Friday, 6 December 2019

ಬರಬೇಕೋ ರಂಗಯ್ಯ ನೀ purandara vittala

ಪುರಂದರದಾಸರು
ರಾಗ ಶಂಕರಾಭರಣ. ಅಟ ತಾಳ

ಬರಬೇಕೋ ರಂಗಯ್ಯ ನೀ ಬರಬೇಕೋ ||ಪ||
ಬರಬೇಕೋ ಬಂದು ಒದಗಬೇಕೋ ಮಮ ಗುರು
ನರಹರಿ ನಾರಾಯಣ ನೀನಾ ಸಮಯಕ್ಕೆ ||ಅ||

ಕಂಠಕ್ಕೆ ಪ್ರಾಣ ಬಂದಾಗ ಎನ್ನ
ನೆಂಟರಿಷ್ಟರು ಬಂದಳುವಾಗ
ಗಂಟು ಹುಬ್ಬಿನ ಕಾಲಭಂಟರು ಕವಿದೆನ್ನ
ಗಂಟಲೌಕುವಾಗ ವೈಕುಂಠ ನಾರಾಯಣ ||

ನಾರಿಯು ಪುತ್ರ ಮಿತ್ರರು ಬಂಧುಗ-
ಳಾರೆನ್ನ ಸಂಗಡ ಬಾರರು
ಆರಿಗಾರಿಲ್ಯಮನಾರ್ಭಟಕೆ ಅಸು
ಹಾರಿ ಮೈ ಮರೆವಾಗ ನೀರೇರುಹನಾಭ ||

ಕರಿ ಪ್ರಹ್ಲಾದಾದಿಭಕ್ತರ ಪತಿ
ಕರಿಸಲು ಒದಗಿದೆ ಶ್ರೀಧರ ನೆರೆ
ಹೀನನೆನ್ನ ಉದ್ಧರಿಸಿ ಅಚ್ಯುತ ನಿನ್ನ
ಚರಣದೊಳಿಂಬಿಡೊ ಪುರಂದರವಿಠಲ ||
***

pallavi

bara bEkO rangayya nI bara bEkO

anupallavi

bara bEkO bandu odaga bEkO mama guru narahari nArAyaNa nInA samayakke

caraNam 1

kaNDakke prANa bandAga enna neNTariSTaru bandaLuvAga kaNTu
hubbina kAlabhaNDaru kavidenna kaNThaLaukuvAga vaikuNTha nArAyaNa

caraNam 2

nAriyu putra mitraru bandhugaLArenna sankaTa bAraru ArigArilya
manArphaDage asu hAri mai marevAga nIrEruha nAbha

caraNam 3

kari prahlAdAdi bhaktara pati karislu odagide shrIdhara nere
hInanenna uddharisi acyuta ninna caraNadoLimbiDo purandara viTTala
***

ಬರಬೇಕೋ ರಂಗಯ್ಯ ನೀ - ಬರಬೇಕೊ ಪ

ಬರಬೇಕೊ ಬಂದು ಒದಗಬೇಕೊ ಮಮಗುರು |ನರಹರಿ ನಾರಾಯಣ ನೀನಾ ಸಮಯಕೆ ಅ.ಪ

ಕಂಠಕೆ ಪ್ರಾಣ ಬಂದಾಗ - ಎನ್ನ |ನಂಟರಿಷ್ಟರು ಬಂದಳುವಾಗ ||ಗಂಟು ಹುಟ್ಟಿನ ಕಾಲಬಂಟರು ಕವಿದೆನ್ನ |ಗಂಟಲೌಕುವಾಗ ವೈಕುಂಠನಾರಾಯಣ 1

ನಾರಿಯು ಪುತ್ರ ಮಿತ್ರರು -ಬಂಧುಗಳು |ಆರೆನ್ನ ಸಂಗಡ ಬಾರರು ||ಆರಿಗಾರಿಲ್ಲ ಯಮನಾರುಭಟಕೆ ಅಸು-|ರಾರಿ ಮೈಮರೆದಾಗ ನೀರೇರುಹನಾಭ 2

ಕರಿಪ್ರಹಲ್ಲಾದಾದಿ ಭಕ್ತರ -ಪತಿ|ಕರಿಸಲು ಒದಗಿದೆ ಶ್ರೀಧರ ||ನೆರೆಹೀನನೆನ್ನ ಉದ್ಧರಿಸಿಅಚ್ಯುತನಿನ್ನ |ಚರಣದೊಳಿಂಬಿಡೊ ಪುರಂದರವಿಠಲ 3
*******

No comments:

Post a Comment