Friday, 6 December 2019

ರಾಮ ಗೋವಿಂದ ಸೀತಾ ರಾಮ ಗೋವಿಂದ purandara vittala

ಪುರಂದರದಾಸರು
ರಾಗ ಸೌರಾಷ್ಟ್ರ ಅಟತಾಳ

ರಾಮ ಗೋವಿಂದ ಸೀತಾರಾಮ ಗೋವಿಂದ ||

ತೃಪ್ತಿ ಅಹುದೆ(/ಹೌದೆ) ಹೆತ್ತ ತಾಯಿ ಇಕ್ಕದನಕ
ಭಕ್ತಿ ಅಹುದೆ(/ಹೌದೆ) ಭಕ್ತಜನರ ಸಲಹದನಕ
ಮುಕ್ತಿ ಅಹುದೆ(/ಹೌದೆ) ಭಾವಶುದ್ದಿ ಇಲ್ಲದನಕ
ಚಿತ್ತಶುದ್ದಿ ಆತ್ಮನಿಜವು ತಿಳಿಯದನಕ ||

ಓದಲೇತಕೋ ಮನದಿ ವಿಜ್ಞಾನವಿಲ್ಲದನಕ
ಭೇದವೇತಕೊ ಗತಿಯು ಗಮನ ತಿಳಿಯದನಕ
ಕದನವೇತಕೊ ಭುಜದಿ ಶಕ್ತಿ ಇಲ್ಲದನಕ
ವಾದವೇತಕೊ ಶ್ರುತಿಯ ಶಾಸ್ತ್ರ ತಿಳಿಯದನಕ ||

ನಳಿನವಿದ್ದರೇನು ತುಂಬಿ ಒದಗದನಕ
ದಳವಿದ್ದರೇನು ಧೈರ್ಯ ಕೂಡತನಕ
ಲಲನೆ ಇದ್ದರೇನು ಪುತ್ರರಿಲ್ಲದನಕ
ಚೆಲುವನಾದರೇನು ವಿದ್ಯೆ ಕಲಿಯದನಕ ||

ವನವಿದೇತಕೊ ಶುಕ ಕೋಕಿಲ ಇಲ್ಲದನಕ
ತನುವಿದೇತಕೊ ಪರರ ಹಿತಕೆ ಬಾರದನಕ
ಮನೆಯಿದೇತಕೊ ಅತಿಥಿ ಬಂದಾರಿಲ್ಲದನಕ
ಧನವಿದೇತಕೊ ದಾನಧರ್ಮಕ್ಕೊದಗದನಕ ||

ಹರಿಯ ಚಿಂತೆ ಇರಲು ಅನ್ಯ ಚಿಂತೆಯೇತಕೊ
ಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊ
ಹರಿಯು ಒಲಿದ ಮನುಜನಿಗೆ ದೈನ್ಯವೇತಕೊ
ಸಿರಿವರದ ಪುರಂದರವಿಠಲನಿರಲು ಭಯವು ಏತಕೊ ||
***

pallavi

rAma gOvinda sItrAma gOvinda

caraNam 1

trpti ahude hetta tAyi ikkadanaka bhakti ahude bhaktajanara salahadanaka
mukti ahude bhAvashuddi illadanaka cittashuddi Atma nijavu tiLiyadanaka

caraNam 2

OdalEtakO manadi vijnAnavilladanaka bhEdavEtako gatiyu gamana tiLiyadanaka
kadanavEtako bhujadi shakti illadanaka pAdavEtako shrutiya shAstra tiLiyadanaka

caraNam 3

naLinaviddarEnu tumbi odagatanaka daLaviddarEnu dhairya kUDatanaka
lalane iddarEnu putrarilladanaka celuvanAdarEnu vidye kaliyadanaka

caraNam 4

vanavidEtako shuka kOkila illadanaka tanuvidEtako parara hitake bAradanaka
maneyidEtako atithi bandArilladanaka dhanavidEtako dAna dharmakkodagadanaka

caraNam 5

hariya cinte iralu anya cinteyEtako hariya dhyAnaviralu anya dhyAnavEtako
hariyu olida manujanaige ddainyavEtako sirivarada purandara viTTalaniralu bhayavu Etako
***

ರಾಮ ಗೋವಿಂದ ಸೀತಾ ರಾಮ ಗೋವಿಂದ ಪ.

ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1

ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2

ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3

ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4

ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
*********

No comments:

Post a Comment