Friday 1 October 2021

ಕರುಣಾ ನಿಧಿಯೆ ಈಶ ಅರುಣಗಿರಿಯ ವಾಸ purandara vittala KARUNAA NIDHIYE EESHA ARUNAGIRIYA VAASA





ಕರುಣಾನಿಧಿಯೆ ಈಶ ಅರುಣಗಿರಿಯ ವಾಸ ||ಪ||

ಮುರನವೈತ್ರಿಯ ಚರಣದಾಸ
ಅರುಣರವಿಯ ಕೋಟಿಪ್ರಕಾಶ ||ಅ||

ಭಸ್ಮಧೂಳಿತ ಸರ್ವಾಂಗ
ಮತ್ತೆ ತಲೆಯೊಳಿಪ್ಪ ಗಂಗಾ
ವಸ್ತ್ರರಹಿತ ದಿಗಂಬರ ಲಿಂಗ
ಕಸ್ತೂರಿರಂಗನ ಪಾದದ ಭೃಂಗ ||

ಮತ್ತೆ ತ್ರಿಪುರಸಂಹಾರಿ
ಚಿತ್ತಜನಯ್ಯನ ಸೇರಿ
ಹಸ್ತದಿ ಶೂಲ ಕಪಾಲಧಾರಿ
ಕರ್ತು ಶ್ರೀ ಹರಿಗೆ ನಿಜವ ತೋರಿ ||

ನಂದಿಗೆ ನರಗೆ ಬಾಹ್ವ
ಚಂದ್ರನು ಶಿರದಲಿಪ್ಪ
ಇಂದ್ರನ ತೀರ್ಥ ದಡದಲ್ಲಿಪ್ಪ
ಎಂದೆಂದಿಗು ನಮ್ಮನು ಪಾಲಿಸುತಿರ್ಪ ||

ಬೇಡಿದ ವರಗಳನೀವ , ಮತ್ತೆ
ಬೇಡಿದ ಭಕ್ತರ ಕಾವ
ಜಡೆಯ ಮರಳು ಶಿರಳು ಭಾವ
ಕೊಂಡಾಡುವರೊಳಗೆಲ್ಲ 
(/ ಕೊಂಡಾಡುವದೊಳಗೆಲ್ಲ ) ಎನ್ನದು ಶಿವ ||

ಪರ್ವತಿಪುರದ ನಾಥ
ಕರುಣಿಸು ಸಂತತ ದಾತ
ನಾರದಪ್ರಿಯ ಪ್ರಖ್ಯಾತ
ಪುರಂದರವಿಠಲನ ದೂತ ||
****

ರಾಗ ಮುಖಾರಿ ಆದಿತಾಳ (raga, taala may differ in audio)

pallavi

karuNAnidhiye Isha aruNagirivAsa

anupallavi

murana vairiya caraNa dAsa aruNa raviya kOTi prakASha

caraNam 1

bhasma dhULita sarvAnga matte taleyoLippa gangA vastra rahita digambara linga kastUri rangana pAdada brnga

caraNam 2

matte tripura samhAri citta janayyana sEri hastadi shUla kapAladhri kartu shrI harige nijava tOri

caraNam 3

nandige narage bAhva candranu shiradallippa indrana tIrta daDadallippa endendigu nammanu pAlisutalippa

caraNam 4

bEDida varagaLanIva matte bEDida bhaktara kAva oDeya maraLa shiraLu bhAva koNDADuvaroLegella ennadu shiva

caraNam 5

pArvati purada nAtha karuNisu santata dAta nArada prita prakyAta purandara viTTalana dUta
***

No comments:

Post a Comment