Thursday, 5 December 2019

ತುಂಟನಿವನು ಕಾಣಮ್ಮ ಗೋಪಾಲನು purandara vittala

ಪುರಂದರದಾಸರು
ತುಂಟನಿವನು ಕಾಣಮ್ಮ ಗೋಪಾಲನು|ಉಂಟೋ ಇಲ್ಲವೊ ಕೇಳಮ್ಮ ಪ

ಎಂತೆರಡು ಸಾವಿರ ನಂತರ ಹೆಂಗಳತುಂಟು ಮಾಡಿ ರವಿಕೆಗಂಟು ಬಿಚ್ಚಿ ನಿಂತ ಅ.ಪ

ಹಸಿರು ಪಟ್ಟೆಯನು ಉಟ್ಟು - ನಮ್ಮನೆ ಹೆಣ್ಣು|ಮೊಸರು ಕಡೆಯುತಿರಲು||ನಸುನಗುತಲಿ ಬಂದುಕುಸುಮಮಲ್ಲಿಗೆ ಮುಡಿಸಿ|ಬಸಿರುಮಾಡಿದನೆಂಥ ಹಸುಳನೆಗೋಪಿ||1

ಮುದ್ದುನಾರಿಯರು ಕೂಡಿ-ನಮ್ಮನೆಯಲಿ|ಉದ್ದಿನ ವಡೆಯ ಮಾಡಲು||ಸದ್ದು ಮಾಡದೆ ಎಂದು ಎದ್ದೆದ್ದು ನೋಡುತ|ಇದ್ದ ವಡೆಯನೆಲ್ಲ ಕದ್ದು ಮೆದ್ದೋಡಿದ 2

ಗೊಲ್ಲ ಬಾಲಕರ ಕೂಡಿ-ಮನೆಯಲಿದ್ದ |ಎಲ್ಲ ಬೆಣ್ಣೆಯ ಮೆಲ್ಲಲು ||ಗುಲ್ಲು ಮಾಡದೆ ನಾವು ಎಲ್ಲರು ಒಂದಾಗಿ |ತಳ್ಳ ಹೋದರೆ ನಮಗೆ ಬೆಲ್ಲವ ತೋರಿದ 3

ಹೊತ್ತು ಮುಳುಗುವ ಸಮಯದಿ-ನಮ್ಮನೆ ಹೆಣ್ಣು |ಹತ್ತಿ ಹೊಸೆಯುತಿರಲು |ಮುತ್ತು ಹವಳ ಸರ ಕತ್ತಿಗೆ ಹಾಕಿ ಸೀರೆ |ಎತ್ತಿ ನೋಡಿದನು ತಾ ಬತ್ತಲೆ ನಿಂತ 4

ತಿಲಕ ಕತ್ತುರಿಯನಿಟ್ಟು-ನಮ್ಮನೆ ಹೆಣ್ಣು |ಗಿಲುಕು ಮಂಚದಲಿರಲು ||ತಿಲಕ ತಿದ್ದುತ ಕುಚಕಲಶ ಪಿಡಿದು ತನ್ನ |ಕೆಲಸವ ತೀರಿಸಿದ ಪುರಂದರವಿಠಲ 5
***

pallavi

tuNDanivanu kANamma gOpAlani uNDO illavo kELamma

anupallavi

eNDEraDu sAvira naNTara hengaLa tuNDu mADi ravike kaNDu bicci ninta

caraNam 1

hasiru paTTeyanu uTTu nammane heNNu mosaru kaDeyutiralu
nasu nagutali bandu kusuma mallige muDisi basiru mADidanenda hasuLane gOpi

caraNam 2

muddu nAriyaru kUDi nammaneyali uDDina eDeya mADalu
saddu mADade bandu eddeddu nODuta idda eDeyanella kaddu meddODida

caraNam 3

kolla bAlakara kUDi maneyallidda ella beNNeya mellalu
gullu mADade nAvu ellaru ondAgi taLLahOdare namage bellava tOrida

caraNam 4

hottu muLuguva samayadi nammane heNNu hatti hoseyutiralu
muttu havaLasara kattige hAki sIre etti nODidanu tA battale ninta

caraNam 5

tilaka kastUriyaniTTu nammane heNNu giluku mancadaliralu
tilakadidduta kuca kalasha piDidu tanna kelasava tIrisida purandara viTTala
***

No comments:

Post a Comment