ನಮ್ಮ ವಿಜಯವಿಠಲರೇಯ |
ವಲ್ಲಭನ ಪಾದ ವಜ್ರಾಂಕಿತಪಾದ
ಜತೆ
ಫಲ್ಗುಣಿ ತೀರದಲಿ ಮೆರೆವ ಮಹತ್ತು ಪಾದ |
ಫಲ್ಗುಣ ಸಾರಥಿ ವಿಜಯವಿಠಲನ ಪಾದ||
**************
No comments:
Post a Comment