Saturday, 4 December 2021

ಏಕೆ ಚಿಂತಿಸುವೆ ಬರಿದೆ ಮರುಳೆ ವಿಧಿ ಬರೆದ purandara vittala EKE CHINTISUVE BARIDE MARULE VIDHI BAREDA

lyrics in this devaranama is different. please use the tune


ಏಕೆ ಚಿಂತಿಸುವೆ ಬರಿದೆ ಮರುಳೆ ||ಪ||
ವಿಧಿ ಬರೆದ ವಾಕು ತಪ್ಪದು ಎಂದಿಗೂ ಮರುಳೆ ||ಅ||

ಹುಟ್ಟುವುದಕಿಂತ ಮೊದಲೆ ತಾಯ ಸ್ತನ
ದಿಟ್ಟ ಕ್ಷೀರವನು ಉಂಡು
ತೊಟ್ಟಿಲೊಳು ಮಲಗುವಾಗ ಗಳಿಸಿ ತಂ-
ದಿಟ್ಟು ನೀನುಣುತಿದ್ದೆಯೊ ಮರುಳೆ ||

ಉರಗ ವೃಶ್ಚಿಕ ಪಾವಕ ಕರಿ ನಂಜು
ಅರಸು ಹುಲಿ ಚೋರ ಭಯವು
ಹರಿಯಾಜ್ಞೆಯಿಂದಲೇವೇ ನೀನು ಮಹಾ
ಶರಧಿ ಪೊಕ್ಕರು ಬಿಡದು ಮರುಳೆ ||

ಇಂತು ಸುಖ ದುಃಖಂಗಳಿಗೆ ಸಿಲುಕಿ ನೀ
ಭ್ರಾಂತನಾಗಿ ಕೆಡಲು ಬೇಡ
ಸಂತೋಷದಿಂದರ್ಚಿಸಿ ಪೂಜಿಸು
ಕಂತುಪಿತ ಶ್ರೀ ಪುರಂದರವಿಠಲನ ||
***

ರಾಗ ನೀಲಾಂಬರಿ. ಮಟ್ಟೆ ತಾಳ (raga tala may differ in audio)

pallavi

EkE cintisuve baride maruLe

anupallavi

vidhi bareda vAku tappaga endigU maruLe

caraNam 1

huTTuvudakinta modale tAya stana diTTa kSIravanu uNDu
toTTiloLu malaguvAga gaLisi tandiTTu nInuNutiddeyo mruLe

caraNam 2

uraga vrshcika pAvaka kari nanju arasu huli cOra bhayavu
hariyAjneyindalEve nInu mahA sharadhi pokkaru biDadu maruLe

caraNam 3

intu sukha dukkhagaLige siluki nI bhrAntanAgi keDalu bEDa
santOSadindarcisi bhajisu kantupita shrI purandara viTTalana
***

No comments:

Post a Comment