ರಾಗ ಕಾಂಭೋಜ ಝಂಪೆತಾಳ
ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ||ಪ||
ವಾಸುದೇವನ ಭಜಿಸಿ ಸುಖಿಯಾಗು ಮನವೆ ||
ಮಡದಿಮಕ್ಕಳುಯೆಂದು ವಡವೆವಸ್ತುಗಳೆಂದು
ಸಡಗರದಿ ತಾ ಕೊಂಡು ಭ್ರಮಿಸಲೇಕೆ
ಬಿಡದೆ ಯಮನಾಳುಗಳು ಬಾರೆಂದು ಎಳೆವಾಗ
ಮಡದಿ ಮಕ್ಕಳು ಕಡೆಗೆ ತೊಲಗುವರೊ ಮರುಳೆ ||
ನೆಂಟರೂರಿಗೆ ಹೋಗಿ ನಾಲ್ಕು ದಿನವಿದ್ದರೆ
ಎಂಟು ದಿನದಾಯಾಸ ಹೋಗುವಂತೆ
ಉಂಟು ಸೌಭಾಗ್ಯವೆಂತೆಂಬ ಧೈರ್ಯವ ಬಿಟ್ಟು ವೈ-
ಕುಂಠನ ಭಜಿಸು ಭ್ರಷ್ಟ ಮನವೆ ||
ಉಂಟು ಆಶ್ರಯವೆಂದು ಬಡವನ ಕರೆತಂದು
ಕೊಟ್ಟು ಮಾಡಿದ ಧರ್ಮ ಫಲ ತನ್ನದು
ಇಷ್ಟ ಮೂರುತಿ ನಮ್ಮ ಪುರಂದರವಿಟ್ಠಲನ
ನಿಷ್ಠೆಯಿಂದಲಿ ಭಜಿಸು ದುಷ್ಟಮನವೆ ||
***
ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ||ಪ||
ವಾಸುದೇವನ ಭಜಿಸಿ ಸುಖಿಯಾಗು ಮನವೆ ||
ಮಡದಿಮಕ್ಕಳುಯೆಂದು ವಡವೆವಸ್ತುಗಳೆಂದು
ಸಡಗರದಿ ತಾ ಕೊಂಡು ಭ್ರಮಿಸಲೇಕೆ
ಬಿಡದೆ ಯಮನಾಳುಗಳು ಬಾರೆಂದು ಎಳೆವಾಗ
ಮಡದಿ ಮಕ್ಕಳು ಕಡೆಗೆ ತೊಲಗುವರೊ ಮರುಳೆ ||
ನೆಂಟರೂರಿಗೆ ಹೋಗಿ ನಾಲ್ಕು ದಿನವಿದ್ದರೆ
ಎಂಟು ದಿನದಾಯಾಸ ಹೋಗುವಂತೆ
ಉಂಟು ಸೌಭಾಗ್ಯವೆಂತೆಂಬ ಧೈರ್ಯವ ಬಿಟ್ಟು ವೈ-
ಕುಂಠನ ಭಜಿಸು ಭ್ರಷ್ಟ ಮನವೆ ||
ಉಂಟು ಆಶ್ರಯವೆಂದು ಬಡವನ ಕರೆತಂದು
ಕೊಟ್ಟು ಮಾಡಿದ ಧರ್ಮ ಫಲ ತನ್ನದು
ಇಷ್ಟ ಮೂರುತಿ ನಮ್ಮ ಪುರಂದರವಿಟ್ಠಲನ
ನಿಷ್ಠೆಯಿಂದಲಿ ಭಜಿಸು ದುಷ್ಟಮನವೆ ||
***
pallavi
I siriya nambi higgalu manave
anupallavi
vAsudEvana bhajisi sukhiyAgu manave
caraNam 1
maDadi makkaLu endu oDave vastugaLendu saDagaradi tA koNDu bhramisalEke
biDade yamanALugaLu bArendu eLevAga maDadi makkaLu kaDege tolaguvaro maruLe
caraNam 2
neNTarUrige hOgi nAlgu dinaviddhare eNTu dinadAyAsa hOguvante
uNTu saubhAgyaventemba dhairyava biTTu vaikuNThana bhajisu bhraSTa manave
caraNam 3
uNTu Ashrayavendu baDavana karetandu koTTu mADida dharma phala tannadu
iSTa mUruti namma purandara viTTalana niSTeyindali bhajisu duSTa manave
***
No comments:
Post a Comment