Saturday, 7 December 2019

ವ್ಯರ್ಥವಲ್ಲವೇ ಜನುಮ ವ್ಯರ್ಥ ವಲ್ಲವೇ ತೀರ್ಥಪದನ purandara vittala


ವ್ಯರ್ಥವಲ್ಲವೆ ಜನುಮ ವ್ಯರ್ಥವಲ್ಲವೇ ||ಪ||

ತೀರ್ಥಪದನ ಭಜಿಸಿ ಕೃತಾರ್ಥನಾಗದವನ ಜನುಮ ||ಅ||

ಮುಗುಳುನಗೆ ಎಳೆತುಳಸಿದಳಗಳನು ಬಲು ಪ್ರೇಮದಿಂದ
ಜಗನ್ಮಯಗರ್ಪಿಸಿ ಕೈಯ ಮುಗಿದು ಸ್ತುತಿಸದವನ ಜನುಮ ||

ಸ್ನಾನ ಸಂಧ್ಯಾನದಿಂದ ಮೌನಮಂತ್ರ ಜಪಗಳಿಂದ
ಧ್ಯಾನದಿಂದ ತಂತ್ರಸಾರ ಹೀನನಾದವನ ಜನುಮ ||

ಶೋಡಷೋಪಚಾರದಿಂದ ನೋಡಿ ರಂಗನ ಪೂಜೆ ಮಾಡಿ
ಕೂಡಿ ಭಜಿಸಿ ಕುಣಿದು ಕೊಂಡಾಡಿ ಪಾಡದವನ ಜನುಮ ||

ಭೋಗಿಶಯನನ ದಿನದಿ ವಿಹಿತ ಭೋಗಂಗಳನೆ ತೊರೆದು ಪರಮ
ಭಾಗವತರ ಮೇಳದೊಳಗೆ ಜಾಗರದಿಂದಿರದವನ ||

ದಾಸರೊಡನೆ ಆಡದವನ ದಾಸರ ಕೂಡೆ ಪಾಡದವನ
ದಾಸರ ಕೊಂಡಾಡದವನ ದಾಸತ್ವ ಪೊಂದದವನ ||

ಹರಿಯ ಗುಣವೆಣಿಸದವನ ಹರಿಯ ಸ್ಮರಣೆಯಿಲ್ಲದವನ
ಹರಿಯ ಕೊಂಡಾಡದವನ ಹರಿಯ ನಂಬದವನ ಜನುಮ ||

ನಗುವರೆಂಬ ಭಾವವಡಗಿ ಜಿಗಿದು ಕುಣಿದು ಮೈಯು ಪುಳಕಿ
ಬಿಗಿದು ಪರವಶತ್ವದಿಂದ ಪೊಗಳಿ ನಲಿಯದವನ ಜನುಮ ||

ಸರ್ವಧರ್ಮ ಸರ್ವಯಜ್ಞ ಸರ್ವತೀರ್ಥಯಾತ್ರೆಗಳನು
ಸರ್ವದಾನ ವಸ್ತ್ರಗಳನ್ನು ಸರ್ವ ವರ್ತಿಸದವನ ಜನುಮ ||

ಭಂಗುರವಾದಂಥ ದೇಹ ಮಂಗಳಾತ್ಮಕನಾದ ಶ್ರೀ-
ರಂಗಪುರಂದರವಿಠಲ ಪಶ್ಚಿಮ ರಂಗಗರ್ಪಿಸದವನ ಜನುಮ ||
****

pallavi

vyarttavillave januma vyarttavillavE tIrttapadana bhajisi krtArttanAga davana januma

caraNam 1

muguLunage eLe tuLasi taLagaLanu balu prEmadinda jaganmaya garpisi kaiya mugidu stutisadavana januma

caraNam 2

snAna sandhyAnadinda mauna mantra japagaLinda dhyAnadinda tantrasAra hInanAdavana januma

caraNam 3

SODashObhacAradinda nODi rangana pUje mADi kUDi bhajisi kuNidu koNDADi pADadavana januma

caraNam 4

bhOgi shayanana dinadi vihita bhOgangaLane toredu parama bhAgavatara mELadoLage jAgaradindiradavana

caraNam 5

dAsaroDane Adadavana dAsara kUDe pADadavana dAsara koNDADadavana dAsatva pondadavana

caraNam 6

hariya guNaveNisadavana hariya smaraNeyilladavana hariya koNDADadavana hariya nambadavana januma

caraNam 7

naguvaremba bhavavaDagi cigidu kuNidu maiyu puLaki bigidu paravashatvadinda pogaLi naliyadavana januma

caraNam 8

sarva dharma sarva yagjnya sarva tIrrta yAtregaLanu sarva dAna vastragaLannu sarva vartisadavana januma

caraNam 9

bhanguravAdantha dEha mangaLAtmakanAda shrI ranga purandara viTTala pashcima ranga garpisadavana januma
***


ವ್ಯರ್ಥವಲ್ಲವೇ| ಜನುಮ| ವ್ಯರ್ಥವಲ್ಲವೇ ||ಪ||

ತೀರ್ಥಪದನ ಭಜಿಸಿ ತಾ ಕೃ| ತಾರ್ಥನಾಗದವನ ಜನುಮ ||ಅ||

ಮುಗುಳುನಗೆ ಎಳೆ ತುಳಸೀ ದ| ಳಗಳನು ಬಲು ಪ್ರೇಮದಿಂದ|| ಜಗನ್ಮಯಗರ್ಪಿಸಿ ಕೈಯ| ಮುಗಿದು ಸ್ತುತಿಸಿದವನ ಜನುಮ ||೧||

ಸ್ನಾನಸಂಧ್ಯಾನದಿಂದ| ಮೌನಮಂತ್ರ ಜಪಗಳಿಂದ|| ಧ್ಯಾನದಿಂದ ತಂತ್ರಸಾರ| ಹೀನನಾದವನ ಜನುಮ ||೨||

ಷೋಡಶೋಪಚಾರದಿಂದ| ನೋಡಿ ರಂಗನ ಫೂಜೆ ಮಾಡಿ|| ಕೂಡಿ ಭಜಿಸಿ ಕುಣಿದು ಕೊಂ| ಡಾಡಿ ಪಾಡದವನ ಜನುಮ ||೩||

ಭೋಗಿಶಯನನ ದಿನದಿ ವಿಹಿತ| ಭೋಗಂಗಳನೆ ತೊರೆದು ಪರಮ|| ಭಾಗವತರ ಮೇಳದೊಳಗೆ| ಜಾಗರದಿಂದಿರದವನ ||೪||

ದಾಸರೊಡನೆ ಆಡದವನ| ದಾಸರ ಕೂಡೆ ಪಾಡದವನ|| ದಾಸರ ಕೊಂಡಾಡದವನ| ದಾಸತ್ವ ಪೊಂದದವನ ||೫||

ಹರಿಯ ಗುಣವೆಣಿಸದವನ| ಹರಿಯ ಸ್ಮರಣೆಯಿಲ್ಲದವನ|| ಹರಿಯ ಕೊಂಡಾಡದವನ| ಹರಿಯ ನಂಬದವನ ಜನುಮ ||೬||

ನಗುವರೆಂಬ ಭಾವವಡಗಿ| ಜಿಗಿದು ಕುಣಿದು ಮೈಯು ಪುಳಕಿ|| ಬಿಗಿದು ಪರವಶತ್ವದಿಂದ| ಪೊಗಳಿ ನಲಿಯದವನ ಜನುಮ ಬಿಗಿದು ಪರವಶತ್ವದಿಂದ | ಪೊಗಳಿ ನಲಿಯದವನ ಜನುಮ ||೭||

ಸರ್ವಧರ್ಮ ಸರ್ವಯಜ್ಞ| ಸರ್ವತೀರ್ಥಯಾತ್ರೆಗಳನು|| ಸರ್ವದಾನವ್ರತಗಳನ್ನು| ಸರ್ವ ವರ್ತಿಸದವನ ಜನುಮ 
||೮||


ಭಂಗುರವಾದಂಥ ದೇಹ| ಮಂಗಳಾತ್ಮಕನಾದ ಶ್ರೀ| ರಂಗ ಪುರಂದರವಿಠಲ ಪಶ್ಚಿಮ| ರಂಗಗರ್ಪಿಸದವನ ಜನುಮ ||೯||
****

No comments:

Post a Comment