ರಾಗ ಪೂರ್ವಿ ಅಟತಾಳ
ಬಂದಾನು ಯಮನು , ದುಷ್ಟರ
ಕೊಂದಾನು ಯಮನು ||ಪ||
ಕೆರೆ ಭಾವಿ ಕಟ್ಟುವರಿಲ್ಲಿ , ದೊಡ್ಡ ದೊರೆತನವಾಳುವರಲ್ಲಿ
ಕರೆದೆನ್ನ ಇಕ್ಕುವರಿಲ್ಲಿ , ಸಿರಿಸಂಪನ್ನರಾಗಿಹರಲ್ಲಿ ||
ಗಂಡನ ಬೈಯುವರಿಲ್ಲಿ , ಯಮದಂಡ ಹೊರಿಸುವರಲ್ಲಿ
ಉಂಡಮನೆ ಕೊಂಬರಿಲ್ಲಿ , ಯಮಕೊಂಡಕ್ಕೆ ನೂಕುವರಲ್ಲಿ ||
ಪರಸತಿ ಕೂಡುವರಿಲ್ಲಿ , ಉರಿಕಂಬ ತಕ್ಕೈಸುವರಲ್ಲಿ
ಪರಿಭೇದ ಪಂಕ್ತಿಗಳಿಲ್ಲಿ , ಪರಿಪರಿಯ ಭಂಗಗಳಲ್ಲಿ ||
ತಾಯ್ತಂದೆ ಸೇವೆಗಳಿಲ್ಲಿ , ಸುರರೆಲ್ಲ ಮೆಚ್ಚುವರಲ್ಲಿ
ಗುರುಗಳ ಉಪದೇಶವಿಲ್ಲಿ , ಗುರುಮರುತರು ತೋಷಿಪರಲ್ಲಿ ||
ದಾನಧರ್ಮಂಗಳಿಲ್ಲಿ , ಸುಖಾನುಭೋಗ ಮೋಕ್ಷವಲ್ಲಿ
ಧ್ಯಾನವ ಮಾಡುವದಿಲ್ಲಿ , ಪುರಂದರವಿಠಲನ ಕಾಣ್ವುದಲ್ಲಿ ||
********

No comments:
Post a Comment