Tuesday 21 December 2021

ಏನು ಮೆಚ್ಚಿದೆ ಎಲೆ ಹೆಣ್ಣೆ ಏನು ಮರುಳಾದೆಯೆ purandara vittala ENU MECHCHIDE ELE HENNE ENU MARULAADEYE




ಏನು ಮೆಚ್ಚಿದೆ ಎಲೆ ಹೆಣ್ಣೆ ಏನು ಮರುಳಾದೆಯೆ |
ಏನು ಮೆಚ್ಚಿದೆಯೆಲೆ ಹೆಣ್ಣೆ ಪ

ನೋಟದಿ ಚೆಲುವನೆಂಬೆನೆ ಚಂಚಲರೂಪ|ಮಾಟದಿ ಚೆಲುವನೆ ಬೆನ್ನಲಿ ಬುಗುಟಿ ||ಗೂಟದಂತೆ ಹಲ್ಲು ಮೊಳದುದ್ದ ಮೋರೆಯು |ಬೂಟಕತನದಲ್ಲಿ ಬಾಯ ತೆರೆವನಿಗೆ 1

ಅಣುರೂಪದವನಿವ ನಿಲುವು ಉಳ್ಳವನಲ್ಲ |ಬನವ ತವರಿವವನಂತೆ ಕೈಯಲಿ ಕೊಡಲಿ ||ಅನುಜರ ಬಿಟ್ಟು ಕಪಿಗಳ ಕೂಡಿ ಆಡುವ |ಮನೆಮನೆಗಳ ಪೊಕ್ಕು ಕದ್ದು ತಿಂಬವನಿಗೆ 2

ಗಂಭೀರ ಪುರುಷನೆಂಬೆನೆ ದಿಗಂಬರನಿವ |ಅಂಬರದಲಿ ಕುದುರೆ ಕುಣಿಸುವನು ||ಅಂಬುಜಾಕ್ಷನಮ್ಮ ಪುರಂದರವಿಠಲಗೆ |ಸಂಭ್ರಮದಿಂದಲಿ ಮರುಳಾದೆ ಹೆಣ್ಣೆ 3
****


ರಾಗ ಕಾಂಭೋಜ. ಝಂಪೆ ತಾಳ (raga, taala may differ in audio)

Enu mecchide ele henne-Enu maruladeye |Enu meccideyele henne ||pa||

Notadi celuvanembene chanchalarupa|
Matadi celuvane bennali buguti ||
Gutadante hallu moladudda moreyu |
Butakatanadalli baya terevanige ||1||

Anurupadavaniva niluvu ullavanalla |
Banava tavarivavanante kaiyali kodali ||
Anujara bittu kapigala kudi aduva |
Manemanegala pokku kaddu timbavanige ||2||

Gambira purushanembene digambaraniva |
Ambaradali kudure kunisuvanu ||
Ambujaksha namma purandaravithalage |
Sambramadindali marulade henne ||3||
***

pallavi

Enu meccidele heNNe Enu maruLAde

caraNam 1

nODadi celuvanivanembene bennu gupuTu
kUDadantha hallu moLaduddade mOrebUTakatanadi bAi teredu anjipage

caraNam 2

aNurUpadavaniva niluvuLLa naranalla banava tarivanente kaiyalli koDali
manujaranu tA biTTu kapigaLanu kUDuva mane maneyanu pokku kaddu timbuvage

caraNam 3

gambhIra puruSa-nivanembene digambara ambaradLage kudureya kuNisuva
ambujAkSa siri purandara viTTalana sambhramaramadi nI mecci maduvyAdeyalle
***

ಏನು ಮೆಚ್ಚಿದೆಲೆ ಹೆಣ್ಣೆ ಏನು ಮರುಳಾದೆ ||ಪ||

ನೋಟದಿ ಚೆಲುವನಿವನೆಂಬೆನೆ ಚಂಚಲ

ಮಾಟದಿ ಚೆಲುವನಿವನೆಂಬೆನೆ ಬೆನ್ನು ಗುಪುಟು
ಗೂಟದಂಥ ಹಲ್ಲು ಮೊಳದುದ್ದದೆ ಮೋರೆ
ಬೂಟಕತನದಿ ಬಾಯ್ದೆರೆದು ಅಂಜಿಪಗೆ ||

ಅಣುರೂಪದವನಿವ ನಿಲುವುಳ್ಳ ನರನಲ್ಲ

ಬನವ ತರಿವನೆಂತೆ ಕೈಯಲ್ಲಿ ಕೊಡಲಿ
ಮನುಜರನು ತಾ ಬಿಟ್ಟು ಕಪಿಗಳನು ಕೂಡುವ
ಮನೆ ಮನೆಯನು ಪೊಕ್ಕು ಕದ್ದು ತಿಂಬುವಗೆ ||

ಗಂಭೀರ ಪುರುಷನಿವನೆಂಬೆನೆ ದಿಗಂಬರ

ಅಂಬರದೊಳಗೆ ಕುದುರೆಯ ಕುಣಿಸುವ
ಅಂಬುಜಾಕ್ಷ ಸಿರಿಪುರಂದರವಿಠಲನ
ಸಂಭ್ರಮದಿ ನೀ ಮೆಚ್ಚಿ ಮದುವ್ಯಾದೆಯಲ್ಲೆ ||
****


No comments:

Post a Comment