ರಾಗ ಶಂಕರಾಭರಣ ಝಂಪೆ ತಾಳ
ನೆಚ್ಚಬೇಡ ಪ್ರಾಣಿ ಸಂಸಾರ ಸ್ಥಿರವೆಂ-
ದ್ಹುಚ್ಚು ಬುದ್ಧಿಲಿ ನೀನು ಕೆಡಬೇಡ ಕಂಡ್ಯ
ಸ್ವೇಚ್ಛೆಯಿಂದಿರದೆ ಧರ್ಮದಿ ನೀನು ನಡೆ ಕಣ್ಣ
ಮುಚ್ಚಿದ ಮೇಲುಂಟೆ ನರಜನ್ಮ ಸ್ಥಿರವೆಂದು ||ಪ||
ನೆಂಟರಿಷ್ಟರು ಬಂದು ಬಳಗವು ಹರಿ ಕೊಟ್ಟ-
ದುಂಟಾದರೆ ಬಾಚುವರು
ಕಂಟಕ ಬಂದಾಗ ಒಪ್ಪೊತ್ತಿರದು ಕಡೆಗೆ
ಕುಂಟೆಯ ತರಿದೊಟ್ಟಿ ಸುಡುವರು ನಿನ್ನ ||
ಅತಿಪ್ರೀತಿಯಿಂದಲಿ ಮದುವ್ಯಾದ ಮೋಹದ
ಸತಿ ನಿನ್ನ ಮರಣಕಾಲದಲ್ಲಿ
ಗತಿಯಾರು ತನಗೆಂದು ಗೋಳಿಡುವಳಲ್ಲದೆ
ಜೊತೆಯಾಗಿ ನಿನ್ನ ಸಂಗಡ ಬಾಹೋಳಲ್ಲ ||
ಒಂದೆಂದು ಪರಿಯ ಪ್ರೇಮವ ಮಾಡಿ ಸಲಹಿದ
ಕಂದ ನಿನ್ನವಾಸನಕಾಲದಲ್ಲಿ
ಮುಂದೆ ಸಂಸಾರ ನಡೆವ ಉಪಾಯವು ಆವು-
ದೆಂದು ಚಿಂತಿಸುವ ಸಂಗಡ ಬಾಹೋನಲ್ಲ ||
ಅಷ್ಟ ಕಂಭವನಿಕ್ಕಿ ಚೌಕದುಪ್ಪರಿಗೆಯ
ಕಟ್ಟಿದ ಮನೆಯು ಇದ್ದಲ್ಲೆ ಇಹುದು
ಹೊಟ್ಟೆ ತುಂಬ ಉಣದೆ ಅರ್ಥವ ಗಳಿಸಿದ್ದು
ಒಟ್ಟಿಟ್ಟಲ್ಲಿರದೆ ಸಂಗಡ ಬಾಹೋದಲ್ಲ ||
ಇಂತು ಒಂದೊಂದರಿಂದಲೂ ಪ್ರಯೋಜನವಿಲ್ಲ
ಅಂತ್ಯ ಕಾಲಕೆ ಒಂದೂ ಬಾಹೋದಲ್ಲ
ಕಂತುಜನಕ ಸಿರಿಪುರಂದರವಿಠಲನ
ಸಂತತ ಚಿಂತೆಯೊಳಿರು ಕಂಡ್ಯ ಮನುಜ ||
***
ನೆಚ್ಚಬೇಡ ಪ್ರಾಣಿ ಸಂಸಾರ ಸ್ಥಿರವೆಂ-
ದ್ಹುಚ್ಚು ಬುದ್ಧಿಲಿ ನೀನು ಕೆಡಬೇಡ ಕಂಡ್ಯ
ಸ್ವೇಚ್ಛೆಯಿಂದಿರದೆ ಧರ್ಮದಿ ನೀನು ನಡೆ ಕಣ್ಣ
ಮುಚ್ಚಿದ ಮೇಲುಂಟೆ ನರಜನ್ಮ ಸ್ಥಿರವೆಂದು ||ಪ||
ನೆಂಟರಿಷ್ಟರು ಬಂದು ಬಳಗವು ಹರಿ ಕೊಟ್ಟ-
ದುಂಟಾದರೆ ಬಾಚುವರು
ಕಂಟಕ ಬಂದಾಗ ಒಪ್ಪೊತ್ತಿರದು ಕಡೆಗೆ
ಕುಂಟೆಯ ತರಿದೊಟ್ಟಿ ಸುಡುವರು ನಿನ್ನ ||
ಅತಿಪ್ರೀತಿಯಿಂದಲಿ ಮದುವ್ಯಾದ ಮೋಹದ
ಸತಿ ನಿನ್ನ ಮರಣಕಾಲದಲ್ಲಿ
ಗತಿಯಾರು ತನಗೆಂದು ಗೋಳಿಡುವಳಲ್ಲದೆ
ಜೊತೆಯಾಗಿ ನಿನ್ನ ಸಂಗಡ ಬಾಹೋಳಲ್ಲ ||
ಒಂದೆಂದು ಪರಿಯ ಪ್ರೇಮವ ಮಾಡಿ ಸಲಹಿದ
ಕಂದ ನಿನ್ನವಾಸನಕಾಲದಲ್ಲಿ
ಮುಂದೆ ಸಂಸಾರ ನಡೆವ ಉಪಾಯವು ಆವು-
ದೆಂದು ಚಿಂತಿಸುವ ಸಂಗಡ ಬಾಹೋನಲ್ಲ ||
ಅಷ್ಟ ಕಂಭವನಿಕ್ಕಿ ಚೌಕದುಪ್ಪರಿಗೆಯ
ಕಟ್ಟಿದ ಮನೆಯು ಇದ್ದಲ್ಲೆ ಇಹುದು
ಹೊಟ್ಟೆ ತುಂಬ ಉಣದೆ ಅರ್ಥವ ಗಳಿಸಿದ್ದು
ಒಟ್ಟಿಟ್ಟಲ್ಲಿರದೆ ಸಂಗಡ ಬಾಹೋದಲ್ಲ ||
ಇಂತು ಒಂದೊಂದರಿಂದಲೂ ಪ್ರಯೋಜನವಿಲ್ಲ
ಅಂತ್ಯ ಕಾಲಕೆ ಒಂದೂ ಬಾಹೋದಲ್ಲ
ಕಂತುಜನಕ ಸಿರಿಪುರಂದರವಿಠಲನ
ಸಂತತ ಚಿಂತೆಯೊಳಿರು ಕಂಡ್ಯ ಮನುಜ ||
***
pallavi
necca bEDa prANi samsAra sthiravend-huccu buddhili nInu keDa bEDa kaNDya svEccheyindirade dharmadi nInu naDe kaNNa muccida mEluNTe narajanma sthiravendu
caraNam 1
neNTariSTaru bandu baLagavu hari koTTu duNTAdare bAcuvaru
kaNTaka bandAga oppottiradu kaDege kaNTeya taridoTTi suDuvaru ninna
caraNam 2
ati prItiyindali maduvyAda mOhada sati ninna maraNa kAladalli
gati yAru tanagendu gOLiDuvaLallade joteyAgi ninna sangaDabAhOLalla
caraNam 3
ondendu pariya prEmava mADi salahida kanda ninnavAsana kAladalli
munde samsAra naDeva upAyavu Avudendu cintisuva sangaLa bAhOnalla
caraNam 4
aSTa kambhavanikki cauka dupparigeya kaTTida maneyu iddalle ihudu
hoTTe tumba uNade arttava gaLIsiddu oTTiTTallirade sangaDa bAhOdalla
caraNam 5
indu ondondarindalU prayOjanavilla antya kAlake ondU bAhOdalla
kandu janaka siri purandara viTTalana santata cinteyoLiru kaNDya manuja
***
No comments:
Post a Comment