Saturday, 7 December 2019

ಹರಿಯೇ ಗತಿಸಿರಿವಿರಿಂಚಿ ಶಿವರಿಗೆ ನರಹರಿ purandara vittala

ಪುರಂದರದಾಸರು
ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ ಹರಿಯೆ ಗತಿ ಸುರಪಸುರಾದಿಗಳಿಗೆ

ರುಕ್ಮಿಣೀ ದೇವಿಯ ಶಿಶುಪಾಲಗೀವೆನೆಂದು ರುಕ್ಮ ಸಂಭ್ರಮಿಸಲು ಕೃಷ್ಣ ಬಂದು
ಸಕಲ ರಾಯರುಗಳು ಸನ್ನದ್ಧರಾಗಿರೆ ರುಕುಮಿಣೀಯನು ತಂದು ವರಿಸಿ ಅಳಿದನಾಗಿ 1

ಹಯಾಸ್ಯನೆಂಬುವ ವೇದವ ಕದ್ದೊಯ್ಯೆ ಹಯಗ್ರೀವನಾಗಿ ಹರಿಯವನ
ಕಾಯವ ಖಂಡಿಸಿ ಅಜಗೆ ವೇದವನಿತ್ತು ಕಾಯ್ದ ಕಮಲಾಕ್ಷನೆ ದೈವವೆಂದು2

ಭಸುಮಾಸುರನಿಗೊಂದಸದಳ ವರವಿತ್ತು ತ್ರಿಶೂಲಧರ ಓಡಿ ಬಳಲುತಿರೆ
ಬಿಸರುಹ ನಯನನು ಭಸುಮಾಸುರನನು ಭಸುಮವ ಮಾಡಿ ಶಿವನ ಪೊರೆದನಾಗಿ3

ಸುರಪನ ರಾಜ್ಯವ ಬಲಿಯಾಕ್ರಮಿಸಲು ಹರಿ ದಾನವ ಬೇಡಿ ಯಜ್ಞದಲಿ
ಚರಣದಿಂದಿಳೆಯ ಸ್ವರ್ಗವ ಈರಡಿ ಮಾಡಿ ಸುರಪಗೆ ರಾಜ್ಯವನಿತ್ತು ಪೊರೆದನಾಗಿ4

ಸುರ ಭೂಸುರನ್ನು ಅಸುರರು ಬಾಧಿಸೆ ಹರಿಯವತರಿಸಿ ಅಸುರರನೆಲ್ಲ
ಶಿರಗಳ ತರಿದು ಸುರ ಭೂಸುರರನು ಪೊರೆವುತ್ತಲಿಹನಾಗಿ ಪುರಂದರ ವಿಟ್ಠಲ5
***


pallavi

hariye gati siri virinci shivarige hariye gati surapasurAdagaLige

caraNam 1

rugmiNI dEviya shishUpAlagIvenendu rukma sambramisalu krSNa bandu
sakala rAyarugaLa sannaddharAgire rugumiNIyanu tandu varisi aLidanAgi

caraNam 2

hayAsyanembuva vEdava kaddoyya hayagrIvanAgi hariyavana
kAyava gaNDisi ajage vEdavanittu kAida kamalAkSane daivavendu

caraNam 3

bhasumAsuranigondasadaLa varavittu trishUladhara Odi baLalutire
bisaruha nayananu bhasumAsurananu bhasumava mADi shivana poredanAgi

caraNam 4

surapana rAjyava baliyAgramisalu hari dAnava bEDi yagnyadali
caraNadindiLeya svargava IraDi mADi surapage rAjyavanittu poredanAgi

caraNam 5

sura bhUsurannu asuraru bAdhise hariyavatarisi asuraranella
shiragaLa taridu sura bhUsuraranu porevuttalihanAgi purandara viTTala
***

ಹರಿಯೇ ಗತಿಸಿರಿವಿರಿಂಚಿ ಶಿವರಿಗೆ ನರ -|
ಹರಿಯೆಗತಿಸುರಪತಿ ಸುರರಿಗೆ ಪ

ರುಕುಮಣಿದೇವಿಯ ಶಿಶುಪಾಲಗೀವೆನೆಂದು |ರುಕುಮ ಸಂಭ್ರಮಿಸಲು ಕೃಷ್ಣ ಬಂದು ||ಸಕಲ ರಾಯರುಗಳು ಸನ್ನದ್ಧರಾಗಿರೆ |ರುಕುಮಿಣಿದೇವಿಯ ವರಿಸಿ ಆಳಿದನಾಗಿ 1

ಹಯ್ಯಾಸನೆಂಬವ ವೇದವ ಕದ್ದೊಯ್ಯೆ |ಹಯಗ್ರೀವನಾಗಿ ಹರಿಯವನ |ಕಾಯವ ಖಂಡಿಸಿ ಅಜಗೆ ವೇದವನಿತ್ತು |ಕಾಯ್ದ ಕರುಣಿ ಕಮಲಾಕ್ಷನೆ ದೈವವೆಂದು 2

ಭಸುಮಾಸುರನಿಗೊಂದಸಮದ ವರವಿತ್ತು |ತ್ರಿಸೂಲಧರನು ಓಡಿ ಬಳಲುತಿರೆ |ಬಿಸಜಸಂಭವನಯ್ಯ ಭಸುಮಾಸುರನನು |ಭಸುಮವ ಮಾಡಿ ಭಕ್ತನ ಪಾಲಿಸಿದನಾಗಿ 3

ಸುರಪನ ರಾಜ್ಯವ ಬಲಿಯಾಕ್ರಮಿಸಲು |ಹರಿಯೆ ದಾನವ ಬೇಡಿ ನೀನವನ ||ಧರೆಯಈರಡಿ ಮಾಡಿ ಪಾತಾಳಕೆ ಮೆಟ್ಟ |ಸುರಪಗೆ ರಾಜ್ಯವನಿತ್ತು ಸಲಹಿದನಾಗಿ 4

ಸುರ - ಭೂಸುರರನು ಅಸುರ ಬಾಧಿಸುತಿರೆ |ಹರಿಯವತರಿಸಿ ನೀನಸುರರನು ||ಶಿರಗಳ ಚಂಡಾಡಿ ಸುರರ ಭೂಸುರರನುಪೊರೆಯುತ್ತಲಿಪ್ಪ ನಮ್ಮ ಪುರಂದರವಿಠಲ 5
*******

No comments:

Post a Comment