Sunday 7 November 2021

ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ purandara vittala VRUNDAVANAVE MANDIRAVAAGIHA INDIRE SRI TULASI


ರಾಗ ಸಿಂಧು ಭೈರವಿ  ತಾಳ ಆದಿ 



ವೃಂದಾವನವೇ ಮಂದಿರವಾಗಿಹ, ಇಂದಿರೆ ಶ್ರೀ ತುಲಸಿ ||ಪ||

ನಮ್ಮ ನಂದನ ಮುಕುಂದಗೆ ಪ್ರಿಯವಾದ ಚೆಂದಾದ ಶ್ರೀತುಲಸಿ || ಅ ||

ತುಲಸೀವನದಲ್ಲಿ ಇಹನೆಂಬೋದು ಶ್ರುತಿ ಸಾರುತಿದೆ ಕೇಳಿ
ತುಲಸೀದರ್ಶನದಿಂದ ದುರಿತಗಳೆಲ್ಲ ಹರಿದು ಹೋಗೋದು ಕೇಳಿ
ತುಲಸೀಸ್ಪರ್ಶದಿಂದ ದೇಹ ಪಾವನವೆಂದು ನೀವೆಲ್ಲ ತಿಳಿದು ಕೇಳಿ
ತುಲಸಿ ಸ್ಮರಣೆ ಮಾಡಿ ಸಕಲಿಷ್ಟವ ಪಡೆದು ಸುಖದಲಿ ನೀವು ಬಾಳಿ ||

ಮೂಲ ಮೃತ್ತಿಕೆಯನು ಧರಿಸಿದ ಮಾತ್ರದಿ ಮೂರು ಲೋಕ ವಶವಾಹುದು
ಮಾಲೆಗಳನೆ ಕೊರಳಲ್ಲಿಟ್ಟ ಮನುಜಕೆ ಮುಕ್ತಿಮಾರ್ಗವನೀವುದು
ಕಾಲಕಾಲಗಳಲಿ ಮಾಡಿದ ದುಷ್ಕರ್ಮ ಕಳೆದು ಬಿಸುಟು ಹೋಗೋದು
ಕಾಲನ ದೂತರ ಅಟ್ಟಿ ಕೈವಲ್ಯವ ಲೀಲೆಯ ತೋರುವುದು ||

ಧರೆಯೊಳು ಸುಜನರ ಮರೆಯದೆ ಸಲಹುವ ವರ ಲಕ್ಷ್ಮೀ ಶ್ರೀತುಲಸಿ
ಪರಮಭಕ್ತರ ಪಾಪಗಳೆಲ್ಲ ತರಿದು ಪಾವನ ಮಾಡುವಳು ತುಲಸಿ
ಸಿರಿ ಆಯು ಪುತ್ರಾದಿ ಸಂಪತ್ತುಗಳನಿತ್ತು ಹರುಷವೀವಳು ತುಲಸಿ
ಪುರಂದರವಿಠಲನ್ನ ಚರಣಕಮಲದ ಸ್ಮರಣೆ ಕೊಡುವಳು ತುಲಸಿ ||
***

pallavi

vrndvanavanavE mandiravAgiha indire shrI tulasi

anupallavi

namma nandana mukundage priyavAda cendAda shrI tulasi

caraNam 1

tulasi vanadalli ihanembOdu shruti sArutide kELi tulasi darshanadinda duritagaLella haridu hOgOdu kELi
tulasi sparsahanadinda dEha pAvanavendu nIvella tiLidu kELi tulasi smaraNe mADi sakaliSTava baDedu sukhadali nIvu bALi

caraNam 2

mUla mrttikeyanu dharisida mATradi mUru lOka vahavAhudu mAlegaLane koraLalliTTa manujake mukti mArgava nIvudu
kAla kAlagaLali mADida duSkarma kaLedu bisuTu hOgOdu kAlana dUtara aTTi kaivalyava lIleya tOruvudu

caraNam 3

dhareyoLu su-janara mareyade salahuva vara lakSmI shrI tulasi parama bhaktara pApagaLella taridu pAvana mADuvaLu tulasi
siri Ayu putrAdi sampattugaLanittu haruSavIvaLu tulasi purandara viTTalanna smaraNe koDuvaLu tulasi
***


ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ ||ನಂದನಂದನ ಮುಕುಂದಗೆ ಪ್ರಿಯಳಾದ |ಚೆಂದದ ಶ್ರೀ ತುಳಸಿ ಪ

ತುಳಸಿಯ ವನದಲಿ ಹರಿಯಿಹನೆಂಬುದ |ಶ್ರುತಿಸಾರುತಲಿದೆಕೇಳಿ|ತುಳಸೀದರ್ಶನದಿಂದ ದುರಿತಗಳೆಲ್ಲವುದೂರವಾಗುವುವುಕೇಳಿ||ತುಳಸೀ ಸ್ಪರ್ಶವ ಮಾಡೆ ದೇಹ ಪಾವನವೆಂದುತಿಳಿದಿಲ್ಲವೇನು ಪೇಳಿ |ತುಳಸೀಸ್ಮರಣೆ ಮಾಡಿ ಸಕಲೇಷ್ಟಗಳ ಪಡೆದುಸುಖದಿಂದ ನೀವು ಬಾಳಿ 1

ಮೂಲಮೃತ್ತಿಕೆಯನು ಮುಖದಲಿ ಧರಿಸಲುಮೂಲೋಕ ವಶವಹುದು |ಮಾಲೆ ಕೊರಳಲಿಟ್ಟ ಮನುಜಗೆ ಮುಕ್ತಿಯಮಾರ್ಗವು ತೋರುವುದು ||ಕಾಲಕಾಲಗಳಲಿ ಮಾಡುವ ದುಷ್ಕರ್ಮಕಳೆದು ಬೀಸಾಡುವುದು |ಕಾಲನ ದೂತರ ಕಳಚಿ ಕೈವಲ್ಯದಲೀಲೆಯ ತೋರುವುದು 2

ಧರೆಯೊಳು ಸುಜನರ ಮರೆಯದೆ ಸಲಹುವವರಲಕ್ಷ್ಮಿ ಶ್ರೀ ತುಳಸಿ |ಪರಮಭಕ್ತರ ಪಾಪಗಳನೆಲ್ಲ ತರಿದು ಪಾ-ವನಮಾಡುವಳು ತುಳಸಿ ||ಸಿರಿಆಯು ಪುತ್ರಾದಿ ಸಂಪದಗಳನಿತ್ತುಹರುಷವೀವಳು ತುಳಸಿ |ಪುರಂದರವಿಠಲನಚರಣಕಮಲಗಳಸ್ಮರಣೆಯೀವಳು ತುಳಸಿ 3
****

ರಾಗ ಸೌರಾಷ್ಟ್ರ ಆದಿತಾಳ (raga tala in audio may differ)

No comments:

Post a Comment