Monday 8 November 2021

ತಂಗಿ ನೋಡೆ ನಮ್ಮಂಗಳದೊಳು ಪಾಂಡುರಂಗ ಮೆಲ್ಲಡಿ purandara vittala TANGINODE NAMMANGALDOLU PANDURANGA MELLADI



ತಂಗಿ ನೋಡೆ ನಮ್ಮಂಗಳದೊಳು ಪಾಂಡು-
ರಂಗ ಮೆಲ್ಲಡಿ ಇಟ್ಟು ಪೋದನಮ್ಮ ||ಪ||

ಗಂಗೆ ಜನಿಸಿ ಮೂರ್ಲೋಕಕ್ಕೆ ಮುಕುತಿಯು ತಾ
ರಂಗವೊಲಿವ ಪಾದ
ಮಂಗಳ ಸಾಸಿರದಳದ ಸರ್ವೋತ್ತಮ
ರಂಗವಲ್ಲಿಯನಿಕ್ಕಿದಂತೆ ಶೋಭಿಸುತಿದೆ ||

ಸಿರಿಯಜಭವರುಗಳರಸಿ ಕಾಣರು
ಸಿರಿಚರಣ ಪೂರಿತ ಬೆಳಗುತಿದೆ
ವರ ವಜ್ರಾಂಕುಶ ಧ್ವಜ ಊರ್ಧ್ವರೇಖೆಯ ನೋಡಿ
ಧರಣಿಗಾಭರಣವಿಟ್ಟಂತೆ ಶೋಭಿಸುತಿದೆ ||

ಹಿಂದಿನಾನಂತ ಜನ್ಮದ ಪಾಪಕೆ ಕೇಡು
ಮುಂದಣಾನಂತ ಸುಕೃತಕೆ ಜೋಡು
ತಂದೆ ಪುರಂದರವಿಠಲರಾಯ ಸುಳಿದು
ಹಿಂದೆ ಮುಂದೆ ಕೋಟಿ ಕುಲವನುದ್ಧರಿಸಿದ ||
****

ರಾಗ ಕೇದಾರಗೌಳ ಅಟತಾಳ (raga, taala may differ in audio)

pallavi

tangi nODe nammangaLadoLu pANduranga mellaDi iTTU pOdanamma

caraNam 1

gange janisi mUrlOkakke mukutiyu tA rangavoliva pAda mangaLa
sAsira daLada sarvOttama rangavalliya nikkidante shObhisutide

caraNam 2

siriyaja bhavarugaLarasi kANaru siri caraNa pUrita beLagutide vara vajrAnkusha
dhvaja Urdhava rEkheya nODi dharaNikAbharaNa viTTante shObhisutide

caraNam 3

hindidAnanda janmada pApake kEDu mundaNAnanda sukrtake jODu
tande purandara viTTalarAya suLidu hinde munde kOTi kulavanuddharisida
***

No comments:

Post a Comment