Friday, 6 December 2019

ರಂಗ ರಂಗ ಎಂಬ ನಾಮವ ನೆನೆವರ purandara vittala

ಪುರಂದರದಾಸರು
ರಂಗ ರಂಗ ಎಂಬ ನಾಮವ ನೆನೆವರ |ಸಂಗದೊಳಿರಿಸು ಎನ್ನ ಪ

ಅಂಗದೊಳ್ಲೆವರು ದೆಸೆದಸೆಗೆಳೆಯುವ |ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪ

ಹರೆಕೃಷ್ಣ ಎಂದೆಂಬೆಜಿಹ್ವೆತಾನಿರುತಿರೆ |ಬರಿಯೆ ಮಾತಾಡುವೆ ನಾ ||ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |ಗುರುವಹಂಕಾರತನ ||ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |ಮರೆತಿಹೆ ನಾನನುದಿನ |ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ 1

ವೇದ ಶಾಸ್ತ್ರ ಪುರಾಣ ನಾಮವ ನೆನೆವರ |ಚೋದ್ಯವ ನಾನರಿಯೆನು ||ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|ನೋದಗಳ ಮಾಡುತಿಹೆನು ||ಮಾಧವಗೋವಿಂದ ಎನ್ನದೆ ಕಾಲನ |ಬಾಧೆಗಳಿಗೊಳಗಾದೆನೊ ||ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |ಶ್ರೀಧರ ನೀನೆ ಸಲಹೊ-ಸ್ವಾಮಿ 2

ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |ಕಡುಲೋಭತನವ ಬಿಡಿಸೊ ||ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |ನುಡಿವ ನಾಲಗೆಗಿರಿಸೊ ||ಪೊಡವಿಯೊಳುಪುರಂದರವಿಠಲರಾಯನೆ ನಿನ್ನ |ಅಡಿಯದಾಸನೆನಿಸೊ-ಸ್ವಾಮಿ 3
***

pallavi

ranga ranga emba nAmava nenevara sangadoLirisu enna

anupallavi

angadoLaivarudese desegeLeyuva bhangava biDiso hariye svAmi

caraNam 1

hare krSNa endemba jihve tAnirutire bariye mAtADuve nA
guru hariyara vandenege kara shiravire garuvahankAradana
paripari puSpadali pUjisade acyutana maretiha nAnanudina
ariva nODidare ennali kANaine dEva morehokke salaho enna svAmi

caraNam 2

vEda shAstra purANa nAmava nenevara caudyava nAnariyenu
hAdibIdi tiruguva jAra strIyana kaNDu vinOdagaLa mADutihenu
mAdhava gOvinda ennade kAlana bAdhegaLigoLagAdeno
I dhareyoLagenna rakSisuvara kANe shrIdhara nIne salaho svAmi

caraNam 3

maDadi makkaLigella oDave bEkembuva kaDUlObhatanava biDiso
aDige aDige nArAyaNanemba nAmavanu nuDiva nAlagegiriso
poDeviyoLu purandara viTTalarAyane ninna aDiya dAsaneniso svAmi
***

No comments:

Post a Comment