ಪುರಂದರದಾಸರು
ರಾಗ ಮಧ್ಯಮಾವತಿ ಆದಿತಾಳ
ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ ||ಪ||
ಕದವ ಮುಚ್ಚಿದಳಿದಕೋ ಚಿಲುಕ ಅಲ್ಲಾಡುತ್ತಿದೆ
ಒದಗಿದ್ದ ಪಾಪವು ಹೋದೀತು ಹೊರಗೆಂದು ||ಅ||
ಭಾರತ ರಾಮಾಯಣ ಪಂಚರಾತ್ರಾಗಮ
ಸಾರತತ್ವದ ಬಿಂದು ಸೇರೀತು ಒಳಗೆಂದು ||
ಅಂದುಗೆ ಕಿರುಗೆಜ್ಜೆ ಮುಂಗಾಲಿಲಳವಟ್ಟು
ಧಿಂ ಧಿಮಿ ಧಿಮಿಕೆಂದು ಕುಣಿವ ದಾಸರ ಕಂಡು ||
ನಂದನ ಕಂದ ಗೋವಿಂದ ಮುಕುಂದನ
ಚಂದವಾದ ಧ್ವನಿ ಹೋದೀತು ಕರ್ಣಕೆಂದು ||
ಹರಿಶರಣರ ಪಾದಸರಸಿಜಯುಗಳದ
ಪರಮಪಾವನವದ ರಜವು ಬಿದ್ದೀತೆಂದು ||
ಮಂಗಳಮೂರುತಿ ಪುರಂದರವಿಠಲನ
ತುಂಗವಿಕ್ರಮ ಪದದಂಗುಳಿ ಸೋಕೀತೆಂದು ||
********
ಕದವನಿಕ್ಕಿದಳಿದೆಕೊ ಗಯ್ಯಾಳಿ ಮೂಳಿ ಪ.
ಕದವನಿಕ್ಕಿದಳಿದಕೊ ಚಿಲಕವಲ್ಲಾಡುತಿದೆ |
ಒದಗಿದ ಪಾಪವು ಹೊರಗೆ ಹೋದೀತೆಂದು ಅ.ಪ
ಭಾರತ - ರಾಮಾಯಣ ಪಂಚರಾತ್ರಾಗಮ |
ಸಾರತತ್ವದ ಬಿಂದು ಕಿವಿಗೆ ಬಿದ್ದೀತೆಂದು 1
ಹರಿಯ ಪಾದಾಂಬುಜಯುಗಳವ ನೆನೆವ ಭ - |
ಕ್ತರ ಪಾದದರಜ ಒಳಗೆ ಬಿದ್ದೀತೆಂದು 2
ಮಂಗಳ ಮೂರುತಿ ಪುರಂದರವಿಠಲನ |
ತುಂಗವಿಕ್ರಮಪಾದ ಅಂಗಳ ಪೊಕ್ಕೀತೆಂದು 3
*******
No comments:
Post a Comment