Saturday 4 December 2021

ಏನು ಬೇಡಲಿ ನಿನ್ನ ಹರಿಯೆ ಚಂಚಲ ಕಠಿಣನ purandara vittala ENA BEDALI NINNA HARIYE CHANCHALA KATHINANA



ಪುರಂದರದಾಸರು
ಏನ ಬೇಡಲಿ ನಿನ್ನ ಚಂಚಲ ಕಠಿಣನ ||ಪ||
ಮೌನದಿಂದಲಿ ಮೋರೆ ಓರೆ ಮಾಡುವನ ||ಅ.ಪ||

ಕರುಳ ಹರಕನ ಬೇಡಲೇನು ತಿರಿದು ತಿಂಬುವನ ಕೊರಳಗೊಯ್ಯ
ಅರಣ್ಯ ತಿರುಗುವವ ತಿರುಗಿ ಬೆಣ್ಣೆ ಕದ್ದು ತಿಂಬುವನ ||೧||

ವಾಸಶೂನ್ಯನ ಕೈಯ್ಯ ಕತ್ತಿ ಬೀಸಿ ಸವರುವನ ಕಾಸು ವೀಸವನೆಲ್ಲ
ಮೀಸಲು ಮಾಡಿಟ್ಟು ಕೇಸಕ್ಕಿ ಉಂಡುಂಡು ವಾಸ ಮಾಡುವನ ||೨||

ಬೇಡಿದರೆ ನೀಡಿ ಅವರ ಮೋರೆ ಬಿಡೆಯವನು ನೋಡಿ ಬಡವರ ಕರೆತಂದು
ಅಡಿಗೆ ಸೇರಿಸಿಕೊಂಡ ಒಡೆಯ ಶ್ರೀಪುರಂದರ ವಿಠಲ ದೊರೆಯೆ ||೩||
***

Ena bEDali ninna caMcala kaThiNana ||p||
mounadiMdali mOre Ore maaDuvana ||a.p||

karuLa harakana bEDalEnu tiridu tiMbuvana koraLagoyya
araNya tiruguvava tirugi beNNe kaddu tiMbuvana ||1||

vaasashUnyana kaiyya katti bIsi savaruvana kaasu vIsavanella
mIsalu maaDiTTu kEsakki uMDuMDu vaasa maaDuvana ||2||

bEDidare nIDi avara mOre biDeyavanu nODi baDavara karetaMdu
aDige sErisikoMDa oDeya shrIpuraMdara viThala doreye ||3||

***

ಏನು ಬೇಡಲಿ ನಿನ್ನ ಹರಿಯೆ ಪ
ಏನ ಬೇಡಲಿ ನಿನ್ನ, ಚಂಚಲ ಕಠಿಣನ
ಮೌನದಿಂದಲಿ ಮೋರೆ ಓರೆ ಮಾಡುವನ||

ಕರುಳ ಹರಕನ ಬೇಡಲೇನು
ತಿರಿದು ತಿಂಬುವನ ಕೊರಳಗೊಯ್ಯ
ಅರಣ್ಯ ತಿರುಗುವವವ
ತಿರುಗಿ ಬೆಣ್ಣೆ ಕದ್ದು ತಿಂಬುವನ ||

ವಾಸಶೂನ್ಯನ ಕೈಯ ಕತ್ತಿ
ಬೀಸಿ ಸವರುವನ
ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು
ಕೇಸಕ್ಕಿ ಉಂಡುಂಡು ವಾಸ ಮಾಡುವನ ||

ಬೇಡಿದರೆ ನೀಡಿ ಅವರ ಮೋರೆ
ಭಿಡೆಯವನು ನೋಡಿ
ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ
ಒಡೆಯ ಶ್ರೀ ಪುರಂದರವಿಠಲ ದೊರೆಯೆ ||
********

ಏನು ಬೇಡಲಿ ನಿನ್ನ ಹರಿಯೆ ಪ

ಏನ ಬೇಡಲಿ ನಿನ್ನ ಚಂಚಲ ಕಠಿಣನ |ಮಾನದಿಂದ ಮೋರೆ ಓರೆಮಾಡುವನ ಅ.ಪ

ಕರುಳಹರಕನ - ಏನ ಬೇಡಲಿ |ತಿರಿದು ತಿಂಬುವನ ||ಕೊರಳಗೊಯ್ಕ ಅರಣ್ಯ ತಿರುಗವನ ಮೊ - |ಸರು ಬೆಣ್ಣೆ ಕದ್ದು ತಿಂಬವನ 1

ವಾಸಶೂನ್ಯನ - ಬೇಡಲೇನು ಕತ್ತಿ - |ಬೀಸಿ ಸವರುವನ ||ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು |ಕೇಸಕ್ಕಿ ಉಂಡುಂಡು ವಾಸಿಸುವನ2

ಬೇಡಿದರೆ ಕೊಡನ - ಮೋರೆನೋಡಿ |ಭಿಡೆಯ ಹಿಡಿಯದವನ |ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ |ಒಡೆಯ ಪುರಂದರವಿಠಲದೊರೆಯ 3
*********
 ಟಿಪ್ಪಣಿ
ಚಂಚಲ -> ಮತ್ಸ್ಯಾವತಾರದಲ್ಲಿ ಮೀನು ,
ಕಠಿಣ -> ಕೂರ್ಮಾವತಾರದಲ್ಲಿ ಆಮೆ
ಮೋರೆಯನು ಓರೆ ಮಾಡುವ -> ವರಾಹಾವತಾರದಲ್ಲಿ ಹಂದಿ
ಕರುಳ ಹರಕ - ನರಸಿಂಹ
ತಿರಿದು ತಿಂಬುವವ = ವಾಮನ
ಕೊರಳ ಕೊಯ್ಯುವವನು - ಪರಶುರಾಮ
ಅರಣ್ಯದಲ್ಲಿ ತಿರುಗುವವ - ರಾಮ
ಬೆಣ್ಣೆ ಕದ್ದು ತಿನ್ನುವವ - ಕೃಷ್ಣ
ವಾಸಶೂನ್ಯ - ಬುದ್ಧ
ಕೈಗತ್ತಿ ಬೀಸಿ ಸವರುವವವ - ಕಲ್ಕಿ


ಕಾಸು ಕೂಡಿಸುವವ - ತಿರುಪತಿ ತಿಮ್ಮಪ್ಪ 

No comments:

Post a Comment