ರಾಗ ನವರೋಜ್ ಛಾಪು ತಾಳ
ಮಂಧರಧರ ದೇವ
ಮರೆಯ ಹೊಕ್ಕರ ಕಾವ ||ಪ ||
ಮಂದಾಕಿನಿಪಿತ
ಮದಸತಿಯರ ಧೃತ
ಸುಂದರ ಶಶಿವದನಾ ರಂಗಯ್ಯ ||ಅ||
ಕಣ್ಣ ನೋಟದಿ ಚೆಲುವಾ , ಕಮಠರೂಪದಲಿರುವಾ
ಹೆಣ್ಣಿನಾ ಮೊರೆಯ ಕೇಳ್ದ , ಹಿರಣ್ಯಕನುದರವ ಸೀಳ್ದ
ಮಣ್ಣು ಬೇಡಿ ಬೆಳೆದ್ಯೋ ರಂಗಯ್ಯ |
ಹೊನ್ನ ಕೊಡಲಿ ಹಿಡಿದು ,ಹತ್ತು ಶಿರವ ಕಡಿದು
ಚಿಣ್ಣ ಗೋವಳನಾಗಿ , ಚಪಲೆಯರ ವ್ರತ ಕೆಡಿಸಿ
ಚೆನ್ನರಾವುತನಾಡ್ಯೋ ರಂಗಯ್ಯ ||
ಲೋಚನ ಬಿಡುತಲಿ ಬಂದು , ಗಿರಿ ತಾಳಿದೆ ಬೆನ್ನಲಿ ನಿಂದು
ಭೂಚೋರನ ಕೊಂದು , ಬಾಲ ಕರೆಯಲು ಬಂದು
ಯಾಚಕ ನೀನಾದ್ಯೋ ರಂಗಯ್ಯ |
ಸೂತಜನಾಸುತಗೊಲಿದು, ಶರಧಿ ಕಟ್ಟಿಸಿ ಮೆರೆದು
ಕೀಚಕಹತಗೇಯ, ಖೇಚರಪುರವಾಸ
ನೀಚ ಜನರ ತರಿದ್ಯೋ ರಂಗಯ್ಯ ||
ವನದಿ ಚರಿಸಿ ಬಂದು, ಘನಧರೆಯೆತ್ತಿ ವರಹಾ
ಘನಕಂಬದಿಂದುದಯಿಸಿ , ಬಲಿಯ ಮುರಿದು ತಾ
ಜನನಿಯ ಶಿರ ತರಿದ್ಯೋ ರಂಗಯ್ಯ |
ಹನುಮವಂದಿತ ಪಾದ, ಹರುಷ ಪಾಂಡವವರದ
ವನಿತೆಯರ ವ್ರತವಳಿದು, ಮಹಾ ಕಲ್ಕಿಯಾದ್ಯೋ
ಘನ ಪುರಂದರವಿಠಲ ರಂಗಯ್ಯ ||
********
ಮಂಧರಧರ ದೇವ
ಮರೆಯ ಹೊಕ್ಕರ ಕಾವ ||ಪ ||
ಮಂದಾಕಿನಿಪಿತ
ಮದಸತಿಯರ ಧೃತ
ಸುಂದರ ಶಶಿವದನಾ ರಂಗಯ್ಯ ||ಅ||
ಕಣ್ಣ ನೋಟದಿ ಚೆಲುವಾ , ಕಮಠರೂಪದಲಿರುವಾ
ಹೆಣ್ಣಿನಾ ಮೊರೆಯ ಕೇಳ್ದ , ಹಿರಣ್ಯಕನುದರವ ಸೀಳ್ದ
ಮಣ್ಣು ಬೇಡಿ ಬೆಳೆದ್ಯೋ ರಂಗಯ್ಯ |
ಹೊನ್ನ ಕೊಡಲಿ ಹಿಡಿದು ,ಹತ್ತು ಶಿರವ ಕಡಿದು
ಚಿಣ್ಣ ಗೋವಳನಾಗಿ , ಚಪಲೆಯರ ವ್ರತ ಕೆಡಿಸಿ
ಚೆನ್ನರಾವುತನಾಡ್ಯೋ ರಂಗಯ್ಯ ||
ಲೋಚನ ಬಿಡುತಲಿ ಬಂದು , ಗಿರಿ ತಾಳಿದೆ ಬೆನ್ನಲಿ ನಿಂದು
ಭೂಚೋರನ ಕೊಂದು , ಬಾಲ ಕರೆಯಲು ಬಂದು
ಯಾಚಕ ನೀನಾದ್ಯೋ ರಂಗಯ್ಯ |
ಸೂತಜನಾಸುತಗೊಲಿದು, ಶರಧಿ ಕಟ್ಟಿಸಿ ಮೆರೆದು
ಕೀಚಕಹತಗೇಯ, ಖೇಚರಪುರವಾಸ
ನೀಚ ಜನರ ತರಿದ್ಯೋ ರಂಗಯ್ಯ ||
ವನದಿ ಚರಿಸಿ ಬಂದು, ಘನಧರೆಯೆತ್ತಿ ವರಹಾ
ಘನಕಂಬದಿಂದುದಯಿಸಿ , ಬಲಿಯ ಮುರಿದು ತಾ
ಜನನಿಯ ಶಿರ ತರಿದ್ಯೋ ರಂಗಯ್ಯ |
ಹನುಮವಂದಿತ ಪಾದ, ಹರುಷ ಪಾಂಡವವರದ
ವನಿತೆಯರ ವ್ರತವಳಿದು, ಮಹಾ ಕಲ್ಕಿಯಾದ್ಯೋ
ಘನ ಪುರಂದರವಿಠಲ ರಂಗಯ್ಯ ||
********
No comments:
Post a Comment