Thursday, 5 December 2019

ನಿತ್ಯವಲ್ಲ ನಿತ್ಯವಲ್ಲ ಅನಿತ್ಯ ದೇಹವಿದಣ್ಣ purandara vittala

ಪುರಂದರದಾಸರು
ರಾಗ ಕಾಂಭೋಜ. ಛಾಪು ತಾಳ 

ನಿತ್ಯವಲ್ಲ ಅನಿತ್ಯ ದೇಹವಿದಣ್ಣ ||ಪ||
ಮತ್ತೆ ಮುರಾರಿ ಕೃಷ್ಣನ ನೆನೆಯಲು
ಮುಕ್ತಿಗೆ ಸಾಧನವಣ್ಣ ಪ್ರಾಣಿ ||ಅ||

ಮಾನಿನಿಯರ ಕುಚಕೆ ಮರುಳಾಗದಿರು
ಮಾಂಸದ ಗಂಟುಗಳಲ್ಲಿ
ನಾನಾ ಪರಿಯಲಿ ಮೋಹವ ಪಡದಿರು
ಹೀನ ಮೂತ್ರದ ಕುಳಿಯಲ್ಲಿ
ಜಾನಕೀರಮಣನ ಧ್ಯಾನವ ಮಾಡಲು
ಜಾಣನಾಗುವೆ ಅಲ್ಲಿ, ಪ್ರಾಣಿ ||

ತಂಡೆ ತಾಯಿ ಅಣ್ಣ ತಮ್ಮಂದಿರು
ಬಂಧುಬಳಗದವರೆಲ್ಲ
ಹೊಂದಿ ಹೊರೆಯುವ ನೆಂಟರಿಷ್ಟರು
ಹರಿದು ತಿಂಬುವರೆಲ್ಲ
ಬಂದ್ಯಮದೂತರು ಸೆಳೆದೊಯ್ಯುವಾಗ
ಹಿಂದೆ ಬಾಹೋರಿಲ್ಲ, ಪ್ರಾಣಿ ||

ಕತ್ತಲೆ ಬೆಳದಿಂಗಳ ಸಂಸಾರ
ಕಟ್ಟೋ ಧರ್ಮದ ಮಟ್ಟಿ
ಚಿತ್ತ ಶುದ್ಧನಾಗಿ ನಡೆಯದಿದ್ದರೆ
ವ್ಯರ್ಥವಾಗಿ ನೀ ಕೆಟ್ಟಿ
ಚಿತ್ತಜನಯ್ಯ ಶ್ರೀಪುರಂದರವಿಠಲನ
ತುತಿಸೊ ಬೇಗ ಮನಮುಟ್ಟಿ, ಪ್ರಾಣಿ ||
***

pallavi

nityavalla anitya dEhavidaNNa

anupallavi

matte murAri krSNana neneyalu muttige sAdhanavaNNa prANi

caraNam 1

mAniniyara kucake maruLAgadiru mAmsada kaNDUgaLalli nAnA pariyali mOhana baDadiru
hIna mUtrada kuLiyalli jAnakI ramaNana dhyAnava mADalu jANanAguve alli prANi

caraNam 2

tande tAyi aNNa tammandiru bandhu baLagadavarella hondi horeyuva neNTariSTaru
haridu timbuvarella banda yama dUtaru seLedoyyuvAga hinde bAhOrilla prANi

caraNam 3

kattale beLatingaLa samsAra kaTTO dharmada maTTi citta shuddanAgi naDeyadiddare
vyarttavAgi nI keTTi cittajanayya shrI purandara viTTalana tutiso bEga manamuTTi prANi
***

ನಿತ್ಯವಲ್ಲ ನಿತ್ಯವಲ್ಲ ಅನಿತ್ಯ ದೇಹವಿದಣ್ಣ ಪ.

ಮತ್ತೆ ಮುರಾರಿ ಶ್ರೀ ಕೃಷ್ಣನ ನೆನೆದರೆ |ಮುಕ್ತಿಸಾಧನವಣ್ಣ ದೇಹ ಅಪ

ಮಾನಿನಿಯರ ಕುಚಕೆ ಮರುಳಾಗದಿರು ಮಾಂಸದ ಗಂಟುಗಳಲ್ಲಿ |ನಾನಾ ಪರಿಯಲಿ ಮೋಹಮಾಡದಿರುಹೀನಮೂತ್ರದ ಕುಳಿಯಲ್ಲಿಜಾನಕಿರಮಣನ ನಾಮವ ನೆನೆದರೆಜಾಣನಾಗುವೆಯಲ್ಲೋ - ಪ್ರಾಣಿ 1

ತಂದೆ-ತಾಯಿ ಅಣ್ಣ-ತಮ್ಮಂದಿರು ಮಕ್ಕಳು ಹರಿದು ತಿಂಬರೆಲ್ಲ |ಹೊಂದಿ ಹೊರೆಯುವಾ ನಂಟರಿಷ್ಟರುನಿಂದೆ ಮಾಡುವರೆಲ್ಲ ||ಮುಂದೆ ಯಮನ ದೂತರು ಎಳೆದೊಯ್ಯಲುಹಿಂದೆ ಬರುವರಿಲ್ಲೋ - ಪ್ರಾಣಿ 2

ಕತ್ತಲೆ ಬೆಳುದಿಂಗಳು ಸಂಸಾರವು ಕಟ್ಟು ಧರ್ಮದ ಮೊಟ್ಟಿ |ಹೊತ್ತನರಿತು ಹರಿದಾಸರ ಸೇರೆಲೊ ಪೇಳ್ವರು ತತ್ತ್ವವ ಗಟ್ಟಿ |ಚಿತ್ತಜನಯ್ಯ ಪುರಂದರವಿಠಲನಹೊಂದೋ ನೀ ಸುಖಬುಟ್ಟಿ - ಪ್ರಾಣಿ 3
*******

No comments:

Post a Comment