Tuesday, 3 December 2019

ಆವ ಕುಲವಾದರೇನು ಆವನಾದರೇನು ಆತ್ಮ purandara vittala

ಪುರಂದರದಾಸರು
ರಾಗ ರೇಗುಪ್ತಿ/ಅಟ್ಟ ತಾಳ

ಆವ ಕುಲವಾದರೇನು ಆವನಾದರೇನು ಆತ್ಮ
ಭಾವವರಿತ ಮೇಲೆ || ಪಲ್ಲವಿ ||

ಹಸಿ ಕಬ್ಬು ಡೊಂಕಿರಲು ಅದರ
ರಸ ತಾನು ಡೊಂಕೇನೊ
ವಿಷಯಾಸೆಗಳ ಬಿಟ್ಟು
ಹಸನಾದ ಗುರುಭಕ್ತಿ ಮಾಡೋ || ೧ ||
ರಾಗ ರೇಗುಪ್ತಿ/ಅಟ್ಟ ತಾಳ

ನಾನಾ ವರ್ಣದ ಆಕಳು ಅದು
ನಾನಾ ವರ್ಣದ ಕ್ಷೀರವೇನೋ
ಹೀನ ಕರ್ಮಗಳನ್ನು ಬಿಟ್ಟು ಹಿಗ್ಗಿ
ಜ್ಞಾನ ಒಲಿಸಿರೋ || ೨ ||

ಕುಲದ ಮೇಲೆ ಹೋಗಬೇಡ ಮನುಜಾ
ಕುಲವಿಲ್ಲ ಜ್ಞಾನಿಗಳಿಗೆ
ವರದ ಪುರಂದರವಿಠಲನ ಪಾದವ
ಸೇರಿ ಮುಕ್ತನಾಗೋ || ೩ ||
***


pallavi

Ava kulavAdarEnu AvanAdarEnu Atma bhAvavarida mEle

caraNam 1

hasi kabbu Dongiralu adara rasa DonkEno viSayAsegaLane biTTu hasanAda guru bhakti mADo

caraNam 2

nAnA varNada AgaLu adu nAnA varNada kSIravEno hIna karmagaLanu biTTu haggi jnAna olisirO

caraNam 3

kulada mEle hOga bEDa manuja kulavilla jnAnigaLige varada purandara viTTalana padava sEri muktanAgo
***

ಆವ ಕುಲವಾದರೇನು ಪ.

ಭಾವದ ಎಲ್ಲಾನ ತಿಳದವನಿಗೆ ಮತ್ತೇ ಅಪ

ಅಸುಡೊಂಕು ಕಬ್ದು ಇರಲು - ಅದರೊಳಗಿದ್ದರಸ ತಾನು ಡೊಂಕೇನಲೊ - ಮರುಳೆವಿಷಯಭಾವನೆ ಬಿಟ್ಟು ನೀ ಹೋಗಿ ಗುರುಗಳಹಸನಾಗಿ ಕೇಳು ಕಾಣೋ - ಮನುಜಾ 1

ನಾನಾವರ್ಣದ ಆಕಳ - ಕ್ಷೀರದಲಿನಾನಾವರ್ಣಗಳಹುದೆ - ಮನುಜಾಹೀನ ಭಾವನೆಗಳನಿಂದಿಟ್ಟು ನೀ ಪೋಗಿಜ್ಞಾನಿಗಳ ಕೇಳು ಕಾಣೋ - ಮನುಜಾ 2

ಶರಧಿಯೊಳ ತೆರೆನೊರೆಗಳಾ - ಪರಿಯಂತೆಶರೀರವಲ್ಲದೆ ಬೇರಿಹುದೇ ?ವರಪುರಂದರವಿಠಲನ ಸ್ಮರಿಸುತಿರಲು ನಿನಗೆಸಿರಿಯನು ಮುಕುತಿಯಹುದು - ಮನುಜಾ 3
*******

No comments:

Post a Comment