ರಾಗ ನಾದನಾಮಕ್ರಿಯೆ ಆದಿತಾಳ
ದಡಮಾಡಿದರು ಯಮನಾಳುಗಳು
ಓಡಿ ಬಂದರು ಏಳೇಳೆನುತ
ಏಳಾಲೆಳೆದರು , ಪಾಪಿಯ
ಬೀಳಾಲೆಳೆದರು || ಪ||
ಭವಂತಿ ಮಾಳಿಗೆ ದೊಡ್ಡ ಪಡಸಾಲೆ
ಚಿಕ್ಕಮಕ್ಕಳು ದೊಡ್ಡಮಕ್ಕಳು
ಆದ ಮದುವೆಯು ಆಗದ ಮದುವೆಯು
ಒಂದೊಂದು ಸಾವಿರ ಸಾಲವ ಕೊಟ್ಟು
ಬಡ್ಡಿಬಾಕಿ ಬರಲೇ ಇಲ್ಲ
ಬಿಟ್ಟು ಹೇಗೆ ಬರಲೊ , ಮನ
ಕೆಟ್ಟು ಹೇಗೆ ಬರಲೊ ||
ಚಿತ್ರದ ಮನೆಗಳು ಬೆಳ್ಳಿಕಂಬ
ಚಿನ್ನದ ಬೋದಿಗೆ ರತ್ನದ ಕೆಲಸ
ಉಪ್ಪರಿಗೆ ನೋಡಿ ಪ್ರೀತಿಯಾಗಿ
ನಾನಿರುವೋದು ಕಂಡು
ಕರೆವೊರೇನೊ* ಎನ್ನ , ಯಮನೆ
ಎಳೆವೊರೇನೊ ಎನ್ನ ||
ನಿನ್ನೆ ಮೊನ್ನೆ ಒಬ್ಬಳು ಕನ್ಯೆ ಮದುವ್ಯಾದೆ
ಪೊನ್ನು ಭಂಗಾರ ಬೆಳ್ಳಿ ಬಹಳ ಎನ್ನ
ಮನೆಯಲಿ ಕರೆವೋದು ನೂರೆಂಟು ಎಮ್ಮೆ
ಉಂಬೊ ಉಡುವೊ ಪ್ರಾಯವ ಬಿಟ್ಟು
ನಿನ್ನಾಣೆ ಬರಲಾರೆನೊ , ಯಮನೆ
ಎನ್ನಾಣೆ ಬರಲಾರೆನೊ ||
ದಡ್ಡಂ ತೊಕ್ಕರು ದೂತರು ಕೋಪದಿ
ಕಡ್ಡಾಯ ಮಾಡಿ ಕರೆಯಲು ಅವನ
ಬಡ್ಡಿ ಫಣಿವರ ಬರಲೇ ಇಲ್ಲ
ದೊಡ್ಡವರು ಬಂದರಲ್ಲ
ಇನ್ನು ಮೂರು
ಚಿಕ್ಕವರು ಬಂದರಲ್ಲ ||
ದೊಡ್ಡ ತಲೆ ಯಮನ ದೂತರು
ಗಡ್ಡದ ದೂತರು ಓಡಿ ಬಂದರು
ದೊಡ್ಡ ನಾಯಿಗಳ ಟೊಂಕಕೆ ಬಿಗಿದು
ಚಿಕ್ಕ ನಾಯಿಗಳ ಎಡಕೈಯಲಿ ಕೊಂಡು
ಬತ್ತೀಸಾಯುಧ ಮೈಯಲಿ ಧರಿಸಿ
ದೊಡ್ಡ ಈಟಿಯವರೊ
ಇನ್ನು ಮೂರು
ಚಿಕ್ಕ ಈಟಿಯವರೊ ||
ಕತ್ತಲು ಎಂಬೋದು ಮುನ್ನೂರು ಮೂ-
ವತ್ತೆರಡು ಗಾವುದ, ಗೇಣಿಗೆ ಒಂದು
ಉಕ್ಕಿನ ಧ್ವಜಗಳು, ಅದರಲಿ ನೆಗ್ಗಿನ ಮುಳ್ಳು
ನಡೆಯಲಾರೆ ನಾನು , ಯಮನೆ
ತಡೆಯಲಾರೆ ನಾನು ||
ಕಾಶೀತೀರ್ಥವ ಬೇಡದೆ ಇವನು
ಶುಂಠಿ ಬೆಲ್ಲವ ಬೇಡಿದನಿವನು
ಕಾಲಕಂಟಕರು ಸೀಸವ ಕಾಸಿ
ಹೊಯಿದರು ಬಾಯೊಳಗೆ , ಅವನಿಗೆ
ಹೊಯಿದರು ಬಾಯೊಳಗೆ ||
ಏನೇನು ಪಾಪವ ಮಾಡಿದನಿವನು
ಏನೇನು ಕರ್ಮವ ಮಾಡಿದನಿವನು
ಅಕ್ಕತಂಗೇರ ಒದ್ದನಿವನು
ತಾಯಿತಂದೆಗಳ ಬಯ್ದವನು
ದಾರಿಗೆ ಮುಳ್ಳು ಹಾಕಿದನಿವನು
ಹರಿದಿವಸದಲಿ ಉಂಡವನಿವನು
ನರಕಕ್ಕೆ ನೂಕಿರೊ , ಕುಂಭೀ-
ಪಾಕಕ್ಕೆ ನೂಕಿರೊ ||
ಹಿಂದೆ ಮಾಡಿದವರಿಗೆ ಹೀಗೆ
ಇಷ್ಟು ತೆರವಾಯಿತು
ಮುಂದೆ ಜನರು ತಿಳಿದು ಬದುಕಿರಿ
ಶ್ರೀಗುರುಪುರಂದರವಿಠಲರಾಯರ
ಸ್ಮರಣೆಯ ಮಾಡಿರೊ, ಜನರು
ಧರ್ಮವ ಮಾಡಿರೊ ||
**********
ದಡಮಾಡಿದರು ಯಮನಾಳುಗಳು
ಓಡಿ ಬಂದರು ಏಳೇಳೆನುತ
ಏಳಾಲೆಳೆದರು , ಪಾಪಿಯ
ಬೀಳಾಲೆಳೆದರು || ಪ||
ಭವಂತಿ ಮಾಳಿಗೆ ದೊಡ್ಡ ಪಡಸಾಲೆ
ಚಿಕ್ಕಮಕ್ಕಳು ದೊಡ್ಡಮಕ್ಕಳು
ಆದ ಮದುವೆಯು ಆಗದ ಮದುವೆಯು
ಒಂದೊಂದು ಸಾವಿರ ಸಾಲವ ಕೊಟ್ಟು
ಬಡ್ಡಿಬಾಕಿ ಬರಲೇ ಇಲ್ಲ
ಬಿಟ್ಟು ಹೇಗೆ ಬರಲೊ , ಮನ
ಕೆಟ್ಟು ಹೇಗೆ ಬರಲೊ ||
ಚಿತ್ರದ ಮನೆಗಳು ಬೆಳ್ಳಿಕಂಬ
ಚಿನ್ನದ ಬೋದಿಗೆ ರತ್ನದ ಕೆಲಸ
ಉಪ್ಪರಿಗೆ ನೋಡಿ ಪ್ರೀತಿಯಾಗಿ
ನಾನಿರುವೋದು ಕಂಡು
ಕರೆವೊರೇನೊ* ಎನ್ನ , ಯಮನೆ
ಎಳೆವೊರೇನೊ ಎನ್ನ ||
ನಿನ್ನೆ ಮೊನ್ನೆ ಒಬ್ಬಳು ಕನ್ಯೆ ಮದುವ್ಯಾದೆ
ಪೊನ್ನು ಭಂಗಾರ ಬೆಳ್ಳಿ ಬಹಳ ಎನ್ನ
ಮನೆಯಲಿ ಕರೆವೋದು ನೂರೆಂಟು ಎಮ್ಮೆ
ಉಂಬೊ ಉಡುವೊ ಪ್ರಾಯವ ಬಿಟ್ಟು
ನಿನ್ನಾಣೆ ಬರಲಾರೆನೊ , ಯಮನೆ
ಎನ್ನಾಣೆ ಬರಲಾರೆನೊ ||
ದಡ್ಡಂ ತೊಕ್ಕರು ದೂತರು ಕೋಪದಿ
ಕಡ್ಡಾಯ ಮಾಡಿ ಕರೆಯಲು ಅವನ
ಬಡ್ಡಿ ಫಣಿವರ ಬರಲೇ ಇಲ್ಲ
ದೊಡ್ಡವರು ಬಂದರಲ್ಲ
ಇನ್ನು ಮೂರು
ಚಿಕ್ಕವರು ಬಂದರಲ್ಲ ||
ದೊಡ್ಡ ತಲೆ ಯಮನ ದೂತರು
ಗಡ್ಡದ ದೂತರು ಓಡಿ ಬಂದರು
ದೊಡ್ಡ ನಾಯಿಗಳ ಟೊಂಕಕೆ ಬಿಗಿದು
ಚಿಕ್ಕ ನಾಯಿಗಳ ಎಡಕೈಯಲಿ ಕೊಂಡು
ಬತ್ತೀಸಾಯುಧ ಮೈಯಲಿ ಧರಿಸಿ
ದೊಡ್ಡ ಈಟಿಯವರೊ
ಇನ್ನು ಮೂರು
ಚಿಕ್ಕ ಈಟಿಯವರೊ ||
ಕತ್ತಲು ಎಂಬೋದು ಮುನ್ನೂರು ಮೂ-
ವತ್ತೆರಡು ಗಾವುದ, ಗೇಣಿಗೆ ಒಂದು
ಉಕ್ಕಿನ ಧ್ವಜಗಳು, ಅದರಲಿ ನೆಗ್ಗಿನ ಮುಳ್ಳು
ನಡೆಯಲಾರೆ ನಾನು , ಯಮನೆ
ತಡೆಯಲಾರೆ ನಾನು ||
ಕಾಶೀತೀರ್ಥವ ಬೇಡದೆ ಇವನು
ಶುಂಠಿ ಬೆಲ್ಲವ ಬೇಡಿದನಿವನು
ಕಾಲಕಂಟಕರು ಸೀಸವ ಕಾಸಿ
ಹೊಯಿದರು ಬಾಯೊಳಗೆ , ಅವನಿಗೆ
ಹೊಯಿದರು ಬಾಯೊಳಗೆ ||
ಏನೇನು ಪಾಪವ ಮಾಡಿದನಿವನು
ಏನೇನು ಕರ್ಮವ ಮಾಡಿದನಿವನು
ಅಕ್ಕತಂಗೇರ ಒದ್ದನಿವನು
ತಾಯಿತಂದೆಗಳ ಬಯ್ದವನು
ದಾರಿಗೆ ಮುಳ್ಳು ಹಾಕಿದನಿವನು
ಹರಿದಿವಸದಲಿ ಉಂಡವನಿವನು
ನರಕಕ್ಕೆ ನೂಕಿರೊ , ಕುಂಭೀ-
ಪಾಕಕ್ಕೆ ನೂಕಿರೊ ||
ಹಿಂದೆ ಮಾಡಿದವರಿಗೆ ಹೀಗೆ
ಇಷ್ಟು ತೆರವಾಯಿತು
ಮುಂದೆ ಜನರು ತಿಳಿದು ಬದುಕಿರಿ
ಶ್ರೀಗುರುಪುರಂದರವಿಠಲರಾಯರ
ಸ್ಮರಣೆಯ ಮಾಡಿರೊ, ಜನರು
ಧರ್ಮವ ಮಾಡಿರೊ ||
**********
No comments:
Post a Comment