ಪುರಂದರದಾಸರು
ರಾಗ ಯದುಕುಲಕಾಂಭೋಜಿ. ಆದಿ ತಾಳ
ಮರುಳಾಟವೇಕೋ ಮನುಜ ಕೂಗಾಟವೇಕೋ
ಸರುವ ದುರ್ಗುಣಂಗಳನ್ನು ಶರೀರದಿ ಬಚ್ಚಿಟ್ಟುಕೊಂಡು ||ಪ||
ಮೃತ್ತಿಕೆ ಶೌಚ ಮಾಡದವಗೆ ಮತ್ತೆ ಸ್ನಾನ ಮಂತ್ರವೇಕೆ
ಹೊತ್ತು ಕಟ್ಟಾದವಗೆ ಅಗ್ನಿಹೋತ್ರವೇತಕೆ
ತೊತ್ತು ಬಡಕನಿಗೆ ಪರತತ್ವದ ವಿಚಾರವೇಕೆ
ಕರ್ತು ಕೃಷ್ಣನ ನೆನೆಯದವನ ಉತ್ತಮಗುಣವೇತಕೆ ||
ಮೂಲ ಮಂತ್ರವಿಲ್ಲದವಗೆ ಮೇಲೆ ದೇವತಾರ್ಚನೆಯೇಕೆ
ಸಾಲಿಗ್ರಾಮಾಭಿಷೇಕವಿಲ್ಲದ ತೀರ್ಥವೇತಕೆ
ಸೂಳೆಯಗಾರಗೆ ತುಳಸಿಮಾಲೆಯ ಶೃಂಗಾರವೇಕೆ
ಮಾಲೋಲನ್ನ ನೆನೆಯದವನ ನಾಲಿಗೆಯೇತಕೆ ||
ಹಸಿವು ತೃಷೆಯ ಸಹಿಸದವಗೆ ಹುಸಿಯಾದ ವೈರಾಗ್ಯವೇಕೆ
ವಿಷಯ ಮೆಚ್ಚಿದವಗೆ ಪರರ ಕುಶಲವೇತಕೆ
ಪುಸಿಯಾದ ಜಪ ಮಾಡುವವಗೆ ಮುಸುಕಿನ ಡಂಭವದೇಕೆ
ಪಿಸಜನಾಭನಿಗರ್ಪಿಸಿದ ಅಶನವೇತಕೆ ||
ಊರ್ಧ್ವಪುಂಡ್ರ ಹಚ್ಚದವನ ಮುಖವ ತಿದ್ದಿ ನೋಡುವದೇಕೆ
ಶುದ್ಧ ಸಾತ್ವಿಕಗೆ ಪರರ ಬುದ್ಧಿಯೇತಕೆ
ಕದ್ದು ಹೊಟ್ಟೆ ಪೊರೆಯುವವಗೆ ಶುದ್ಧ ಶೀಲ ವೃತ್ತಿಯೇಕೆ
ಮಧ್ವ ಮತವ ಹೊಂದದವನ ಪದ್ಧತಿಯೇತಕೆ ||
ಕಂಡ ನಾರಿಗಿಚ್ಛೈಸುವ ಲಂಡಗೆ ಪುರಾಣವೇಕೆ
ಬಂಡು ಮಾತಿನ ಕವಿಯ ಬಹು ಪಾಂಡಿತ್ಯವೇತಕೆ
ಪುಂಡರೀಕಾಕ್ಷ ನಮ್ಮ ಶ್ರೀ ಪುರಂದರವಿಠಲನ್ನ
ಕಂಡು ಕಂಡು ಭಜಿಸದವಗೆ ಉದ್ದಂಡವೇತಕೆ ||
***

pallavi
maruLADavEkO manuja kUgATavEkO sarva durguNangaLannu sharIradi bacciTTu koNDu
caraNam 1
mruttike shauca mADadavage matte snAna mantravEke hottu kaTTAdavage agnihOtravEtake
tottu baDakanige paratatvada vicAravEke kartu krSNana neneyadavana nAligeyEtake
caraNam 2
mUla mantradavilladavage mEle dEvatArcaneyEke shAlagrAmAbhiSEkavillada tIrttavEtake
sULeyakArage tuLasi mAleya shrngAravEke mAlOlanna neneyadavana nAligeyEtake
caraNam 3
hasivu trSeya sahisadavage husiyAda vairAgyavEke viSaya meccidavage parara kushalavEtake
pusiyAda japa mADuvavage musukina DambhavadEke pisaja nAbhanigarpisida ashanavEtake
caraNam 4
Urdhva puNDara haccadavana mukhava tiddi nODvudEke shuddha sAtvikake parara buddhiyEtake
kaddu hoTTe poreyuvavake shuddha shIla vrttiyEke madhva matava hondadavana paddhatiyEtake
caraNam 5
kaNDa nArigicchaisuva laNDage purANavEke banDhu mAtina kaviya bahu pANDityavEtake
puNDarIkAkSa namma shrI purandara viTTalanna kaNDu kaNDu bhajisadavake uddaNDavEtake
***
ಮರುಳಾಟವೇಕೊ ಮನುಜಾ |ಮರುಳಾಟವೇಕೊ? ಪ.
ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1
ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2
ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3
ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4
ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
********

No comments:
Post a Comment