Saturday 4 December 2021

ಏನು ಬರೆದೆಯೊ ಬ್ರಹ್ಮ ಎಷ್ಟು ನಿರ್ದಯವೋ purandara vittala ENU BAREDEYO BRAHMA ESHTU NIRDAYAVO





ಪುರಂದರದಾಸರು

ಏನು ಬರೆದೆಯೊ ಬ್ರಹ್ಮ ಎಷ್ಟು ನಿರ್ದಯವೋ ||ಪ|| ಅಭಿ-
ಮಾನವನು ತೊರೆದು ಪರರನ್ನು ಬೇಡುವುದ ||ಅ||

ಗೇಣೊಡಲು ಪೊರೆವುದಕೆ ಪೋಗಿ ಪರರನು ಪಂಚ-
ಬಾಣಸಮರೂಪ ನೀನೆಂದು ಪೋಗಳೆ
ಆನೆ ನಿನ್ನಾಣಿಲ್ಲ ನಾಳೆ ಬಾರೆಂದೆನಲು
ಗಾಣ ತಿರುಗುವ ಎತ್ತಿನಂತೆ ಬಳಲುವುದ ||

ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು
ಸೊಲ್ಲು ಸೊಲ್ಲಿಗೆ ಅವರ ಕೊಂಡಾಡುತ
ಇಲ್ಲ ಈ ವೇಳೆಯಲಿ ತಿರುಗಿ ಬಾರೆಂದೆನಲು
ಅಲ್ಲವನು ತಿಂದ ಇಲಿಯಂತೆ ಕೊರಗುವುದ ||

ಹಿಂದೆ ಬರೆದೆ ಬರೆಹ ಹೇಗಾದರಾಗಲಿ
ಮುಂದೆನ್ನ ವಂಶದಲಿ ಜನಿಸುವರ ಕಾಯೋ
ಸಂದೇಹಿಸಲು ಬೇಡ ಪುರಂದರವಿಠಲ
ಕಂದರ್ಪ ಜನಕ ಉಡುಪಿಯ ಕೃಷ್ಣನಾಣೆ |'
***

ರಾಗ ತೋಡಿ. ಆದಿ ತಾಳ (raga tala may differ in audio)

pallavi

Enu bAredeyo brahma eSTu nirdayavO abhimAnavanu toredu pararannu bEDuvuda

caraNam 1

gENoDalu porevudake pOgi pararanu panca bANa sama rUpa nInendu pOgaLe
Ane ninnANilla nALe bArendenalu gANa tiruguva ettinente baLaluvuda

caraNam 2

ballidavara maneya bAgila kAidu bEsattu sollu sollige avara koNDADuta
illa I vELeyali tirugi bArendenalu allavanu tinda iliyante koraguvuda

caraNam 3

hinde barede bareha hEgAdarAgali mundenna vamshadali janisuvara kAyO
sandEhisalu bEDa purandara viTTala kandarpa janaka uDupiya krSNanANe
***

ಏನು ಬರೆದೆಯೊ ಬ್ರಹ್ಮ ಎಂತು ನಿರ್ದಯನು-ಅಭಿ |ಮಾನವನು ತೊರೆದು ಪರರನು ಪೀಡಿಸುವುದ ಪ

ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು |ಸೊಲ್ಲುಸೊಲ್ಲಿಗೆಅವರಕೊಂಡಾಡುತ ||ಇಲ್ಲ ಈ ವೇಳೆಯಲಿ ನಾಳೆ ಬಾ-ಎನಲಾಗಿ |ಅಲ್ಲವನೆ ತಿಂದ ಇಲಿಯಂತೆ ಬಳಲುವುದ 1

ಗೇಣೊಡಲ ಹೊರೆವುದಕೆ ಹೋಗಿ ನರರೊಳು ಪಂಚ-|ಬಾಣ ಸಮರೂಪ ನೀನೆಂದು ಪೊಗಳೆ ||ಮಾಣು ಎನ್ನಾಣೆ ನೀ ನಾಳೆ ಬಾ ಎಂದೆನಲು |ಗಾಣತಿರುಗುವ ಎತ್ತಿನಂತೆ ಬಳಲುವುದ2

ಹಿಂದೆ ಬರೆದಾ ಬರೆಹ ಏನಾದರಾಗಲಿ |ಮುಂದೆನ್ನ ವಂಶದಲಿ ಪುಟ್ಟುವರಿಗೆ ||ಸಂದೇಹಬೇಡ ಶ್ರೀಪುರಂದರವಿಠಲನೇ |ಕಂದರ್ಪನಯ್ಯ ಉಡುಪಿಯ ಕೃಷ್ಣರಾಯ 3
*******

No comments:

Post a Comment