Friday, 1 October 2021

ಕಾವ ದೇವ ನೀನಲ್ಲದೆ ಜಗಕೆ ಇನ್ನಾವ ದೇವ purandara vittala KAAVA DEVA NEENALLADE JAGAKE INNAAVA DEVA

Audio by Vidwan Sumukh Moudgalya


ಕಾವ ದೇವ ನೀನಲ್ಲದೆ ಜಗಕೆ ಇನ್ನಾವ ದೇವರುಳ್ಳರೈ ||ಪ||

ದೇವರ ದೇವ ನೀನೆಂದು ನಂಬಿದೆನೆನ್ನ ಕಾಯೊ ಕನಕಾಚಲ ಕೃಷ್ಣ ಕರುಣದಿ || ಅ||

ತಂದೆಯ ತೊಡೆಯ ಮೇಲೆ ಬಂದು ಕುಳಿತಿದ್ದ
ಕಂದನ ಮಲತಾಯಿಯು ನೂಕಲು
ಅಂದು ಶಿಶುವು ಅಡವಿಗೆ ನಡೆತರಲು
ಬಂದು ಪೊರೆದೆಯೋ ನೀ ಕರುಣದಲಿ ||

ನಖಮುಖದಲಿ ಹಿರಣ್ಯಕನೊಡಲನು ಸೀಳಿ
ರಕುತವ ದೆಸೆದೆಸೆಗೆ ಚೆಲ್ಲಲು
ಸಕಲ ಸುರರು ಕೊಂಡಾಡಲು ಜಯವೆಂದು
ಭಕುತ ಪ್ರಹ್ಲಾದನ ಪೊರೆದೆ ಕರುಣದಿ ||

ಶಕಟ ಪೂತನಿ ಧೇನುಕ ವತ್ಸಾಸುರ
ಬಕಮುಖ್ಯರನೆಲ್ಲ ಸವರಿದೆಯೊ
ಪ್ರಕಟತನದಿ ಕಂಸನ ನೆಗ್ಗೊತ್ತಿ ದೆ-
ವಕಿ ವಸುದೇವರ ಪೊರೆದೆ ಕರುಣದಿ ||

ಅತಿಚಪಲದಿ ದುಶ್ಶಾಸನ ಸಭೆಯಲಿ
ಪತಿಗಳೈವರು ಎದುರಿನೊಳಿರಲು
ಖತಿಯಿಂದಲಿ ಸೆಳೆಯೆ ಸೀರೆಯ ತರಳೆ ದ್ರೌ-
ಪದಿಯಭಿಮಾನವ ಪೊರೆದೆ ಕರುಣದಿ ||

ಮರಣಕಾಲದಲಿ ಅಜಮಿಳ ಮರುಕದಿ
ತರಳ ನಾರಗನೆಂದು ಕರೆಯಲು
ನೆರೆದೆ ಪೊರೆದೆ ಕರುಣಾಳುಗಳರಸನೆ
ಗುರುಪುರಂದರವಿಟ್ಠಲ ಕರುಣದಲಿ ||
***

pallavi

kAvavE nInallade jagake innAva dEvaruLLarai

anupallavi

dEvara dEva nInendu nambidenayya

caraNam ೧, ೨, ೩, ೪ ?

maraNa kAladali ajAmiLa marugadi taranAraganentu kareyalu
neredu porede karuNAjagaLa rasane guru purandara viTTala karuNadali
***

ರಾಗ ಮಧ್ಯಮಾವತಿ ಆದಿತಾಳ (raga, taala may differ in audio)

No comments:

Post a Comment