ಪುರಂದರದಾಸರು
ರಾಗ ಸೌರಾಷ್ಟ್ರ ಆದಿತಾಳ
ಈಗಲೆ ಭಜಿಸೆಲೆ ಜಿಹ್ವೆ , ನೀ
ಜಾಗುಮಾಡದೆ ಹರಿಯ ಪಾದಾಬುಜವ ||
ದೇಹಗೇಹ ಸಂಬಂಧಿಗಳು ನಿನ್ನ
ಮೋಹಬದ್ಧನಾಗಿ ಭವದಿ ಕಟ್ಟುವರು
ಆಹಾರ ಗುಹ್ಯೇಂದ್ರಿಯವೆಂಬೊ ಎರೆಡರ
ವಿಹಾರದಲಿ ನೀನು ಮುಣುಗಿರದೆ ಮನ ||
ಮರಣವು ತೊಡದು ಮಡಗಿ, ನಿನ್ನ
ತರುಣಿ ಪುತ್ರಮಿತ್ರರೆಲ್ಲರಳುತಿರಲು
ಕೊರಳೊಳು ಗುರುಗುಟ್ಟುವಾಗ ನರ-
ಹರಿಯ ಸ್ಮರಣೆ ನಿನಗನುಗೊಡದಲೆ ಮನ ||
ತಪ್ತಲೋಹದ ಮೆಲೊರಗಿಸಿ, ನಿನ್ನ
ಕತ್ತರಿಸಿದ ಖಂಡ ಬೇಯ್ಸುವರು
ನೆತ್ತಿಯ ಕೊರೆದು ನಾಲಿಗೆಯ ಹರಿವಾಗ
ಚಿತ್ತಜನಯ್ಯನ ನೆನೆಗೊಡದಲೆ ಮನ ||
ಅಸಿಪತ್ರವನದರೊಳಗ್ಹೊಗಿಸಿ, ನಿನ್ನ
ಬಿಸಿ ಬಿಸಿ ಖಂಡವ ಹೊರ ಹೊರಡಿಸಿ
ಹಸಿಯ ನೆತ್ತರು ಬಸಿದು ಹೋಗುವಾಗ
ಕುಸುಮನಾಭನ ನಾಮ ನೆನೆಯಗೊಡದಲೆ ||
ಕುಂಭಿಪಾಕದೊಳಗೆ ಕುದಿಸಿ, ನಿನ್ನ
ಅಂಬುಮೊನೆಗಳಿಂದ ಸರ್ವಾಂಗ ಇರಿಸಿ
ಅಂಬರಕ್ಹೋಗೆ ಕಾಗೆಯೆ ಕಚ್ಚಿ
ಅಂಬುಜಾಕ್ಷನ ನಾಮ ನೆನೆಯಗೊಡದಲೆ ||
ದುರುಳ ಯಮನ ದೂತರಾರ್ಭಟಿಸಿ, ನಿನ್ನ
ಉರಿವ ಗಾಜಿನ ಕಂಭಕೆ ತೆಕ್ಕೆಗೈಸಿ
ಪರಿಭವದೊಳು ಬಳಲುವಾಗ ಹರಿ-
ಪುರುಷೋತ್ತಮನ ನಾಮ ನೆನೆಯಗೊಡದಲೆ ||
ದುರಿತಕೋಟಿ ಪರಿಹರಿಸಿ , ನಿನ್ನ
ನರಕದ ಬಾಧೆಗಳೆಲ್ಲ ತಪ್ಪಿಸುವ
ಸಿರಿಪುರಂದರವಿಠಲನ್ನ ನೆರೆ
ಹರುಷದಿ ನೀ ನೆನೆದು ಸುಖಿಯಾಗೋ ಮನವೆ ||
***
ರಾಗ ಸೌರಾಷ್ಟ್ರ ಆದಿತಾಳ
ಈಗಲೆ ಭಜಿಸೆಲೆ ಜಿಹ್ವೆ , ನೀ
ಜಾಗುಮಾಡದೆ ಹರಿಯ ಪಾದಾಬುಜವ ||
ದೇಹಗೇಹ ಸಂಬಂಧಿಗಳು ನಿನ್ನ
ಮೋಹಬದ್ಧನಾಗಿ ಭವದಿ ಕಟ್ಟುವರು
ಆಹಾರ ಗುಹ್ಯೇಂದ್ರಿಯವೆಂಬೊ ಎರೆಡರ
ವಿಹಾರದಲಿ ನೀನು ಮುಣುಗಿರದೆ ಮನ ||
ಮರಣವು ತೊಡದು ಮಡಗಿ, ನಿನ್ನ
ತರುಣಿ ಪುತ್ರಮಿತ್ರರೆಲ್ಲರಳುತಿರಲು
ಕೊರಳೊಳು ಗುರುಗುಟ್ಟುವಾಗ ನರ-
ಹರಿಯ ಸ್ಮರಣೆ ನಿನಗನುಗೊಡದಲೆ ಮನ ||
ತಪ್ತಲೋಹದ ಮೆಲೊರಗಿಸಿ, ನಿನ್ನ
ಕತ್ತರಿಸಿದ ಖಂಡ ಬೇಯ್ಸುವರು
ನೆತ್ತಿಯ ಕೊರೆದು ನಾಲಿಗೆಯ ಹರಿವಾಗ
ಚಿತ್ತಜನಯ್ಯನ ನೆನೆಗೊಡದಲೆ ಮನ ||
ಅಸಿಪತ್ರವನದರೊಳಗ್ಹೊಗಿಸಿ, ನಿನ್ನ
ಬಿಸಿ ಬಿಸಿ ಖಂಡವ ಹೊರ ಹೊರಡಿಸಿ
ಹಸಿಯ ನೆತ್ತರು ಬಸಿದು ಹೋಗುವಾಗ
ಕುಸುಮನಾಭನ ನಾಮ ನೆನೆಯಗೊಡದಲೆ ||
ಕುಂಭಿಪಾಕದೊಳಗೆ ಕುದಿಸಿ, ನಿನ್ನ
ಅಂಬುಮೊನೆಗಳಿಂದ ಸರ್ವಾಂಗ ಇರಿಸಿ
ಅಂಬರಕ್ಹೋಗೆ ಕಾಗೆಯೆ ಕಚ್ಚಿ
ಅಂಬುಜಾಕ್ಷನ ನಾಮ ನೆನೆಯಗೊಡದಲೆ ||
ದುರುಳ ಯಮನ ದೂತರಾರ್ಭಟಿಸಿ, ನಿನ್ನ
ಉರಿವ ಗಾಜಿನ ಕಂಭಕೆ ತೆಕ್ಕೆಗೈಸಿ
ಪರಿಭವದೊಳು ಬಳಲುವಾಗ ಹರಿ-
ಪುರುಷೋತ್ತಮನ ನಾಮ ನೆನೆಯಗೊಡದಲೆ ||
ದುರಿತಕೋಟಿ ಪರಿಹರಿಸಿ , ನಿನ್ನ
ನರಕದ ಬಾಧೆಗಳೆಲ್ಲ ತಪ್ಪಿಸುವ
ಸಿರಿಪುರಂದರವಿಠಲನ್ನ ನೆರೆ
ಹರುಷದಿ ನೀ ನೆನೆದು ಸುಖಿಯಾಗೋ ಮನವೆ ||
***
pallavi
Igale bhajisale jihve nI jAgumADade hariya pAdAmbujava
caraNam 1
dEha gEha sambandhigaLu ninna mOha baddhanAgi bhavadi kaTTuvaru
AhAra guhtEndriyavembo eraDara vIhAradali nInu muNugirade mana
caraNam 2
maraNavu toDadu maDagi ninna taruNi putra mitralellaraLutiralu
koraLoLu guruguTTuvAga narahariya smaraNe ninaganugoDadele mana
caraNam 3
tapta lOhada mEloragisi ninna kattarisida gaNDa bhEyisuvaru
nettiya koredu nAligeya harivAga cittajananayya nenegoDadele mana
caraNam 4
asipatra vanadharoLighogisi ninna bisi bisi gaNDava horaDisi
hasiya nettaru basidu hOguvAga kusumanAbhana nAma nenegoDadele mana
caraNam 5
kumbhI pAkadoLage kudisi ninna ambu manegaLInda sarvAnga irisi
ambaraghOge kAgeya kacci ambujAkSana nAma nenegoDadele mana
caraNam 6
duruLa yamana dUtarArbhaTisi ninna uriva gAjina kambhake tekkegaisi
puribhavadoLu baLuvAga hari puruSOttanana nAma nenegoDadele mana
caraNam 7
duritakOTi pariharisi ninna narakada bAdhegaLella tappisuva
siri purandara viTTalana nere haruSadi nI nenedu sukhiyAgo manave
***
ಈಗಲೆ ಭಜಿಸಲೆಜಿಹ್ವೆ - ನೀ - |
ಜಾಗುಮಾಡದೆಶ್ರೀ ಹರಿಪಾದಾಂಬುಜವ ಪ.
ದೇಹದೇಹ ಸಂಬಂಧಿಗಳು - ಅವರು |ಮೋಹಬದ್ಧರಾಗಿ ಕುಳಿತಿಹರು ||ಆಹಾರ ಗುಹ್ಯೇಂದ್ರಿಯವೆಂಬ ಎರಡರ |ಬೇಹಾರದಲಿ ನೀನು ಮುಳುಗಿಸದಲೆ ಮನ 1
ಮರಣ ತೊಡಗಿ ನಾಲಗೆಯುಡುಗಿ - ನಿನ್ನ - |ತರುಣಿ ಪುತ್ರ ಮಿತ್ರರಳುತಿರಲು ||ಕೊರಳೊಳು ಗುರುಗುರು ಗುರುಗುಟ್ಟುವಾಗನರ - |ಹರಿಯ ನಾಮವೆನ್ನಗೊಡದೆಲೊ ಪ್ರಾಣಿ 2
ಅಸಿಪತ್ರವನದೊಳು ಹೊಗಿಸಿ - ನಿನ್ನ - |ಬಸೆವಸೆಖಂಡ ಹೊರವೊಡಿಸಿ |ಬಿಸಿಬಿಸಿ ನೆತ್ತರು ಬಸಿದು ಹೋಗುವಾಗ |ಕುಸುಮನಾಭನ ನಾಮ ನೆನೆಯಗೊಡದು ಮನ 3
ತಪ್ತಲೋಹದ ಮೋಲೊರಗಿಸಿ - ನಿನ್ನ - |ಕತ್ತರಿಸಿದ ಖಂಡ ಬೇಯಿಸುವರು ||ನೆತ್ತಿಯ ಕೊರೆದು ನಾಲಗೆ ಹಿರಿದೊಗೆವಾಗ |ಚಿತ್ತಜನಯ್ಯನ ನೆನೆಯಗೊಡದು ಮನ
ಕುದಿಸಿ - ನಿನ್ನ |ಅಂಬುಮೊನೆಗಳಿಂದಿರಿಯಿಸಿ ||ಅಂಬರಕೊಗೆಯ ಕಾಗೆಯು ಕಚ್ಚಿ ಕಡ್ಞಿಗ |ಅಂಬುಜಾಕ್ಷನ ನಾಮ ನೆನೆಯಗೊಡದು ಮನ 5
ದುರುಳ ಯವದೂತರಾರ್ಭಟಿಸಿ - ನಿನ್ನ - |ಎರಕದ ಕಾಯ್ದ ಕಂಬಕೆ ತಕ್ಕೆಗೆಯ್ಸಿ ||ಪರಿಪರಿ ಭವದೊಳು ಬಳಲಿಸುತಿರುವಾಗ |ಪುರುಷೋತ್ತಮನ ನಾಮ ನೆನೆಯಗೊಡದು ಮನ 6
ದುರಿತಕೋಟಿಗಳ ಹರಿಸುವ - ನಿನ್ನ - |ನರಕಬಾಧೆಗಳ ತಪ್ಪಿಸುವ ||ಪರಮ ಪುರುಷ ನಮ್ಮ ಪುರಂದರವಿಠಲನ |ನಿರುತದಿ ನೆನೆದು ನೀ ಸುಖಿಯೊಗೋ ಮನವೆ 7
*******

No comments:
Post a Comment