ವೇಂಕಟೇಶ ದಯಮಾಡೋ ವೇದವೇದ್ಯನೆ
ಪಂಕಜಾಕ್ಷ ಅಭಯವಿತ್ತು ರಕ್ಷಿಸೆನ್ನ ಬೇಗನೆ || ಪಲ್ಲವಿ ||
ಚಿತ್ತ ಚಂಚಲವ ಬಿಡಿಸೋ ಮತ್ತೆ ಕ್ರೋಧವ ಓಡಿಸೊ
ಭಾಂತಿ ವಿಷಯಂಗಳು ಬೇಡ ಕಂತುಪಿತ ನಾರಾಯಣ || ೧ ||
ಸೃಷ್ಟಿ ಮೂರರೊಳಗೆ ನೀನೆ ಕಷ್ಟಬಡಿಸುವರೇನೊ
ನಷ್ಟ ತನ್ನ ನೋಡಬೇಡೊ ದೃಷ್ಟಿಸಿ ನೋಡೊ ದಯಾಳೊ || ೨ ||
ಭಾಳ ಅಪರಾಧಿ ನಾನು ನಿನ್ನ ಬಳಿಗೆ ಬಂದೆ ನಾನು
ಒಲಿದು ಎನ್ನ ರಕ್ಷಿಸಯ್ಯ ಮೇಲುಗಿರಿ ಪುರಂದರವಿಠಲ || ೩ ||
***
ರಾಗ ಆನಂದ ಭೈರವಿ/ಅಟ್ಟ ತಾಳ
pallavi
vEnkaTEsha dayamADO vEda vEdyane
anupallavi
pankajAkSa abhayavittu bEkenna rakSisayyA
caraNam 1
citta cancalava biDisO matte krOdhava OdisO bhrAnti viSayangaLu bEDa kantupita nArAyaNa
caraNam 2
shrSTi mUraroLage nInE kaSTa baDisuvarEnO naSTa tanna nODa bEDo drSTisi nODo dayALO
caraNam 3
bALa aparAdhi nAnu ninna baLige bande nAnu olidu ennarakSisayya mElugiri purandara viTTala
***
No comments:
Post a Comment