Monday, 6 December 2021

ಏಳಯ್ಯ ಬೆಳಗಾಯಿತು ಬೆಳಗಾಯಿತೇಳಯ್ಯ ಬಿಸಿಲು purandara vittala ELAYYA BELAGAAYITU BELAGAAYITELAYYA BISILU

ರಾಗ: ಮೋಹನ  ತಾಳ: ಚಾಪು

ಪುರಂದರದಾಸರು

ಏಳಯ್ಯ ಬೆಳಗಾಯಿತು ||ಪ||

ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ
ಸುಳಿವು ದೊರೆಯೆ ನಿಮ್ಮ ಹಾರಯ್ಸಿ ನಿಂದಾರೆ
ತಡವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯ
ಸೆಳೆಮಂಚದಿಂದ ಏಳೊ ||

ವೇದವನು ತರಲೇಳು ಮಂದರವ ಪೊರಲೇಳು
ಭೇದಿಸುತ ಅಸುರರನು ದಾಡೆಯಿಂ ತರಲೇಳು
ಕಾದಿ ಹಿರಣ್ಯಕನ ಕರುಳು ಕೊರಳೊಳಗೆ ಧರಿಸೇಳು
ಕಾಯ್ದು ಬಲಿ ಬಾಗಿಲದೊಳು ||

ಭೇದಿಸಿ ಭೂಮಿ ತ್ರಿಪಾದದಿಂದಳೆಬೇಕು
ಛೇದಿಸಿ ಕ್ಷತ್ರಿಯರ ಕೊದಲಿಂದ ಕಡಿಯೇಳು
ಸಾಧಿಸಿ ಶರಧಿಯಲಿ ಸೇತುವೆಯ ಕಟ್ಟೇಳು
ನಂದಗೋಪನ ಉದರದಿ ||

ಪುರಮೂರು ಗೆಲ್ಲಬೇಕು ಅರಿವೆಯನೆ ಕಳೆಯೇಳು
ದುರುಳನ ಕೊಲ್ಲಬೇಕು ತುರಗವಾಹನನಾಗು
ಪರಿಪರಿಯ ಕೆಲಸಗಳನು ಮಾಡಲುದ್ಯೋಗಿಸಿ
ಮರೆತು ನಿದ್ರೆಯ ಗೆಯ್ವರೆ ||

ಆಲದೆಲೆಯಿಂದೇಳು ಮಹಲಕುಮಿ ಬಂದಾಳೆ
ಹಾಲನದಿಯಿಂದೇಳು ಶ್ರೀದೇವಿ ಬಂದಾಳೆ
ಕಾಲನದಿಯಿಂದೇಳು ಭೂದೇವಿ ಬಂದಾಳೆ
ಸಾಲಮಂಚಗಳಿಂದಲಿ ||

ನಾಭಿಕಮಲದಿ ಜನಿಸಿದ ಬ್ರಹ್ಮ ಬಂದಾನೆ
ಗಂಭೀರಗಾಯನದ ನಾರದ ಬಂದಾನೆ
ರಂಭೆ ಮೇನಕೆ ಮೊದಲು ನರ್ತನದಿ ಐದಾರೆ
ಶಂಬರಾರಿಪಿತನೆ ಏಳೊ ||

ರಾಜಸೂಯವ ಕೇಳೆ ವಾಯುಸುತ ಬಂದಾನೆ
ಅರ್ಜುನನು ರಥ ಹೂಡಬೇಕೆಂದು ನಿಂದಾನೆ
ಸಾಜ ಧರ್ಮಜ ಅಗ್ರಪೂಜೆಯ ಮಾಡುವೆನೆಂದು
ಮೂಜಿಯನೆ ಪಿಡಿದುಕೊಂಡು ||

ಉರಿಹಸ್ತನಟ್ಟಿದರೆ ಹರ ಓಡಿ ಬಂದಾನೆ
ಗಿರಿಜೆ ವರವನು ಬೇಡೆ ಬಂದು ಇದ್ದಾಳೆ
ಪಾರಿಜಾತವ ಕೊಂಡು ಸುರರಾಜ ಬಂದಾನೆ
ಗರುಡವಾಹನಕಾಗಿ ||

ಸತ್ಯನಾಥ ನೀನೇಳು ಸತ್ಯಭಾಮೆ ಬಂದಾಳೆ
ಮತಿವಂತ ನೀನೇಳು ಜಾಂಬವತಿ ಬಂದಾಳೆ
ಗತಿವಂತ ನೀನೇಳು ಶ್ರೀತುಲಸಿ ಬಂದಾಳೆ
ಕಾಂತಸೇವೆಯ ಮಾಡಲು ||

ದೇವ ನಿನ್ನಂಘ್ರಿಪೂಜೆಯ ಮಾಡಬೇಕೆಂದು
ಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಾಪಹಾರಿ
ಸಾವಧಾನದಿ ಯಮುನೆ ತುಂಗೆ ಸರಸ್ವತಿ
ಭೀಮರಥಿಯು ನೇತ್ರಾವತಿಯು ||

ದುರಿತ ಕಲಿ ಕರ್ಮವನು ತ್ವರಿತದಲಿ ಕೆಡಿಸುವನು
ದುರಿತಾರಿ ಮೇಲುಗಿರಿ ಶಿಖರದಲಿ ನಿಂತಿಹನು
ಪುರಂದರವಿಠಲರಾಯ ನೀ
ಬೆಲಗಯಿತೇಳಯ್ಯ ||
***


ರಾಗ ಭೂಪಾಳಿ ಝಂಪೆತಾಳ
ಏಳಯ್ಯ ಬೆಳಗಾಯಿತು ಪ.

ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆಸುಳಿದೋರೈ ನಿನ್ನ ಹಾರಯ್ಸಿ ನಿಂದಿಹರುತಳುವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯಸೆಳೆಮಂಚದಿಂದಲೇಳು ಅಪ

ವೇದವನು ತರಲೇಳು ಮಂದರವ ಹೊರಲೇಳುಛೇದಿಸುತ ಅಸುರರನು ಭೂಮಿಯ ತರಲೇಳುಕಾದಿ ಹಿರಣ್ಯನ ಕರುಳ ಕೊರಳೊಳಗೆ ಧರಿಸೇಳು ಕಾದುಬಲಿಬಾಗಿಲೊಳಗೆ ||ಭೇದದಲಿ ಭೂಮಿಯ ತ್ರಿಪಾದದಿಂದಳೆಯೇಳುಛೇಧಿಸುತ ಕ್ಷತ್ರಿಯರ ಕೊಡಲಿಯಿಂ ಕಡಿಯೇಳುಸಾಧಿಸುತ ಶರಧಿಯಲಿ ಸೇತುವೆಯ ಕಟ್ಟೇಳುನಂದಗೋಪನ ಉದರದಿ 1

ಪುರಮೂರ ಗೆಲಬೇಕು ಅರಿವೆಯನು ಕಳೆದೇಳುದುರುಳರನು ಕೊಲಬೇಕು ತುರಗವಾಹನನಾಗುಪರಿಪರಿಯ ಕೆಲಸಗಳ ಮಾಡಲುದ್ಯೋಗಿಸದೆ ಮರೆತುನಿದ್ರೆಯಗೈವರೆ||ಉರಿಗೈಯನಟ್ಟಿದರೆ ಹರನೋಡಿ ಬಂದಿಹನುಗಿರಿಜೆ ವರವನು ಬೇಡಬೇಕೆಂದು ನಿಂದಿಹಳುಸುರಪಾರಿಜಾತವನು ಕೊಂಡುಸುರರಾಜಬಂದಿರುವನೇಳಯ್ಯ ಹರಿಯೆ 2

ಆಲದೆಲೆಯಿಂದೇಳು ಮಾಲಕುಮಿ ಬಂದಿಹಳುಹಾಲುಗಡಲಿಂದೇಳು ಶ್ರೀದೇವಿನಿಂದಿಹಳುಕಾಲಹೆಡೆಯಿಂದೇಳು ಭೂದೇವಿ ಬಂದಿಹಳು ಸಾಲಮಂಚಿಗಳಿಂದಲಿ ||ಕ್ಷಿತಿನಾಥ ನೀನೇಳು ಸತ್ಯಭಾಮೆ ಬಂದಿಹಳುಮತಿವಂತ ನೀನೇಳು ಜಾಂಬವತಿ ಬಂದಿಹಳುಗತಿವಂತ ನೀನೇಳು ಶ್ರೀತುಳಸಿ ಬಂದಿಹಳು ಏಕಾಂತ ಸೇವೆಯಮಾಡಲು 3

ಅಂಬುರುಹದಿಂದ ಜನಿಸಿದ ಬ್ರಹ್ಮ ಬಂದಿಹನುಗಂಭೀರ ಗಾಯನದ ನಾರದನು ನಿಂದಿಹನುರಂಭೆ ಮೇನಕೆ ಮೊದಲು ನರ್ತನಕೆಐದಿಹರು ಶಂಬರಾರಿಪಿತನೆ ಏಳು||ರಾಜಸೂಯವಕೊಳಲು ವಾಯುಸುತ ಬಂದಿಹನುತೇಜಿಯಾಟಕೆ ಅರ್ಜುನನು ಕರೆದು ಬಂದಿಹನುಸಾಜಧರ್ಮಜ ಅಗ್ರಪೂಜೆ ಮಾಡುವೆನೆಂದು ಹೂಜೆಯನುಪಿಡಿದುಕೊಂಡು 4

ದೇವ ನಿನ್ನಂಘ್ರಿಯನು ಪೂಜೆ ಮಾಡುವೆನೆಂದುಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಪಹರಿಸಾವಧಾನದಿ ಯಮುನೆ ತುಂಗಾ ಸರಸ್ವತೀಭೀಮರಥಿ ನೇತ್ರಾವತಿ ||ದುರಿತ ಬಂಧನವನ್ನು ಪರಿಹರಿಸಿದೆಯೊ ಸ್ವಾಮಿದುರಿತ ದುಷ್ಕರ್ಮವನು ದೇವ ಎಂದರೆ ಸುಡುವೆದುರಿತ ತಾಪಕೆ ಚಂದ್ರ ನೀನೆನಿಸಿಕೊಂಡೆಯೊಶ್ರೀ ಪುರಂದರವಿಠಲನೆ 5
*******

No comments:

Post a Comment