ರಾಗ ಸೌರಾಷ್ಟ್ರ. ಅಟ ತಾಳ
ಶರಣು ಶರಣು ಸುರೇಂದ್ರವಂದಿತ
ಶಂಖಚಕ್ರಗದಾಧರ ||ಪ||
ಶರಣು ಸರ್ವೇಶ್ವರನೆ ಅಹೋಬಲ
ಗಿರಿಯ ನರಸಿಂಹಮೂರ್ತಿಗೆ ||
ಮೋರೆ ಕೆಂಜಡೆ ಕಣ್ಣು ಕಿವಿ ಎದೆ ಬಾಯಿ ಮೂಗಿನ ಶ್ವಾಸದಿ
ಮೇರುವಿಗೆ ಮಿಗಿಲಾಗಿ ಮೊರೆವನ ಧೋರಕಿಡಿಗಳ ಸೂಸುತ
ಸಾರಿ ಸಾರಿಗೆ ಹೃದಯರಕುತವ ಘೀರುಘೀರನೆ ಹೀರುತ
ಧೀರತನದಿ ಉಪೇಂದ್ರ ಮೆರೆದ ವೀರನರಸಿಂಹಮೂರ್ತಿಗೆ
ಜ್ವಾಲನರಸಿಂಹಮೂರ್ತಿಗೆ ||
ಖುಳ ಖುಳನೆ ಖುಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ
ಜಲಧಿಯೊಳು ಘುಲುಘುಲನೆ ಕೂಗುತ ಅಧರ ದಿಗ್ಗಜ ನಡುಗಲು
ಥಳ ಥಳನೆ ಥಳಯೆಂದು ಪಲ್ಗಳು ಮಿಂಚಿನಂದದಿ ಪೊಳೆಯಲು
ಚೆಲುವ ಕೋರೆಯ ಮೂರ್ತಿಗೆ ನಮ್ಮ ಉಗ್ರನರಸಿಂಹಮೂರ್ತಿಗೆ ||
ಛಾಲದಲಿ ಶಿಶು ನಿಮ್ಮ ಕರೆಯಲು ಕಾಲಿಲೊದ್ದಾ ಖಳರನು
ಲೀಲೆಯಿಂದಲಿ ಸಿಡಿಲು ಭುಗಿ ಭುಗಿ ಉರಿಯ ಉಕ್ಕಿನ ಕಂಭದಿ
ಖೂಳ ದೈತ್ಯನ ಉಗುರಿನಿಂದಲಿ ಸೀಳಿ ಹೊಟ್ಟೆ ಕರುಳಿನ
ಮಾಲೆಯನು ಕೊರಳೊಳಗೆ ಧರಿಸಿದ ಜ್ವಾಲನರಸಿಂಹಮೂರ್ತಿಗೆ ಪ್ರ-
ಜ್ವಾಲನರಸಿಂಹಮೂರ್ತಿಗೆ ||
ಹರನು ವಾರಿಜಭವನು ಕರಗಳ ಮುಗಿದು ಜಯ ಜಯವೆನುತಲಿ
ತರಳ ಪ್ರಹ್ಲಾದನನು ತಾವಾಗ ಕರೆದು ಸ್ತುತಿಸಲು ಪೇಳಲು
ತೆರತೆರದಿ ಭೂಸುರರು ಸ್ತುತಿಸಲು ಸುರರು ಪೂಮಳೆಗರೆಯಲು
ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತನರಸಿಂಹಮೂರ್ತಿಗೆ
ನಮ್ಮ ಶಾಂತನರಸಿಂಹಮೂರ್ತಿಗೆ ||
ವರವ ಬೇಡಿದಡೀವ ತಂದೆಯು ವರಗಳೆಲ್ಲವನೀವುತ
ನಿರತದಿ ನಿಮ್ಮೆರಡು ತೊಡೆಯಲಿ ಶರೀರವಿರಲೆಂದೆನುತಲಿ
ಕರುಣಿ ಕರುಣಿಸೊ ಕರುಣಿಸೆಂದರೆ ವರದ ಅಭಯವ ನೀಡುತ
ಸಿರಿಯ ಕರುಣದಿ ಪೊರೆವ ಅಹೋಬಲ ಗಿರಿಯ ಪುರಂದರವಿಠಲಗೆ
ನಮ್ಮ ಕರುಣಿ ಪುರಂದರವಿಠಲಗೆ ||
***

pallavi
sharaNu sharaNu surEndra vandita shankha cakra gadAdhara
anupallavi
sharaNu sarvEshvarane ahObala giriya narasimha mUrtige
caraNam 1
mOre kejjaDe kaNNU kiviyade bAyi mUgina svAsadi
mEruvige migilAgi morevana dhOra giDigaLa sUsuta sAri sArige
hrdaya rakutava pIru pIrena hIruta dhIra tanadi upEndra mereva
vIra narasimha mUrtige jvAla narasimha mUrtige
caraNam 2
gaLanu guLa guLanendu kUgalu kOTi siDilina rabhasadi
jaladhiyoLu guLuguLena ukkalu adhara diggaja naDukalu
thaLa thaLane thaLeyendu palgaLu mincinandadi poLeyalu
celuva kOreya mUrtige namma ugra narasimha mUrtige
caraNam 3
chAladali shishu nimma kareyalu kAliloddA khaLaranu lIleyindali
siDilu bhugi bhugi uriya ukkina gambhadi gULa daityana ugurinindali
sILi herTaTe karuLanu mAleyanu koraLoLage dharisida jvAla
narasimha mUrtige karALa narasimha mUrige
caraNam 4
haranu vArija bhavanu karagaLa mugidu jaya jayavenutali
taraLa prahlAdananu tAvAga karedu stutisalu pELalA terateradi
bhUsuraru stutisalu suraru pUmaLe gareyalu siri baralu toDeyalli
dharisida shAnta narasimha mUrtige namma shAnta narasimha mUrtige
caraNam 5
varava bEDidaDIva tandeyu varagaLevanIvuta niratadim nimmeraDu
toDeyali sharIra viralendenutali karuNi karuNiso karuNisendare
varada abhayava nIDuta siriya karuNadi poreva ahObala giriya
purandara viTTalage namma karuNi purandara viTTalage
***
No comments:
Post a Comment