Friday, 6 December 2019

ಪಾಪೋಸು ಹೋದುವಲ್ಲ ಸ್ವಾಮಿ ಎನ್ನ purandara vittala

ಪುರಂದರದಾಸರು
ರಾಗ ಶಂಕರಾಭರಣ. ಆದಿ ತಾಳ
/ ರಾಗ ಮಧ್ಯಮವತಿ ಅಟತಾಳ)

ಪಾಪೋಸು ಹೋದುವಲ್ಲ ಸ್ವಾಮಿ ಎನ್ನ ||ಪ||
ಅಪಾರ ದಿನಗಳಿಂದ ಆರ್ಜನೆ ಮಾಡಿದ ||ಅ||

ಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ
ಪರಿಪರಿ ತೀರ್ಥಸ್ನಾನಗಳ ಮಾಡಿ
ಹರಿದಾಸರ ಕೂಡಿ ಗಿರಿರಾಯನ ಮೂರ್ತಿ
ದರುಶನದಲಿ ಮೈ ಮರೆತಿರಲು ಎನ್ನ ||

ಪರಮಭಾಗವತರು ಹರಿಕಥೆ ಪೇಳಲು
ಪರಮಭಕುತಿಯಿಂದ ಕೇಳುತಿರೆ
ಪರಮಪಾಪಿಗಳ ಪಾಲಾಗಿ ಪೋದುವು
ಪರಮಪುರುಷನ ಮನಸಿಗೆ ಬಂದೀಗ ||

ಮಾಯಾದೇವಿ ಎನಗೆ ಮೆಚ್ಚಿ ಕೊಟ್ಟಿದ್ದಳು
ದಾಯಾದಿಗಳು ನೋಡಿ ಸಹಿಸಲಿಲ್ಲ
ಮಾಯಾರಮಣ ನಮ್ಮ ಪುರಂದರವಿಠಲನ
ಮಾಯದಿಂದಲಿ ಮಟ್ಟ ಮಾಯವಾದವು ಎನ್ನ ||
***

pallavi

pApOsu hOdudalla svAmi enna

anupallavi

apAra dinagaLinda arjane mADi

caraNam 1

uragAdriyali svAmi puSkaraNi modalAda parpari tIrtta snAnagaLa mADi
haridAsara kUDi girirAyana mUrti tarushanadali mai maretiralu enna

caraNam 2

parama bhAgavataru harikathe pELalu parama bhakutiyinda kELutire
parama pApigaLa pAlAgi pOduvu parama puruSana mnasige bandIga

caraNam 3

mAyAdEvi enage mecci koTTIddaLu dAyAdigaLu nODi sahisalilla
mAyAramaNa namma purandara viTTalana mAyadindali maTTa mAyavAdavu enna
***

ಪಾಪೋಸು ಹೋದುವಲ್ಲ ಸ್ವಾಮಿ ಎನ್ನ -
ಪಾಪೋಸು ಹೋದುವಲ್ಲ.ಪ.

ಅಪಾರ ಜನುಮದಿ ಆರ್ಚನೆಯ ಮಾಡಿದ .ಅಪ

ಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ |ಪರಿಪರಿ ತೀರ್ಥ ಸ್ನಾನಗಳ ಮಾಡೆ ||ಹರಿದಾಸರ ಕೊಡಿ ಶ್ರೀನಿವಾಸನ ಸಂ -ದರುಶನದಲ್ಲಿ ಮೈಮರೆದಿದ್ದೆನೊ ಎನ್ನ 1

ಪರಮ ಭಾಗವತರು ಹರಿಕಥೆ ಪೇಳಲು |ಪರಮ ಭಕುತಿಯಲಿ ಕೇಳುತಿದ್ದೆ ||ಪರಮ ಪಾಪಿಷ್ಠರ ಪಾಲಿಗೆ ಪೋದವು |ಪರಮಾತ್ಮನ ಮನಸಿಗೆ ಬಂತು ಹೀಗೆ 2

ಮಾಯೆ ಒಲಿದು ಎನಗೆ ತಂದು ಕೊಟ್ಟದ್ದಳು |ದಾಯಾದಿಗಳು ನೋಡಿ ಸಹಿಸಲಿಲ್ಲ ||ಮಾಯಾ ರಮಣ ನೋಡಿ ಪುರಂದರವಿಠಲಮಾಯೆಯಿಂದ ಮಟ್ಟಮಾಯವಾದವು ಈಗ 3
********

No comments:

Post a Comment