Thursday, 5 December 2019

ಏಕೆ ಚಿಂತಿಪೆ ಬರಿದೆ ನೀ purandara vittala

ಪುರಂದರದಾಸರು
ರಾಗ ಖರಹರಪ್ರಿಯ ಛಾಪು ತಾಳ

ಏಕೆ ಚಿಂತಿಪೆ ಬರಿದೆ ನೀ , ವಿಧಿ ಬರೆದ
ವಾಕು ತಪ್ಪದು ಪಣೆಯೊಳು , ಮರುಳೆ ||ಪ||

ಹುಟ್ಟಲಿಕೆ ಮೊದಲೆ ತಾಯ ಮೊಲೆಯೊಳಗೆ
ಇಟ್ಟಿದ್ದಿಯೋ ಕ್ಷೀರವ
ತೊಟ್ಟಿಲೊಳು ಮಲಗುವಾಗ , ಗಳಿಸಿ ನೀ
ಇಟ್ಟುಕೊಂಡುಣುತಿದ್ದೆಯ, ಮರುಳೆ ||

ಉರಗ ವೃಶ್ಚಿಕ ಪಾವಕ , ಹುಲಿ ಸಿಂಹ
ಕರಿಯರಸು ಚೋರಭಯವು
ಹರಿಯಾಜ್ಞೆಯಿಂದಲ್ಲದೆ , ಇವು ಇನ್ನು
ಶರಧಿ ಪೊಕ್ಕರು ಬಿಡುವುವೆ ||

ಇಂತು ಸುಖ ದುಃಖಗಳಲಿ , ಬಳಲಿ ನೀ
ಭ್ರಾಂತನಾಗಲು ಬೇಡವೊ
ಸಂತೋಷದಿಂದರ್ಚಿಸಿ , ಭಜಿಸು ನಿ-
ಶ್ಚಿಂತ ಪುರಂದರವಿಠಲನ ||
********

ಏಕೆ ಚಿಂತಿಪೆ ಬರಿದೆ ನೀ -ವಿಧಿಬರೆದ - |ವಾಕುತಪ್ಪದು ಪಣೆಯೊಳು ಪ

ಹುಟ್ಟುವುದಕೆ ಮೊದಲೆ ತಾಯ್ಮೊಲೆಯೊಳು |ಇಟ್ಟಿದ್ದೆಯೊ ಪಾಲನು ||ತೊಟ್ಟಿಲೊಳಿರುವಾಗಲೆ - ಗಳಿಸಿ ತಂ - |ದಿಟ್ಟು ಕೊಂಡುಣುತಿದ್ದೀಯಾ 1

ಉರಗವೃಶ್ಚಿಕಪಾವಕ-ಕರಿಸಿಂಹ |ಅರಸು ಹುಲಿ ಚೋರ ಭಯವು ||ಹರಿಯಾಜೆÕಯಿಂದಲ್ಲದೆ - ಇವು ಏಳು - |ಶರಧಿಪೊಕ್ಕರು ಬಿಡವೊ- ಮರುಳೆ2

ಇಂತು ಸುಖ - ದುಃಖದೊಳ್ಸಿಲುಕಿ - ಮರುಗಿ ನೀನು - |ಭ್ರಾಂತನಾಗಿ ಕೆಡಬೇಡವೊ ||ಸಂತೋಷದಿಂದ ಅರ್ಚಿಸಿ - ಭಜಿಸೋ ನೀ - |ಸಂತತಪುರಂದರವಿಠಲನ - ಮರುಳೆ3
*******

No comments:

Post a Comment