ಪುರಂದರದಾಸರು
ರಾಗ ಕಾಂಭೋಜ ಝಂಪೆತಾಳ
ಇಂತು ಶ್ರುತಿಸ್ಮೃತಿಗಳಲಿ ಸಾರುತಿದೆ ಕೋ ||ಪ||
ಕಂತುಪಿತನ ಗುಣಗಳನು ತಿಳಿಯಬೇಕು ||ಅ||
ಮನವ ಸಿರಿನರಹರಿಯ ಚರಣಕರ್ಪಿಸಬೇಕು
ತನುವ ತೊಂಡರಿಗಡ್ಡ ಕೆಡಹಬೇಕು
ಮಾತೆಯರ ಚೆಲುವಿಕೆಗೆ ಮರುಳಾಗದಿರಬೇಕು
ಘನತೆಯಲಿ ಹರಿಚರಣ ಸ್ಮರಿಸುತಿರಬೇಕು ||
ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು
ಇಂದ್ರಿಯಂಗಳನು ನಿಗ್ರಹಿಸಬೇಕು
ಚಂದಲೀಲೆಗಳಿಗೆ ಮನವೊಲಿಸದಿರಬೇಕು
ಇಂದಿರೇಶನ ಪದದ ಪಥವನರಿಯಬೇಕು ||
ಒಂಟಿಯಲಿ ಮುನಿಗಳಾಶ್ರಮದಿ ನೆಲಸಲುಬೇಕು
ಹೆಂಟೆ ಬಂಗಾರ ಸಮ ಎಂದು ತಿಳಿಯಬೇಕು
ಕಂಟಕರ ಭಯಗಳನು ನೀಗುತ್ತಲಿರಬೇಕು
ನಂಟ ಪುರಂದರವಿಠಲನೊಲಿಸಲುಬೇಕು ||
***
ರಾಗ ಕಾಂಭೋಜ ಝಂಪೆತಾಳ
ಇಂತು ಶ್ರುತಿಸ್ಮೃತಿಗಳಲಿ ಸಾರುತಿದೆ ಕೋ ||ಪ||
ಕಂತುಪಿತನ ಗುಣಗಳನು ತಿಳಿಯಬೇಕು ||ಅ||
ಮನವ ಸಿರಿನರಹರಿಯ ಚರಣಕರ್ಪಿಸಬೇಕು
ತನುವ ತೊಂಡರಿಗಡ್ಡ ಕೆಡಹಬೇಕು
ಮಾತೆಯರ ಚೆಲುವಿಕೆಗೆ ಮರುಳಾಗದಿರಬೇಕು
ಘನತೆಯಲಿ ಹರಿಚರಣ ಸ್ಮರಿಸುತಿರಬೇಕು ||
ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು
ಇಂದ್ರಿಯಂಗಳನು ನಿಗ್ರಹಿಸಬೇಕು
ಚಂದಲೀಲೆಗಳಿಗೆ ಮನವೊಲಿಸದಿರಬೇಕು
ಇಂದಿರೇಶನ ಪದದ ಪಥವನರಿಯಬೇಕು ||
ಒಂಟಿಯಲಿ ಮುನಿಗಳಾಶ್ರಮದಿ ನೆಲಸಲುಬೇಕು
ಹೆಂಟೆ ಬಂಗಾರ ಸಮ ಎಂದು ತಿಳಿಯಬೇಕು
ಕಂಟಕರ ಭಯಗಳನು ನೀಗುತ್ತಲಿರಬೇಕು
ನಂಟ ಪುರಂದರವಿಠಲನೊಲಿಸಲುಬೇಕು ||
***
pallavi
intu shruti smrtigaLali sArutide
anupallavi
kantupitana guNagaLanu tiLiya bEku
caraNam 1
manava siri narahaiya caraNa garpisa bEku tanuva toNDarigaTTa keDeha bEku
vaniteyra celuvikege maruLGadira bEku ghanateyali hari caraNa smarisutira bEku
caraNam 2
kandarpanaTTuLige kaLavaLisadira bEku indriyangaLanu nigrahisa bEku
canda lIlegaLige manavolisadira bEku indirEshana padada padavariya bEku
caraNam 3
oNTiyali munigaLAshramadi nelasanu bEku heNTe bhangAra sama tiLiya bEku
kaNTakara bhayagaLanu nIguttalira bEku neNTa purandara viTTalanolisa bEku
***
ಇಂತು ಶ್ರುತಿ ಸ್ಮೃತಿ ಸಾರುತಿದೆ ಕೋ |
ಕಂತುಪಿನ ಗುಣಗಳ ತಿಳಿಯಬೇಕೆಂದು ಪ.
ಮನವ ಶ್ರೀಹರಿಯ ಚರಣಕೆ ಸಮರ್ಪಿಸಬೇಕು |ತನುವ ತೊಂಡರಿಗಡ್ಡ ಕೆಡವಬೇಕು ||ವನಿತೆಯರ ಚೆಲುವಿಕೆಗೆ ಮರುಳಾಗದಿರಬೇಕು |ಘನತೆಯಲಿಹರಿಚರಣಸ್ಮರಿಸುತಿರಬೇಕು1
ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು |ಇಂದ್ರಿಯಂಗಳನು ನಿಗ್ರಹಿಸಬೇಕು |ಚಂದಲೀಲೆಗಳಿಂಗೆ ಮನವೆಳಿಸದಿರಬೇಕು |ಇಂದಿರೇಶನ ಪದದ ಪಥವರಿಯಬೇಕು 2
ಒಂಟಿಯಲಿ ಮುನಿಗಳಾಶ್ರಮದಿ ನೆಲೆಸಲುಬೇಕು |ಹೆಂಟೆ ಬಂಗಾರ ಸಮ ತಿಳಿಯಬೇಕು ||ಕಂಟಕದ ಭಯಗಳನು ನೀಗುತಿರಬೇಕು ವೈ - |ಕುಂಠ ಪುರಂದರವಿಠಲನೊಲಿಸಬೇಕು 3
*******

No comments:
Post a Comment