ರಾಗ ಆಹೇರಿ ಅಟತಾಳ
ಕಟ್ಟಬೇಕು ಕಾಟದೆಮ್ಮೆ ಅದರ ಹಯನ
ಎಷ್ಟಾದರು ಉಣಬೇಕು ||ಪ||
ಹಮ್ಮುಯೆಂಬೋದೆ ಎಮ್ಮೆ , ಗಮ್ಮುಯೆಂಬೋದೆ ಹಗ್ಗ
ಹೆಮ್ಮುಯೆಂಬೋದೆ ಅದಕೆ ಧಮ್ಮ ಗುದ್ದಿ
ಸುಮ್ಮನ ಮನದಿಂದ ಹಾಲ್ಕರೆದು ಪರ -
ಬೊಮ್ಮನಿಗರ್ಪಿಸಬೇಕು ನಿತ್ಯದಿ ||
ಚಂಡಿತನವೆಂಬ ಹಿಂಡಿ ಇಡಬೇಕು
ದಿಂಡತನವೆಂಬ ಪೆಂಡೆಮೇವು
ಪುಂಡತನವೆಂಬೊ ಪಿಂಡಿ ರುಬ್ಬಿಡಬೇಕು
ಪಾಂಡುರಂಗ ಗಿಂಡಿ ಒಳಗೆ ಹಿಂಡಿಕೊಬೇಕು ||
ಅಂತರಂಗದ ಒಳಗೆ ಭ್ರಾಂತಿ ಬಿಡಿಸುವ ಎಮ್ಮೆ
ಅಂತುದಾರಿಗೂ ತಿಳಿಯದಿಂಥ ಎಮ್ಮೆ
ಕಂತುಜನಕ ಸ್ವಾಮಿ ಪುರಂದರವಿಠಲನ
ಸಂತರ ಮನೆಯೊಳಗೆ ಇಂಥೆಮ್ಮೆ ಇರಬೇಕು ||
***
ಕಟ್ಟಬೇಕು ಕಾಟದೆಮ್ಮೆ ಅದರ ಹಯನ
ಎಷ್ಟಾದರು ಉಣಬೇಕು ||ಪ||
ಹಮ್ಮುಯೆಂಬೋದೆ ಎಮ್ಮೆ , ಗಮ್ಮುಯೆಂಬೋದೆ ಹಗ್ಗ
ಹೆಮ್ಮುಯೆಂಬೋದೆ ಅದಕೆ ಧಮ್ಮ ಗುದ್ದಿ
ಸುಮ್ಮನ ಮನದಿಂದ ಹಾಲ್ಕರೆದು ಪರ -
ಬೊಮ್ಮನಿಗರ್ಪಿಸಬೇಕು ನಿತ್ಯದಿ ||
ಚಂಡಿತನವೆಂಬ ಹಿಂಡಿ ಇಡಬೇಕು
ದಿಂಡತನವೆಂಬ ಪೆಂಡೆಮೇವು
ಪುಂಡತನವೆಂಬೊ ಪಿಂಡಿ ರುಬ್ಬಿಡಬೇಕು
ಪಾಂಡುರಂಗ ಗಿಂಡಿ ಒಳಗೆ ಹಿಂಡಿಕೊಬೇಕು ||
ಅಂತರಂಗದ ಒಳಗೆ ಭ್ರಾಂತಿ ಬಿಡಿಸುವ ಎಮ್ಮೆ
ಅಂತುದಾರಿಗೂ ತಿಳಿಯದಿಂಥ ಎಮ್ಮೆ
ಕಂತುಜನಕ ಸ್ವಾಮಿ ಪುರಂದರವಿಠಲನ
ಸಂತರ ಮನೆಯೊಳಗೆ ಇಂಥೆಮ್ಮೆ ಇರಬೇಕು ||
***
pallavi
kaTTabEku kATademme adara hayana eSTAdaru uNabEku
caraNam 1
hammuyembOde emme gammuyembOde hagga hemmeyembOde adake dhamma
guddi summana manadinda hAl karedu para bommanigarbisa bEku nityadi
caraNam 2
candi tanavemba hiNDi iDabEku diNDa tanavemba peNDemEvu
puNDa tanavembo piNDi rubbiDa bEku pANDuranga guNDi oLage hiNDigO bEku
caraNam 3
antarangada oLage bhrAnti biDisuva emme antudArigU tiLiyadinda emme
kantu janaka purandara viTTalana santara maneyoLage intthemme ira bEku
***
No comments:
Post a Comment