Wednesday, 4 December 2019

ಜಲಧಿಯ ಲಂಘಿಸಿದವಗೆ ಜಯ ಮಂಗಳ purandara vittala

ರಾಗ ಪೂರ್ವಿ ಆದಿತಾಳ

ಜಲಧಿಯ ಲಂಘಿಸಿದವಗೆ , ಜಯ ಮಂಗಳ
ಸುಲಲಿತ ಮುಖ್ಯಪ್ರಾಣಗೆ , ಶುಭಮಂಗಳ ||ಪ||

ಅಗ್ರಜನ್ನ ಭಯದಲಿದ್ದ ಸುಗ್ರೀವನ್ನ ತಂದು ಲಕ್ಷ್ಮಣ
ಅಗ್ರಜನ್ನ ಪಾದಕಮಲಗಳಿಗೆರಗಿಸಿ
ನಿಗ್ರಹಿಸಿ ವಾಲಿಯನ್ನು ಶೀಘ್ರದಲ್ಲಿ ಕಪಿರಾಜ್ಯ-
ದಗ್ರೇಸರನ ಮಾಡಿದ ಶುಭವಿಗ್ರಹನಿಗೆ ||

ಏಕಚಕ್ರದಲ್ಲಿದ್ದಾನೇಕ ವಿಪ್ರಸಮೂಹಕ್ಕೆ
ಭೀಕರನಾಗಿದ್ದ ಬಕನ ನೂಕಿಹಾಕಿಸಿ
ಲೋಕಕ್ಕೆ ಕಂಟಕನಾದ ಕಾಕು ದುರ್ಯೋಧನನ ಕೊಂದು
ಶ್ರೀಕಾಂತಗರ್ಪಿಸಿದ ಸುವಿವೇಕಭೀಮನಿಗೆ ||

ಜೀವೇಶ ಜಡ ಒಂದೆಂಬ ಮಾಯಾವಾದಿಗಳ ಗೆದ್ದು
ಜೀವ ಈಶ ಜಡ ಭೇದಗಳ ಸ್ಥಾಪಿಸಿ
ದೇವ ಪುರಂದರವಿಠಲನ ಭಕ್ತನಾಗಿ ಜಗ-
ಕಾವ ಮಧ್ವಮುನಿವರ ಕರುಣಾನಿಧಿಗೆ ||
***

pallavi

jaladhiya langhisidavage jaya mangaLa su-lalita mukhya prANge shubha mangaLa

caraNam 1

agrajanna bhayadallidda sugrIvanna tandu lakSmaNAgrajanna pAda kamalagaLigeragisi
nigrahisi vAliyannu shIghradinda kapirAjya dagrEsarana mADida shubha vigrahanige

caraNam 2

Eka cakra puradalliddAnEka vipra samUhakke bhIkaranAgidda bakana nUki hAkisi
lOkakke kaNTakanAda kAku duryOdhanana kondu shrIkAntagarpisida su-vivEka bhImage

caraNam 3

jIvEsha jaDa ondemba mAyAvatigaLa geddu jIva Isha jaDa bhEdagaLa sthApisi
dEva purandara viTTalana bhaktanAgi jaga kAva madhvamuni vara karuNAnidhige
***

No comments:

Post a Comment