Sunday, 8 December 2019

ಅಂಜುವೆವು ನಿನ್ನ ಕಪಟ vijaya vittala suladi ಭಕ್ತ್ಯಾತ್ಮಕ ಸುಳಾದಿ ANJUVEVU NINNA KAPATA BHAKYAATMAKA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಭಕ್ತ್ಯಾತಿಶಯ ಸುಳಾದಿ/ಭಕ್ತ್ಯಾತ್ಮಕ ಸುಳಾದಿ

( ಶ್ರೀಪರಮಾತ್ಮನ ಗುಣಾತಿಶಯ ವರ್ಣನಾಪೂರ್ವಕ ಭಕ್ತ್ಯಾತಿಶಯಯುಕ್ತ ವ್ಯಂಗ್ಯಸ್ತೋತ್ರಯುಕ್ತ ಆರ್ತ ಪ್ರಾರ್ಥನೆ )

 ರಾಗ ರೀತಿಗೌಳ 

 ಧ್ರುವತಾಳ 

ಅಂಜುವೆವು ನಿನ್ನ ಕಪಟನಾಟಕತನಕೆ 
ಅಂಜುವೆವು ನಿನ್ನ ಮಾಯದ ಲೀಲೆಗೆ
ಅಂಜುವೆವು ನಿನ್ನ ಅದ್ಭುತ ಕರ್ಮಕ್ಕೆ
ಅಂಜುವೆವು ನಿನ್ನ ಅಗಣಿತ ಗುಣಕ್ಕೆ
ಅಂಜುವೆವು ನಿನ್ನ ಕಾಲಾಖ್ಯ ರೂಪಕ್ಕೆ
ಅಂಜುವೆವು ಅಂಜಿ ಅಂಜಾಲಿಬೇಕು ನಿನ್ನ ಧೊರೆತನಕ್ಕೆ
ಪ್ರಾಂಜಲಿ ಮುಗಿದು ನಮೊ ನಮೊ ಎಂಬೆ
ಮುಂಜಿಯಾಗದ ಮುನ್ನ ಮಕ್ಕಳ ಪಡದೆ
ಸಂಜೆಯ ಮಾಡಿ ಸೈಂಧವನ ಕೊಂದು
ಅಂಜನೆಸುತ ಕೇತುವಿನ ಸಾಕಿದೆ
ಅಂಜುವೇವು ನಿನ್ನ ಮರೆ ಮೋಸತನಕ್ಕೆ
ಅಂಜನಾಭ ಖಂಡದೊಳು ಪುಟ್ಟಿಸಿ ಕರ್ಮ
ಭುಂಜಿಸಿ ಹಲುಬುವಂತೆ ಎನ್ನ ಮಾಡಿದಿ
ಕಂಜನಾಭನೆ ನಿನಗೇನನಬಾರದು
ಗಂಜಿಹಾಕುವೆನೆಂಬೊ ಗರ್ವಾವು ನಿನಗೆ
ಅಂಜದಲೆ ನಿನಗೆ ನುಡಿದೆನಾದಡೆ ಅದ -
ಕಂಜಿಕೆ ನಿನಗೇನು ಲೇಶವಿಲ್ಲ
ಗುಂಜಿದವರಿಗೆ ವಜ್ರಪಂಜರಾಗುವೆ
ಕುಂಜರವರದ ಶ್ರೀವಿಜಯವಿಠ್ಠಲ ಪ್ರಾ -
ಭಂಜನ್ನ ಪಾಪ ಜೀಮೂತಕ್ಕೆ ಅಜಿತಾ ॥ 1 ॥

 ಮಟ್ಟತಾಳ 

ಒಂದು ಕರ್ಮವನ್ನು ತಂದು ನಮಗೆ ಹಚ್ಚಿ
ಇಂದಿರೆ ರಮಣನೆ ಅಂದು ಸೃಜಿಸಿ ಜಗವ
ಒಂದೊಂದು ಪರಿಯಲ್ಲಿ ಮುಂದುಗೆಡಿಸಿ ಭವದ
ಸಿಂಧುವಿನೊಳಗಿಟ್ಟು ಪೊಂದಿಸಿದೆ ಹೀಗೆ
ನೊಂದು ನೋವಾದರು ಅಂದೇ ಒಲ್ಲದಲೆ
ಅಂದರೆ ನಿನಗದರಿಂದೇನಾಗುವದೊ
ತಂದೆಯ ತಂದೆ ವಿಜಯವಿಠ್ಠಲ ದೀನ -
ಬಂಧುವೆ ನಿನಗೊಮ್ಮೆ ಅಂದಾರೆ ಬಿಡುವ ॥ 2 ॥

 ರೂಪಕತಾಳ 

ಏನಾಗುವದು ನಿನಗೆ ನಾನಂದ ನುಡಿಗಳು
ಹಾನಿ ವೃದ್ಧಿಗಳಿಲ್ಲದ ಶ್ರೀ ನಾರಾಯಣ ಮೂರ್ತಿ
ಕೇಣಿಗೊಂಡಾನೀಚ ಮಾನವ ನಾನಯ್ಯ
ವಾನರ ಮನವೆನ್ನಾಧೀನವಲ್ಲವೆ ಕೇಳು
ಭಾನುಕುಲೋದ್ಭವ ವಿಜಯವಿಠ್ಠಲ ನಿನಗೆ
ಏನೇನು ಅಂದರೆ ಊನ ಆಗುವದೇನೊ ॥ 3 ॥

 ಝಂಪೆತಾಳ 

ಕಡಿಮೆ ಆಯುಷವೆಂದು ನುಡಿವೆನೆಂದಾದಡೆ
ಕಡೆಯಾವದು ನಿನ್ನ ದಿವಸಗಳಿಗೆ
ಕುಡಿಯಲಿ ನೀರು ದೊರಕಲಿ ಬ್ಯಾಡವೆಂಬೆನೆ
ಪಡದೆ ನಿನ್ನುಂಗುಟದಲಿ ಗಂಗೆಯ
ಒಡಲ ಕ್ಷುಧಿಯನ್ನ ವೆಗ್ಗಳಿಸಿದೆಂಬೆನೆ
ಬಿಡದೆ ಎಂದಿಗೂ ನೀನು ನಿತ್ಯತೃಪ್ತ
ಕಡು ದಾರಿದ್ರ್ಯನ್ನಾಗಿನ್ನಿರು ಪೋಗು ಎಂಬೆನೆ
ಒಡನೆ ಇಪ್ಪಳು ಲಕುಮಿ ನಿನ್ನಗಲದೆ
ಉಡಲಿ ವಸನವ ಕಾಣದಲೆ ಪೋಗು ಎಂಬೆನೆ
ಕಡುರಮ್ಯವಾದ ಪೀತಾಂಬರವೊ
ಬಡವನಲ್ಲ ನೀನು ವಿಜಯವಿಠ್ಠಲ ನಿನಗೆ
ಎಡಬಿಡದೆ ನುಡಿದವನು ಅವನೆ ದಾರಿದ್ರ ॥ 4 ॥

 ತ್ರಿವಿಡಿತಾಳ 

ಭೂಷಣವಿಲ್ಲದೆ ಪೋಗಲಿ ಏನಂಬೆನೆ
ದೋಷರಹಿತ ಅಪ್ರಾಕೃತ ಭೂಷಣ
ಲೇಸು ನಿನಗೆ ಆಗಲೆ ಪೋಗಲೆಂಬೆನೆ
ಲೇಸು ಕೊಡುವೆ ನೀನು ಬೊಮ್ಮಾದಿಗೆ
ಈ ಸಂಸಾರ ಪಾಶದೊಳಗಿರು ಎಂಬೆನೆ
ಏಸೇಸು ಸಂಸಾರಿಗಳನ ದಾಟಿಸುವೆ
ಹಾಸಿಕೆಯಿಲ್ಲದೆ ಪೋಗಲಿ ಎಂಬೆನೆ
ಶೇಷನೆ ನಿನಗಯ್ಯ ಘನ ಹಾಸಿಕೆ
ದ್ವೇಷಿಗಳ ಕೈಯ್ಯ ಸೋತು ಪೋಗೆಂಬೆನೆ
ನೀ ಸಮರ್ಥನು ಕಾಣೋ ನಿತ್ಯದಲ್ಲಿ
ಪಾಶಧರಾರ್ಚಿತ ವಿಜಯವಿಠ್ಠಲರೇಯ 
ಏಸುಪರಿ ಭಾಗ್ಯವಂತನು ನೀನಯ್ಯ ॥ 5 ॥

 ಅಟ್ಟತಾಳ 

ಧೊರೆತನ ನಿನಗೆ ಇಲ್ಲದೆ ಪೋಗಲಿಯಂಬೆನೆ
ಅರಸಾಗಿ ಸರ್ವರ ನೀನಂಜಿಸಿಕೊಂಬೆ
ಭರದಿಂದಲೇರುವ ರಥ ಬ್ಯಾಡವೆಂಬೆನೆ
ತಿರುಗುವ ಖಗರಾಜ ಈರೇಳು ಲೋಕವ
ಪರಿವಾರ ಇಲ್ಲದೆ ಇರು ನಿನಗೆಂಬೆನೆ
ಸುರರು ಮೊದಲಾದವರು ಸೇವಕರಯ್ಯ
ಅರಮನಿ ನಿನಗಾಗಲಿ ಬೇಡವೆಂಬಿನೆ
ಮಿರುಗುವ ತ್ರಿಧಾಮ ಜಗಕೆ ವಿರಹಿತ
ತರುಳ ಯವ್ವನ ಜರೆ ತನವಾಗಲಂಬೆನೆ
ಪರಮಪುರುಷ ನಿನ್ನ ಜನನ ಮತ್ತಾವದೋ
ಧರಾಧರ ವಿಜಯವಿಠ್ಠಲನಿಗೆ ಮಂದರು
ಅರಿಯಾದೆ ನುಡಿದು ಭವದೊಳಗಿಪ್ಪರು ॥ 6 ॥

 ಆದಿತಾಳ 

ಕುಲಗೋತ್ರದಿಂದ ನಿನ್ನ ಕೆಲಸಾರು ಎಂಬಿನೆ
ತಿಳಿಯಾದು ನಿನ್ನ ಕುಲಗೋತ್ರವೆನಗೆ
ಚಲುವನಾಗದೆ ಪೋಗು ಚನ್ನಿಗನೆಂಬೆನೆ
ಎಳೆ ನಖಕಾಂತಿಗೆ ಬೆಳಗುವದು ಲೋಕ
ಛಳಿ ಘಾಳಿ ಬಿಸಿಲು ತಾಕಲಿ ನಿನಗೆಂಬೆನೆ
ಒಳಗೆ ಹೊರಗೆ ನೀನೆ ಸರ್ವ ವ್ಯಾಪಕನು
ಶೆಳೆವ ಮೃತ್ಯು ನಿನ್ನ ತಡಹಲಿ ಎಂಬೆನೆ
ಬಲು ಮೃತ್ಯುಗಳ ನೀನೆ ತಲೆ ಮೆಟ್ಟಿ ಆಳುವೆ
ಸುಲಭನೆ ನಿನಗೊಂದು ಅಂದೆನೆಂದರೆ ಕಾಣೆ
ನೆಲೆಯಾವದು ನಿನ್ನ ಬಲವಂತತನಕ್ಕೆ
ಕುಲದೇವ ಕಮಲೇಶ ವಿಜಯವಿಠ್ಠಲರೇಯ 
ಸಲಿಗೆಲಿ ನುಡಿದೇನು ಸಲಹುವ ದಾತಾರ ॥ 7 ॥

 ಜತೆ 

ಸ್ತೋತ್ರ ರೂಪವಿದೆಂದು ನಿನ್ನ ಕೊಂಡಾಡಿದೆ
ಮಿತ್ರನಾಗಿ ಕಾಯೊ ವಿಜಯವಿಠ್ಠಲ ಪ್ರಭುವೆ ॥
**********

ಭಕ್ತ್ಯಾತ್ಮಕ ಸುಳಾದಿ

ಅಂಜುವೆವು ನಿನ್ನ ಕಪಟನಾಟಕ ತನಕೆ
ಅಂಜುವೆವು ನಿನ್ನ ಅದ್ಭುತ ಕರ್ಮಕ್ಕೆ
ಅಂಜುವೆವು ನಿನ್ನ ಅಗಣಿತ ಗುಣಕ್ಕೆ
ಅಂಜುವೆವು ನಿನ್ನ ಕಾಲಾಖ್ಯ ರೂಪಕ್ಕೆ
ಅಂಜುವೆವು ಅಂಜಿ ಅಂ[ಜ]ಲಿಬೇಕು ನಿನ್ನ ಧೊರತನಕ್ಕೆ
ಪ್ರಾಂಜಲಿ ಮುಗಿದು ನಮೋನಮೋಎಂಬೆ
ಮುಂಜಿಯಾಗದ ಮುನ್ನ ಮಕ್ಕಳ ಪಡದೆ
ಸಂಜೆಯಮಾಡಿ ಸೈಂಧವನ ಕೊಂದು
ಅಂ[ಜ]ನೆಸುತ ಕೇತುವಿನ ಸಾಕಿದೆ
ಅಂಜುವೆವು ನಿನ್ನ ಮರೆಮೋಸತನಕ್ಕೆ
ಅಂಜನಾಭ ಖಂಡದೊಳು ಪುಟ್ಟಿಸಿ ಕರ್ಮ
ಭುಂಜಿಸಿ ಹಲುಬುವಂತೆ ಎನ್ನ ಮಾಡಿದಿ
ಕಂಜನಾಭನೆ ನಿನಗೇ ಎನಬಾರದು
ಗಂಜಿಹಾಕುವೆನೆಂಬೊ ಗರ್ವಾವು ನಿನಗೆ
ಅಂಜದಲೆ ನಿನಗೆ ನುಡಿದೆನಾದಡೆ ಅದ
ಕಂಜಿಕೆ ನಿನಗೇನು ಲೇಶವಿಲ್ಲ
ಗುಂಜಿದವರಿಗೆ ವಜ್ರಪಂಜರಾಗುವೆ
ಕುಂಜರವರದ ಶ್ರೀ ವಿಜಯವಿಠ್ಠಲ, ಪ್ರಾ
ಭಂಜನ್ನ ಪಾಪ ಜೀಮೂತಕ್ಕೆ ಅಜಿತಾ ||
ಮಟ್ಟ ತಾಳ
ಒಂದು ಕರ್ಮವನ್ನು ತಂದು ನಮಗೆ ಹಚ್ಚಿ
ಇಂದಿರೆ ರಮಣನೆ ಅಂದು ಸೃಜಿಸಿ ಜಗವ
ಒಂದೊಂದು ಪರಿಯಲ್ಲಿ ಮುಂದುಗೆಡಿಸಿ ಭವದ
ಸಿಂಧುವಿನೊಳಗಿಟ್ಟು ಪೊಂದಿಸಿದೆ ಹೀಗೆ
ನೊಂದು ನೋವಾದರು ಅಂದೇ ಬಲ್ಲದಲೆ
ಅಂದರೆ ನಿನಗರಿಂದೇನಾಗುವದೊ
ತಂದೆ ತಂದೆಯ ತಂದೆ ವಿಜಯ ವಿಠ್ಠಲ ದೀನ
ಬಂಧುವೆ ನಿನಗೊಮ್ಮೆ ಅಂದಾರೆ ಬಿಡುವ ||

ರೂಪಕ ತಾಳ
ಏನಾಗುವದು ನಿನಗೆ ನಾನಂದ ನುಡಿಗಳು
ಹಾನಿ ವೃದ್ಧಿಗಳಿಲ್ಲದ ಶ್ರೀ ನಾರಾಯಣ ಮೂರ್ತಿ
ಕೇಣಿಗೊಂಡಾನೀಚ ಮಾನವ ನಾನಯ್ಯ
ಏನರ ಮನವೆನ್ನಾಧೀನವಲ್ಲವೆ ಕೇಳು
ಭಾನುಕುಲೋದ್ಭವ ವಿಜಯ ವಿಠಲ ನಿನಗೆ
ಏನೇನು ಅಂದರೆ, ಊನ ಆಗುವದೇನೊ ||

ಝಂಪೆ ತಾಳ
ಕಡಿಮೆ ಆಯುಷವೆಂದು ನುಡಿವೆನೆಂದಾದರೆ
ಕಡೆಯಾವದು ನಿನ್ನ ದಿವಸಗಳಿಗೆ
ಕುಡಿಯಲಿ ನೀರು ದೊರಕಲಿ ಬ್ಯಾಡವೆಂಬೆನೆ
ಪಡದೆ ನಿನ್ನುಂಗುಟದಲಿ ಗಂಗೆಯ
ಒಡಲ ಕ್ಷುಧಿಯನ್ನು ವೆಗ್ಗಳಿಸಿದೆಂಬೆನೆ
ಬಿಡದೆ ಎಂದಿಗೂ ನೀನು ನಿತ್ಯತೃಪ್ತ
ಕಡು ದಾರಿದ್ರ್ಯ ನಾಗಿನ್ನಿರು ಪೋಗು ಎಂಬೆನೆ
ಒಡನೆ ಇಪ್ಪಳು ಲಕುಮಿ ನಿನ್ನ ಗಲದೆ
ಉಡಲಿ ವಸನವ ಕಾಣದಲೆ ಪೋಗು ಎಂಬೆನೆ
ಕಡುರಮ್ಯವಾದ ಪೀತಾಂಬರವೊ
ಬಡವನಲ್ಲ ನೀನು ವಿಜಯ ವಿಠ್ಠಲ ನಿನಗೆ
ಎಡಬಿಡದೆ ನುಡಿದವನು ಅವನೆ ದಾರಿದ್ರ||

ತ್ರಿವಿಡಿ ತಾಳ
ಭೂಷಣವಿಲ್ಲದೆ ಪೋಗಲಿ ಏನೆಂಬೆನೆ
ದೋಷರಹಿತ ಅಪ್ರಾಕೃತ ಭೂಷಣ
ಲೇಸು ನಿನಗೆ ಆಗದೆ ಪೋಗಲೆಂಬೆನೆ
ಲೇಸು ಕೊಡುವೆ ನೀನು ಬೊಮ್ಮಾದಿಗೆ
ಈ ಸಂಸಾರ ಪಾಶದೊಳಗಿರು ಎಂಬೆನೆ
ಏಸೇಸು ಸಂಸಾರಿಗಳನ ದಾಟಿಸುವೆ
ಹಾಸಿಕೆಯಿಲ್ಲದೆ [ಹೋ]ಗಲಿ ಎಂಬೆನೆ
ಶೇಷನೆ ನಿನಗಯ್ಯ ಘನ ಹಾಸಿಕೆ
ದ್ವೇಷಿಗಳ ಕೈ[ಯ] ಸೋತು ಪೋಗೆಂಬೆನೆ
ನೀ ಸಮರ್ಥನು ಕಾಣೋನಿತ್ವದಲಿ
ಪಾಶಧರಾರ್ಚಿತ, ವಿಜಯ ವಿಠ್ಠಲರೇಯ
ಏಸುಪರಿ ಭಾಗ್ಯವಂತನು ನೀನಯ್ಯ ||

ಅಟ್ಟತಾಳ
ದೊರೆತನ ನಿನಗೆ ಇಲ್ಲದೆ ಪೋಗಲಿಯೆಂಬೆನೆ
ಅರಸನಾಗಿ ಸರ್ವರ ನೀನಂಜಿಸಿಕೊಂಬೆ
ಭರದಿಂದಲೇರುವ ರಥ ಬ್ಯಾಡವೆಂಬೆನೆ
ತಿರುಗುವ ಖಗರಾಜ ಈರೇಳು ಲೋಕದ
ಪರಿವಾರಯಿಲ್ಲದೆ ಇರು ನಿನಗೆಂಬೆನೆ
ಸುರರು ಮೊದಲಾದವರು ಸೇವಕರಯ್ಯ
ಅರಮನಿ ನಿನಗಾಗಲಿ ಬೇಡವೆಂಬಿನೆ
ಮಿರುಗುವ ತ್ರಿಧಾಮ ಜಗಕೆ ವಿರಹಿತ
ತರಳ ಯವ್ವನ ಜರೆತನವಾಗಲಂಬೆನೆ
ಪರಮಪುರುಷ ನಿನ್ನ ಜನನ ಮತ್ತಾವದೊ
ಧರಾಧರ ವಿಜಯವಿಠಲನಿಗೆ ಮಂದರು
ಅರಿಯಾದೆ ನುಡಿದು ಭವದೊಳಗಿಪ್ಪರು ||

ಆದಿತಾಳ
ಕುಲಗೋತ್ರದಿಂದ ನಿನ್ನ ಕೆಲಸಾರು ಎಂಬಿನೆ
ತಿಳಿಯಾದು ನಿನ್ನ ಕುಲಗೋತ್ರವೆನಗೆ
ಚಲುವನಾಗದೆ ಪೋಗು ಚನ್ನಿಗನೆಂಬೆನೆ
ಎಳೆ ನಖಕಾಂತಿಗೆ ಬೆಳಗುವದು ಲೋಕ
ಛಳಿ ಘಾಳಿ ಬಿಸಿಲು ತಾಕಲಿ ನಿನಗೆಂಬೆನೆ
ಒಳಗೆ ಹೊರಗೆ ನೀನೆ ಸರ್ವ ವ್ಯಾಪಕನು
ಸೆಳೆವ ಮೃತ್ಯು ನಿನ್ನ ತಡಹಲಿ ಎಂಬೆನೆ
ಬಲು ಮೃತ್ಯುಗಳ ನೀನೆ ತಲೆ ಮೆಟ್ಟಿ ಆಳುವೆ
ಸುಲಭನೆ ನಿನಗೊಂದು ಅಂದೆನೆಂದರೆ ಕಾಣೆ
ನೆಲೆಯಾವದು ನಿನ್ನ ಬಲವಂತ ತನಕ್ಕೆ
ಕುಲದೇವ ಕಮಲೇಶ ವಿಜಯ ವಿಠ್ಠಲರೇಯ
ಸಲಿಗೆÀಲಿ ನುಡಿದೇನು ಸಲಹುವ ದಾತಾರ ||

ಜತೆ
ಸ್ತೋತ್ರ ರೂಪವಿದೆಂದು [ನಿ]ನ್ನ ಕೊಂಡಾಡಿದೆ
ಮಿತ್ರನಾಗಿ ಕಾಯೊ ವಿಜಯ ವಿಠ್ಠಲ ಪ್ರಭುವೆ ||
**********

No comments:

Post a Comment