Wednesday 15 December 2021

ವೆಂಕಟರಮಣ ವೇದಾಂತ ನಿನ್ನಯ ಪಾದ purandara vittala VENKATARAMANA VEDANTA NINNAYA PAADA



ವೆಂಕಟರಮಣ ವೇದಾಂತ ನಿನ್ನಯ ಪಾದ
ಪಂಕಜ ಕಂಡ ಮೇಲೆ
ಮಂಕು ಮಾನವರ ಬೇಡಿಸುವುದುಚಿತವೆ
ಶಂಖಚಕ್ರಾಂಕಿತನೆ ||ಪ||

ಕ್ಷೀರ ಸಾಗರವ ಪೊಂದಿದವ ಮಥಿಸಿದ
ನೀರು ಮಜ್ಜಿಗೆ ಕಾಣನೆ?
ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತವಗೆ
ದೋರೆ ತಿಂತ್ರಿಣಿ ಬಯಕೆಯೆ?

ಸಾರ್ವ ಭೂಪಾಲನ ಸೂನು ಎನಿಸಿದವಗೆ
ಸೂರೆಗೂಳಿನ ತಿರುಕೆ ?
ನಾರಿಲಕ್ಷ್ಮೀಕಾಂತ ನಿನ್ನ ಪೊಂದಿದವಗೆ
ದಾರಿದ್ರ್ಯದಟ್ಟುಳಿಯೆ?

ಸುರ ನದಿಯಲಿ ಮಿಂದು ಶುಚಿಯಾದ ಮೇಲಿನ್ನು
ದುರಿತಗಳಟ್ಟುಳಿಯೆ ?
ಪರಮ ಪುರುಷ ನಿನ್ನ ಪೊಂದಿದ್ದ ದಾಸರ್ಗೆ
ಅರಿಗಳ ಭೀತಿಯುಂಟೆ ?

ಗರುಡನ ಮಂತ್ರವ ಕಲಿತು ಜಪಿಸುವಗೆ
ಉರಗನ ಹಾವಳಿಯೆ ?
ಹರಿ ಪಕ್ಕದೊಳು ಮನೆ ಕಟ್ಟಿದ ನರನಿಗೆ
ಕರಿಗಳ ಭೀತಿಯುಂಟೆ ?

ಪರಮ ಪುರುಷ ಗುಣ ಪೂರ್ಣ ನೀನಹುದೆಂದು
ಮರೆಹೊಕ್ಕೆ ಕಾಯೊ ಎನ್ನ
ಉರಗಾದ್ರಿವಾಸ ಶ್ರೀ ಪುರಂದರ ವಿಟ್ಠಲ
ಪರಬ್ರಹ್ಮ ನಾರಾಯಣ
****

ರಾಗ ಆರಭಿ. ಅಟ ತಾಳ (raga, taala may differ in audio)

pallavi

vEnkaTaramaNa vEdAnta ninnaya pAda pankaja kaNDa mEle manku mAnavara bEDisuvuducive shanka cakrAnkitane

caraNam 1

kSIra sAgarava pondidava madisida nIru majjige kANane cAru
kalpavrkSadaTiyalli kuLitavage dore tintriNi bayakeya

caraNam 2

sArva bhUpAlana sUnu enisidavage sure kULina tiruke nAri
lakSmIkAnta ninna pondidavage dAridryadaTTULiya

caraNam 3

sura nadiyali mindu shuciyAda mElinnu duritagaLaTTuLiye
parama puruSa ninna pondiirda dAsarge arigaLa bhItiyuNTe

caraNam 4

garuDana mantrava kalidu japisuvage uragana hAvaLiye
hari pakkadoLu mane kaTTda naranige karigaLa bhItiyunTe

caraNam 5

parama puruSa guNa pUrNa nInahudendu marehokke kAyo enna
uragAdrivAsa shrI purandara viTTala parabrahma nArAyaNa
***

No comments:

Post a Comment