Monday, 6 December 2021

ನೋಡುವುದೆ ಕಣ್ಣು ಕೇಳುವುದೆ ಕಿವಿ ಪಾಡುವುದೇ purandara vittala NODUVUDE KANNU KELUVUDE KIVI PAADUVUDE






ಪುರಂದರದಾಸರು check ankita gurupurandara vittala

ನೋಡುವುದೆ ಕಣ್ಣು ಕೇಳುವುದೆ ಕಿವಿ |ಪಾಡುವುದೇವದನ ಪ

ಗಾಡಿಕಾರಶ್ರೀ ವೇಣುಗೋಪಾಲನ |ಕೂಡಿಕೊಂಡಾಡುವ ಸುಖದ ಸೊಬಗನು ಅ.ಪ

ಎಳೆದುಳಸಿಯ ವನಮಾಲೆಯಿಂದೊಪ್ಪುವ |ಎಳೆಯ ಗೋವಳರೊಡನಾಡುವ |ತಳಿತ ತರುವಿನ ನೆಳಲಲ್ಲಿ ನಲಿವನ |ನಳಿನನಾಭನ ಮುದ್ದು ನಗೆಯ ಸೊಬಗನು 1

ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |ಮರಿಗೋಗಿಲೆಯಂತೆ ಕೂಗುವನ ||ಎರಳೆಯಂತೆ ಜಿಗಿಜಿಗಿದಾಡುವತುಂಬಿ|ಶಿರವ ತಗ್ಗಿಸುವಂತೆ ಝೇಂಕರಿಸುವನ 2

ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |ಚೆಲ್ವೆಯರಿಗೆ ಮುಡಿಸುವನ ||ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |ಚೆಲ್ಲೆಗಂಗಳ ಮುದ್ದು ಘುಲ್ಲನಯನನ 3

ಪೊಂಗೊಳಲೂದುತ ಮೃಗಖಗ ಜಾತಿಯ |ಸಂಗಡಿಸುತಲಿಪ್ಪನ ||ಅಂಗವ ಮರೆತು ನೂರಂಗನೆಯರಲಿ ಬೆಳು-|ದಿಂಗಳೊಳಗೆ ಕುಣಿದಾಡುವ ದೇವನ 4

ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |ಸೆರಗಪಿಡಿಸಿ ಕೊಂಬನ ||ಕರುಣಾಕರ ಶ್ರೀ ಪುರಂದರವಿಠಲ |ಶರಣಾಗತ ರಕ್ಷಕ ರಮೆಯರಸನ 5

****

ರಾಗ ಧನಶ್ರೀ ಅಟ ತಾಳ (raga tala may differ in audio)

Noduvude kannu keluvude kivi
Paduvude vadana||pa||

Gadikara sri venugopalana
Kudi kondaduva sukada sobaganu||apa||

Pongalaluduta mrugapakshigalanella
Sangalisutalippana
Angaja janaka gopanganerodane bela-
Dingalolage sulidado ramgayyana||1||

Navilante kuniva hamseyante naliva
Mari kogileyante kuguva
Eraleya mariyante jigijigidaduva
Tumbi jenkarisuvamdadi jenkaripana||2||

Murudu kubjeya Donku tiddi rupava madi
Sereya bidisikombana
Garudagamana siri purandaravithalana
Saranagata suradhenu rangayyana||3||
***

pallavi

nODuvudE kaNNU kELuvudE kivi pADuvudE vadana

anupallavi

gADigAra shrI vENugOpAlana kUDi koNDADuva sukhava sobaganu

caraNam 1

pongoLalUduta mrga pakSigaLanella sangaLisutalippana
angaja janaka gOpAnganEroDane beLa tingaLoLage suLidADo rangayyana

caraNam 2

navilante kuNiva hamseyante naliyuva mari kOkilayante kUguva
eraLeya mariyante cigicigidADuva tumbi jhEnkarisuvandadi jhEnkaripana

caraNam 3

muruDu kubjeya Donku tiddi rUpava mADi sereya piDisi kombana
garuDa gamana guru purandara viTTalana sharaNAgata suradEnu rangayyana
***

ನೋಡುವುದೇ ಕಣ್ಣು ಕೇಳುವುದೇ ಕಿವಿ
ಪಾಡುವುದೇ ವದನ||pa||

ಗಾಡಿಕಾರ ಶ್ರೀ ವೇಣುಗೋಪಾಲನ
ಕೂಡಿ ಕೊಂಡಾಡುವ ಸುಖದ ಸೊಬಗನು||apa||

ಪೊಂಗಳಲೂದುತ ಮೃಗಪಕ್ಷಿಗಳನೆಲ್ಲ
ಸಂಗಳಿಸುತಲಿಪ್ಪನ
ಅಂಗಜ ಜನಕ ಗೋಪಾಂಗನೇರೊಡನೆ ಬೆಳ-
ದಿಂಗಳೊಳಗೆ ಸುಳಿದಾಡೊ ರಂಗಯ್ಯನ||1||

ನವಿಲಂತೆ ಕುಣಿವ ಹಂಸೆಯಂತೆ ನಲಿವ
ಮರಿ ಕೋಗಿಲೆಯಂತೆ ಕೂಗುವ
ಎರಳೆಯ ಮರಿಯಂತೆ ಜಿಗಿಜಿಗಿದಾಡುವ
ತುಂಬಿ ಝೇಂಕರಿಸುವಂದದಿ ಝೇಂಕರಿಪನ||2||

ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ
ಸೆರೆಯ ಬಿಡಿಸಿಕೊಂಬನ
ಗರುಡಗಮನ ಸಿರಿ ಪುರಂದರವಿಠಲನ
ಶರಣಾಗತ ಸುರಧೇನು ರಂಗಯ್ಯನ||3||
***

vani tvg

No comments:

Post a Comment