Thursday 2 December 2021

ನೆನೆವೆ ನಾನನ್ಯರ ಕಾಣೆನು ಕೊಡುವರೊಳಗೆ ನೀನೇ purandara vittala NENEVE NAANANYARA KAANENO KODUVAROLAGE NEENE



ನೆನೆವೆ ನಾನನ್ಯರ ಕಾಣೆನು ||ಪ ||

ಕೊಡುವರೊಳಗೆ ನೀನೇ ಎಂದು
ಬಡವನಾಗಿ ನಾನು ಬಂದು
ಉಡಿಯ ಪಿಡಿದು ಬೇಡಿಕೊಂಬೆ ನಾ
ಉಡಿಯ ಪಿಡಿದು ಬೇಡಿಕೊಂಬೆ
ದೃಢದಿ ವರವ ಕೊಡುವ ದೊರೆಯೆ ||

ರಾಮದೂತನಾಗಿ ಬಂದು
ನಾಮಮುದ್ರಿಕೆ ಜಾನಕಿಗಿತ್ತು
ಭೀಮನಾಗಿ ಕರವ ಮುಗಿವನ
ಭೀಮನಾಗಿ ಕರವ ಮುಗಿದು
ಜ್ಞಾನಪೂರ್ಣಪ್ರಾಣನೆನಿಪನ ||

ಈಶ ನರಸಿಂಹನಾದ
ವಾಸವಾದಿವಿನುತ ಶೇಷ
ದೋಷರಹಿತ ಪುರಂದರನ
ದೋಷರಹಿತ ಪುರಂದರವಿಠಲ
ದಾಸಭಾರತೀಶ ||
***

ರಾಗ ತೋಡಿ ರೂಪಕ ತಾಳ (raga tala may differ in audio)

pallavi

neneve nAnanyara kANenu

caraNam 1

koDuvaroLage nInE endu baDavanAgi nAnu bandu uDiya piDidu
bEDi kombe nAuDiya piDidu bEDi kombe drDhadi varava koDuva doreya

caraNam 2

rAma dUtanAgi bandu nAma mudrike jAnakigittu bhImanAgi karava
mukhivana bhImanAgi karava mukhidu jnAna pUrNa prANanenibhana

caraNam 3

Isha narasimhanAda vAsavAdi vinuta shESa tOSa rahita purandarana
tOSa rahita purandara viTTla dAsa bhAratIshanenibhana
***

No comments:

Post a Comment