Friday, 1 October 2021

ಯಾರು ಒಲಿದರೇನು ನಮಗಿನ್ನಾರು purandara vittala YAARU OLIDARENU NAMAGINNAARU MUNIDARENU



ಆರು (ಯಾರು) ಒಲಿದರೇನು , ನಮಗಿ-
-ನ್ನಾರು ಮುನಿದರೇನು ||ಪ||

ಕ್ಷೀರಸಾಗರಶಾಯಿಯಾದವನ
ಸೇರಿದಂಥ ಹರಿದಾಸರಿಗೆ ||ಅ.ಪ||

ಊರನಾಳುವ ದೊರೆಗಳು ನಮ್ಮ ದೂರ ಅಟ್ಟಿದರೇನು
ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು
ಮಾರಿ ಹಿಂಡು ಮತ್ತೆ ಮುಸುಕಿದ ದಂಡು ಮೈಗೆ ಮುತ್ತಿದರೇನು
ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ ||

ಪಡೆದ ತಾಯಿ ನಮ್ಮೊಳು ಅಹಿತ ಮಾಡಿದರೇನು
ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು
ಒಡನಾಡುವ ಗೆಳೆಯರು ನಮ್ಮೊಳಗೆ ವೈರವ ಬೆಳೆಸಿದರೇನು
ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ ||

ಕಾನನದೊಳ್ಹರಿಯುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕ್ರಿಮಿ ಕೀಟಗಳು ಚರ್ಮಕೆ ಮುತ್ತಿದರೇನು
ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು
ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ ||
****

ರಾಗ ಆನಂದಭೈರವಿ ಆದಿತಾಳ (raga tala may differ in audio)

pallavi

Aru olidarEnu namaginnAru munidarEnu

anupallavi

kSIra sAgara shAyi yAdavana sEridantha haridAsarige

caraNam 1

UranALuva doregaLu nammanu dUra aTTidarEnu
ghOrAraNyadi tiruguva mrgagaLu aDDa kaTTidarEnu
mari hiNDu matte musukina daNDu maigai muttidarEnu
vArijanAbhana vasudEva sutana sAruvantha haridAsarige

caraNam 2

paDeda tAyi tande nammoLu ahita mADidarEnu
maDadi makkaLu maneya neNTaru munisuguTTidarEnu
oDanADuva gauyaru nammoLage vairava beLesidarEnu
kaDala shayana karuNAnidhi nAmavu oDaloLagiha haridAsarige

caraNam 3

kAnanadoLa haridADuva sarpavu kAlige suttidarEnu
jEninandadi kITa krimigaLu carmake muttidarEnu
bhAnu nandana budha mangaLarA balavu tappidarEnu
dInanAtha shrI purandara viTTalana dhyAnavuLLa haridAsarige
***

ಆರು ಒಲಿದರೇನು ನಮಗಿನ್ನಾರು ಮುನಿದರೇನು
ಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆ ಪ.

ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನು
ಮಡದಿ ಮಕ್ಕಳು ನೆಂಟರಿಷ್ಟರುಮುನಿಸು ಮಾಡಿದರೇನು
ಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನು
ಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ 1

ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನು
ಮಾರಿಯಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||
ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನು
ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ 2

ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||
ಭಾನು ಮಂಗಳಬುಧ ಶುಕ್ರಂಗಳ ಬಲುವು ತಪ್ಪಿದರೇನು
ಮಾಣದೆಭಜಿಸುವ ಪುರಂದರವಿಠಲನ ಒಲುಮೆಯುಳ್ಳ ಹರಿದಾಸರಿಗೆ3
******
ankita siri vittala
ರಾಗ ಶಂಕರಾಭರಣ ಆದಿತಾಳ)

ಆರು ಒಲಿದರೇನು ನಮಗಿನ್ನಾರು ಮುನಿದರೇನು
ಕ್ಷೀರಸಾಗರಶಯನ ಹರಿಯ ಸೇರಿದ ಹರಿದಾಸರಿಗೆ ||ಪ||

ಪಡೆದ ತಾಯಿಯು ತಂದೆಯು ನಮ್ಮೊಳಗೆ ಅಹಿತರು ಆದರೇನು
ಮಡದಿ ಮಕ್ಕಳು ಮನೆಗಳು ನೆಂಟರು ಮುನಿಸುಗುಟ್ಟಿದರೇನು
ಒಡನೆ ತಿರುಗುವ ಆ ಗೆಳೆಯನು ಮನದೊಳು ವೈರವ ಬೆಳೆಸಿದರೇನು
ಕಡಲಶಯನನ ಕರುಣಾರೂಪನ ಒಲುಮೆಯುಳ್ಳ ಹರಿದಾಸರಿಗೆ ||೧||

ಊರನು ಆಳುವ ದೊರೆಯು ನಮ್ಮನು ಹೊರಗೆ ಹಾಕಿದರೇನು
ಘೋರಾರಣ್ಯದೊಳು ಆಡುವ ಮೃಗಗಳು ಅಡ್ಡಗಟ್ಟೀದರೇನು
ಮಾರಿ ಹಿಂಡು ಮುಸುಕಿದ ದಂಡು ಮೈಗೆ ಮುತ್ತಿದರೇನು
ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ ||೨||

ಕಾನನದೊಳು ಹರಿದಾಡುವ ಉರಗವು ಕಾಲಿಗೆ ಸುತ್ತಿದರೇನು
ಜೇನಿನ ಅಂದದಿ ಕ್ರಿಮಿಕೀಟಂಗಳು ಚರ್ಮಕೆ ಮುತ್ತಿದರೇನು
ಭಾನುಮಂಡಲ ಭಜಿಸುವ ಭಕ್ತರ ಬಲಗಳು ತಪ್ಪಿದರೇನು

ಮನದಲಿ ಸಿರಿವರ ವಿಠ್ಠಲನ ಒಲುಮೆಯುಳ್ಳ ಹರಿದಾಸರಿಗೆ ||೩
*******

No comments:

Post a Comment