Wednesday, 4 December 2019

ಡಂಭಕ ಭಕ್ತಿಗೆ ಮೆಚ್ಚಿ ಕೊಡನು ಕೃಷ್ಣ purandara vittala

ರಾಗ ಕಾಂಭೋಜ. ಝಂಪೆ ತಾಳ

ಡಂಭಕ ಭಕ್ತಿಗೆ ಮೆಚ್ಚಿ ಕೊಡ(ಳ್ಳ?)ನು ಕೃಷ್ಣ ||ಪ||
ಡೊಂಬ ಲಾಗವ ಹಾಕಿ ಡೊಂಡೊಂಡೆ ಹೊರಳಿದರಿಲ್ಲ ||ಅ||

ಹೆಚ್ಚೆಚ್ಚು ಬಯಸಿದರಿಲ್ಲ ಹೆಚ್ಚರಿಕೆ ತತಿಗಿಲ್ಲ
ಕಚ್ಚೆಕೈ ಶುದ್ಧವಿಲ್ಲದೆ ಕರ್ಮವಿಲ್ಲ
ಬಚ್ಚಿಟ್ಟರಿಲ್ಲ ನಿರ್ಭಾಗ್ಯರಿಗೆ ಇಂದೆನ್ನ
ಅಚ್ಯುತಾನಂತ ಶ್ರೀಹರಿಯ ನೆನೆ ಕಂಡ್ಯ ಮನವೆ ||

ಕೆಟ್ಟನೆಂದರು ಇಲ್ಲ ಕ್ಲೇಶಪಟ್ಟರು ಇಲ್ಲ
ಅಟ್ಟಮಡಿಸಿ ನಿಷ್ಠೂರ ಆಡಿದರಿಲ್ಲ
ವಟವಟನೆ ಕಪ್ಪೆಯಂತೆ ಒದರಿಕೊಂಡರು ಇಲ್ಲ
ಬೆಟ್ಟದಿಂದ ತಲೆ ಕೆಳಗೆ ಬಿದ್ದರೂ ಇಲ್ಲ ||

ಕನ್ನವಿಟ್ಟರು ಇಲ್ಲ ಕಡಿದಾಡಿದರು ಇಲ್ಲ
ಕುನ್ನಿಯಂತ್ಯಾವಾಗ ಕೂಗಿದರು ಇಲ್ಲ
ತಾನೆ ಕೊಡದನಕ ಕೊಸರಿಕೊಂಡರು ಇಲ್ಲ
ಚೆನ್ನ ಪುರಂದರವಿಠಲನ್ನ ದೂರಿದರಿಲ್ಲ ||
*********

No comments:

Post a Comment