ರಾಗ ಕಾಂಭೋಜ ಝಂಪೆತಾಳ
ಯಾರೆತ್ತ ಪೋದರೇನು ಊರೆತ್ತ ಬೆಂದರೇನು
ಪೂರ್ವಪ್ರಾಪ್ತಿ ತನಗಲ್ಲದುಂಟೆ ಮನವೆ ||
ಹಗಲೆ ತಾರಕೆಗಳು ಹಾರಿ ಆಡಿದರೇನು
ಬೈಗು ಭಾಸ್ಕರ ಮೂಡಿ ಬೆಳಗಾದರೇನು
ಹಗೆಯವರ ಮನೆಯಲ್ಲಿ ಹಗರಣಾದರೆ ಏನು
ನಿಗಮಗೋಚರನಂಘ್ರಿ ನೆನೆ ಕಂಡ್ಯ ಮನವೆ ||
ಬೆಂಡು ಮುಳುಗಿದರೇನು ಗುಂಡು ತೇಲಿದರೇನು
ಭಂಡ ನಾಲಿಗೆ ಎರಡು ತುಂಡಾದರೇನು
ಉಂಡ ಮನೆಗೆರಡೆಣಿಪ ಮುರಿದು ಬಿದ್ದರೆ ಏನು
ಪುಂಡರೀಕಾಕ್ಷನ್ನ ನೆನೆ ಕಂಡ್ಯ ಮನವೆ ||
ವೆಚ್ಚಕಿಲ್ಲದ ಹಣವು ವ್ಯರ್ಥವಾದರೆ ಏನು
ಮಚ್ಚರಿಸುವರೆಲ್ಲ ಮಡಿದರೇನು
ಅಚ್ಯುತಾನಂತ ಶ್ರೀಪುರಂದರವಿಠಲನ
ನಿಶ್ಚಲ ಭಕುತಿಯಿಂದ ನೆನೆ ಕಂಡ್ಯ ಮನವೆ ||
***
ಯಾರೆತ್ತ ಪೋದರೇನು ಊರೆತ್ತ ಬೆಂದರೇನು
ಪೂರ್ವಪ್ರಾಪ್ತಿ ತನಗಲ್ಲದುಂಟೆ ಮನವೆ ||
ಹಗಲೆ ತಾರಕೆಗಳು ಹಾರಿ ಆಡಿದರೇನು
ಬೈಗು ಭಾಸ್ಕರ ಮೂಡಿ ಬೆಳಗಾದರೇನು
ಹಗೆಯವರ ಮನೆಯಲ್ಲಿ ಹಗರಣಾದರೆ ಏನು
ನಿಗಮಗೋಚರನಂಘ್ರಿ ನೆನೆ ಕಂಡ್ಯ ಮನವೆ ||
ಬೆಂಡು ಮುಳುಗಿದರೇನು ಗುಂಡು ತೇಲಿದರೇನು
ಭಂಡ ನಾಲಿಗೆ ಎರಡು ತುಂಡಾದರೇನು
ಉಂಡ ಮನೆಗೆರಡೆಣಿಪ ಮುರಿದು ಬಿದ್ದರೆ ಏನು
ಪುಂಡರೀಕಾಕ್ಷನ್ನ ನೆನೆ ಕಂಡ್ಯ ಮನವೆ ||
ವೆಚ್ಚಕಿಲ್ಲದ ಹಣವು ವ್ಯರ್ಥವಾದರೆ ಏನು
ಮಚ್ಚರಿಸುವರೆಲ್ಲ ಮಡಿದರೇನು
ಅಚ್ಯುತಾನಂತ ಶ್ರೀಪುರಂದರವಿಠಲನ
ನಿಶ್ಚಲ ಭಕುತಿಯಿಂದ ನೆನೆ ಕಂಡ್ಯ ಮನವೆ ||
***
pallavi
yAretta pOdarEnu Uretta bendarEnu pUrva prApti tanagalladuNTe manave
caraNam 1
hAgale tArakegaLu hAri AdidarEnu baigu bhAskara mUDi beLagAdarEnu
hageyavara maneyalli hagaraNAdare Enu nigama gOcarananghri nene kaNDya manave
caraNam 2
beNDu muLugidarEnu guNDu telidarEnu bhaNDa nAlige eraDu tuNDAdarEnu
uNDa manegeraDeNiya muridu biddare Enu puNDarIkAkSanna nene kaNDya manave
caraNam 3
veccagillada haNavu vyarttavAdare Enu maccarisuvarella maDidarEnu
acyutAnanta shrI purandara viTTalana niscala bhakutiyim nene kaNDya manave
***
No comments:
Post a Comment