Thursday, 5 December 2019

ಜ್ಞಾನವೊಂದೇ ಸಾಕು ಮುಕ್ತಿಗೆ purandara vittala

ಪುರಂದರದಾಸರು
ರಾಗ ಮೋಹನ ಅಟತಾಳ

ಜ್ಞಾನವೊಂದೇ ಸಾಕು ಮುಕ್ತಿಗೆ
ಇನ್ನೇನು ಬೇಕು ಹುಚ್ಚು ಮರುಳೆ(/ಮಾನವನೆ) ||ಪ||

ಪಿತಮಾತೆ ಸತಿಸುತರಗಲಿರಬೇಡ
ಯತಿಯಾಗಿ ಅರಣ್ಯ ಚರಿಸುತಲುಬೇಡ
ವ್ರತನೇಮ ಮಾಡಿ ದಣಿಯಲು ಬೇಡ
ಸತಿಯಿಲ್ಲದವಗೆ ಸದ್ಗತಿಯಿಲ್ಲವೊ ಮೂಢ ||

ಜಪತಪವನೆ ಮಾಡಿ ದಣಿಯಲು ಬೇಡ
ಕಪಿಯಾಗಿ ಅಡಿಗಡಿಗ್ಹಾರಲು ಬೇಡ
ಉಪಮಾರರಸ ಕಾಶಿ ಕಳಿಯಲು ಬೇಡ
ಚಪಲತನದಲ್ಲಿ ಫಲವಿಲ್ಲೊ ಮೂಢ ||

ಜಾಗ್ರತೆಯಲಿ ನಿದ್ರೆ ಕಳೆಯಲುಬೇಡ
ಆಗ್ರಹವನ್ನು ಬಿಟ್ಟು ಒಣಗಲುಬೇಡ
ಸೋಗು ಮಾಡಿ ಮಾತು ಕಳೆಯಲುಬೇಡ
ಗೂಗೆ ಹಾಗೆ ಕಣ್ಣು ಮುಚ್ಚಲುಬೇಡ ||

ಹೆಣ್ಣು ಹೊನ್ನು ಮಣ್ಣು ಜರೆದಿಡಬೇಡ
ಅನ್ನ ವಸ್ತ್ರ ನೀನು ತೊರೆದಿಡಬೇಡ
ನನ್ನದೆಂದು ದೇಹ ನಂಬಲುಬೇಡ
ತಣ್ಣೀರು ಮುಣುಗಿ ನಡುಗಲುಬೇಡ ||

ಮಹಾವಿಷ್ಣುವನ್ನು ಮರೆತಿರಬೇಡ
ನಾಯಾಸದಿನದಲ್ಲಿ ಶ್ರಮ ಬಿಡಬೇಡ
ಕುಹಕಬುದ್ಧಿಯಲಿ ಕುಣಿದಾಡಬೇಡ
ಪುರಂದರವಿಠಲನ್ನ ಮರೆತಿರಬೇಡ ||
***

pallavi

jnAnavonde sAku muktige innEnu bEku huccu maruLe

caraNam 1

pita mAte sati sutaragalira bED yatiyAgi araNya carisalu bEDa
varada nEmava mADi daNiyalu bEDa satiyilladavarige sadgati illo mUDha

caraNam 2

japa tapavane mADi daNiyalu bEDa kapiyAgi aDigaDighAralu bEDa
upamArarasa kAsi kaLiyalu bEDa capalatanadalli balavillo mUDha

caraNam 3

jAgradeyali nidre kaLeyalu bEDa Agrahavanu biTTu oNagalu bEDa
sOgu mADi mAtu kaLeyalu bEDa kUge hAge kaNNu muccalu bEDa

caraNam 4

honnu hoNNu maNNu jaredire bEDa anna vastra nInu toredire bEDa
nannadendu dEha nambalu bEDa taNNiru muNugi naDugaLu bEDa

caraNam 5

mAhAviSNu mUrtiya maredire bEDa nAyasadinadalli shrama biDa bEDa
guhaka buddhiyali kuNidADa bEDa purandara viTTalanna maredire bEDa
***


ಜ್ಞಾನವೊಂದೇ ಸಾಕು ಮುಕ್ತಿಗೆ - ಇ - |ನ್ನೇನು ಬೇಕು ಹುಚ್ಚುಮರುಳು ಮಾನವನೆ ಪ.

ಪಿತ ಮಾತೆಸತಿ ಸುತರನಗಲಿರಬೇಡ |ಯತಿಯಾಗಿ ಆರಣ್ಯ ಚರಿಸಲು ಬೇಡ ||ವ್ರತ - ನೇಮವ ಮಾಡಿ ದಣಿಯಲು ಬೇಡ |ಸತಿಯಿಲ್ಲದವಗೆ ಸದ್ಗತಿಯಿಲ್ಲೋ ಮೂಢ 1

ಜಪತಪವನೆ ಮಾಡಿ ಸೊರಗಲುಬೇಡ |ಕಪಿಯಂತೆ ಅಡಿಗಡಿಗೆ ಹಾರಲುಬೇಡ ||(ಉಪವಾಸಪಾಶಕ್ಕೆ) ಸಿಕ್ಕಲುಬೇಡ |ಚಪಲತನದಲೇನು ಫಲವಿಲ್ಲೋ ಮೂಢ 2

ಜಾಗರದಲಿ ನಿದ್ರೆ ಕೆಡಿಸಲು ಬೇಡ |ಓಗರವನು ಬಿಟ್ಟು ಒಣಗಲು ಬೇಡ ||ಸೋಗುಮಾಡಿ ಹೊತ್ತು ಕಳಿಯಲು ಬೇಡ |ಗೊಗೆ ಹಾಗೆ ಕಣ್ಣು ತಿರುಗಿಸಬೇಡ 3

ಹೊನ್ನು - ಹೆಣ್ಣು - ಮಣ್ಣು ಜರೆದಿರಬೇಡ |ಅನ್ನ - ವಸ್ತ್ರಗಳನ್ನು ತೊರೆದಿರಬೇಡ ||ಬಣ್ಣದ ದೇಹವ ನೆಚ್ಚಲುಬೇಡ |ತಣ್ಣೀರೊಳಗೆ ಮುಳುಗಿ ನಡುಗಲು ಬೇಡ 4

ಮಹಾವಿಷ್ಣುಮೂರ್ತಿಯ ಮರೆತಿರಬೇಡ |ಸಾಹಸದಿಂದಲಿ ಶ್ರಮ ಪಡಬೇಡ ||ಕುಹಕ ಬುದ್ಧಿಯಲಿ ಕುಣಿದಾಡಬೇಡ |ಮಹಿಮ ಪುರಂದರವಿಠಲನ ಮರೆಯದಿರೊ ಮೂಢ 5
*******

No comments:

Post a Comment