Wednesday, 4 December 2019

ಏನಾಯಿತು ರಂಗನೆ ನೋಡಿರಮ್ಮ purandara vittala

ಪುರಂದರದಾಸರು
ರಾಗ ಶಂಕರಾಭರಣ ಅಟ ತಾಳ

ಏನಾಯಿತು ರಂಗಗೆ ನೋಡಿರಮ್ಮ ||ಪ||
ನಿಧಾನಿಸಿ ಎನಗೊಂದು ಪೇಳಿರಮ್ಮ ||ಅ.ಪ||

ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ , ತಾನು
ಎಷ್ಟಾದರು ಮೊಲೆಯುಣ್ಣನಮ್ಮ
ತಟುಕು ಮುಖ ಮೇಲಕೆತ್ತನಮ್ಮ, ಹೀಗೆ
ಎಷ್ಟು ಹೇಳಲಿ ಬಾಯ ಮುಚ್ಚನಮ್ಮ

ಕಾಯ ಇದ್ದ್ ಹಾಗಿದ್ದು ಹೆಚ್ಚಿತಮ್ಮ ಹೆತ್ತ
ತಾಯಿ ನೆಲವಿಲ್ಲದಾಯಿತಮ್ಮ
ನೋಯನೋಟದಿ ಅಬ್ಧಿ ಬತ್ತಿತಮ್ಮ
ಅವನ ಬಾಯೊಳಗೆ ವಿಶ್ವ ತೋರಿತಮ್ಮ

ಅತ್ಯಂತ ಮಾತುಗಳನಾಡಿದನಮ್ಮ
ಮುಂದೆ ಸತ್ಯಾಗೆ ಕುದುರೆ ಏರುವನಮ್ಮ
ನಿತ್ಯ ನಿರ್ದೋಷ ಪುರಂದರ ವಿಟ್ಠಲ
ತನ್ನ ಭಕ್ತರ ಸಲಹುವ ದೇವನಮ್ಮ
***

pallavi

EnAyitu rangage nODiramma

anupallavi

nidhAnisi enagondu bhELiramma

caraNam 1

puTTIdhArabhya kaNNa muccanamma tAnu eSTAdaru moleyuNNanamma
taTuku mukha mElakettanamma hIge eSTu hELasi bAya muccanamma

caraNam 2

kAya idyAgiddu heccitamma hetta tAyi nelavilladAyitamma
nOya nODadi abdhi battitamma avana bAyoLage vishva tOridamma

caraNam 3

atyanta mAtugaLanADidamma munde sayAge kudure Eruvanamma
nitya nirdOSa purandara viTTala tanna bhaktara salahuva dEvanamma
***

ಏನಾಯಿತು ರಂಗನೆ ನೋಡಿರಮ್ಮ-ನಿ-|
ಧಾನಿಸಿ ಎನಗೊಂದು ಪೇಳಿರಮ್ಮ ಪ

ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ-ತಾನು |ಎಷ್ಟಾದರೂ ಮೊಲೆಯುಣ್ಣನಮ್ಮ ||ಸೊಟ್ಟಾದ ಮುಖ ಮೇಲಕ್ಕೆತ್ತನಮ್ಮ-ಹೀಗೆ |ಎಷ್ಟು ಹೇಳಲಿ ಬಾಯ ಮುಚ್ಚನಮ್ಮ 1

ಕಾಯಇದ್ದಂತಿದ್ದು ಹೆಚ್ಚಿತಮ್ಮ-ಹೆತ್ತ |ತಾಯಿಯ ಬಲವಿಲ್ಲದಾಯಿತಮ್ಮ ||ನೋಯೆ ನೋಟಕೆಅಬ್ಧಿಬತ್ತಿತಮ್ಮ-ಅವನ |ಬಾಯಿಯೊಳಗೆವಿಶ್ವತೋರಿತಮ್ಮ2

ಅತ್ಯಂತ ಮಾತುಗಳನಾಡಿದನಮ್ಮ-ಮುಂದೆ |ಸತ್ಯವು ಕುದುರೆಯನೇರುವನಮ್ಮ ||ನಿತ್ಯನಿರ್ದೋಷಪುರಂದರವಿಠಲ ತನ್ನ-|ಭಕ್ತರ ಸಲಹುವದೇವನಮ್ಮ 3
**********

No comments:

Post a Comment