Saturday, 6 November 2021

ಕಾಣದಿರಲಾರೆ ಪ್ರಾಣಕಾಂತನ ವೇಣುನಾಥನ ತೋರಿಸೆ purandara vittala KAANADIRALAARE PRAANAKAANTANA VENUNAADTHANA TORISE



ಕಾಣದಿರಲಾರೆ ಪ್ರಾಣಕಾಂತನ
ವೇಣುನಾಥನ ತೋರಿಸೆ ||ಪ||
ಜಾಣೆ ಕೃಷ್ಣನು ಕೊಳಲನೂದುತ
ಕಾಣದೆಲ್ಲಿಗೆ ಪೋದನೆ ||ಅ||

ಗೋಕುಲದಲ್ಲಿ ಆಕಳ ಕಾಯುವ
ಸಕಲ ಸುರಮುನಿಸೇವ್ಯನ
ವ್ಯಾಕುಲಾಂತಕ ಲೋಕನಾಯಕ
ಲಕುಮಿನಲ್ಲನ ತೋರಿಸೆ ||

ಹತ್ತು ಆರು ಸಾವಿರ ಸತಿಯರ
ವತಿ ಅಳಿಸಿದ ಭೂಪನ
ಸಂತತ ಅವನ ಸ್ತುತಿಸಿದವರಿಗೆ
ಅತಿಶಯಂಗಳ ಕೊಡುವನ ||

ನಾರಿ ಸಭೆಯೊಳು ಸೀರೆ ಸೆಳೆಯಲು
ವಾರಿಜಾಕ್ಷನ ನೆನೆಯಲು
ಮಾರನಯ್ಯ ಶ್ರೀಕರುಣಾಸಾಗರ
ನಾರಿಗೆ ಅಕ್ಷಯವಿತ್ತನೆ ||

ಗಂಗೆಜನಕ ಮುರಾರಿ ಶ್ರೀಧರ
ಮಂಗಳಾಂಗ ಗೋವಿಂದನ
ರಂಗನಾಥ ಮಾತಂಗವರದ ಭು-
ಜಂಗಶಯನ ಶ್ರೀ ಕೃಷ್ಣನ ||

ಇಂದುಮುಖಿ ಕೇಳೆನ್ನ ಬಿನ್ನಪ
ಇಂದು ಕರಗಳ ಮುಗಿವೆ ನಾ
ಇಂದು ಪುರಂದರವಿಠಲರಾಯನ
ಮಂದಗಮನೆ ನೀ ತೋರಿಸೆ ||
***

ರಾಗ ಮಣಿರಂಗು ಅಟತಾಳ (raga, taala may differ in audio)

pallavi

kANadiralAre prANa kAntana vENu nAdana tOrise

anupallavi

jANe krSNanu koLalanUduta kAnadellige pOdane

caraNam 1

gOkuladalli AgaLa kAyuva sakala suramuni sEvyana
vyAkulAntaka lOka nAyaka lakuminallana tOrise

caraNam 2

hattu Aru sAvira satiyara etti Alida bhUpana
satata avana stutisidavarige atishayangaLa koDuvana

caraNam 3

nAri sabheyoLu sIre seLeyalu vArijAkSana neneyalu
mAranayya shrI karuNA sAgara nArige akSayavittane

caraNam 4

gangejanaka murAri shrIdhara mangaLAnga gOvindana
ranganAtha mAtanga varada bhujanga shayana shrI krSnana

caraNam 5

indumukhi kELenna binnapa indu karagaLa mugive nA
indu purandara viTTalarAyana mandagamane nI tOrise
***

No comments:

Post a Comment