Thursday, 5 December 2019

ಕೂಳಿಗೆ ಬಿದ್ದಿರುವ ಬೋಳಿಗೆ ನಿನಗಿಷ್ಟು purandara vittala

ರಾಗ ಸೌರಾಷ್ಟ್ರ , ಅಟತಾಳ

ಕೂಳಿಗೆ ಬಿದ್ದಿರುವ ಬೋಳಿಗೆ ನಿನಗಿಷ್ಟು ಗಯ್ಯಾಳಿತನವೇತಕೆ ||ಪ||

ಆಚಾರ ನೋಡಿದರೆ ಅಲ್ಲೇನು ಹರಡಿಲ್ಲ
ಮೋಚಿ ಸಣ್ಣ ಮೊಗ ಮುಸುಕುತಿದ್ದ
ವಾಚಾಮಗೋಚರ ಹರಟೆಯ ಹರಟುತ
ನೀಚ ಮುಂಡೆಗೆ ನೇಮನಿಷ್ಠೆಗಳೆ ||

ಲಕ್ಷ ಬತ್ತಿಯ ಮಾಡಿ ಲಕ್ಷ ನಮಸ್ಕರಿಸಿ
ಲಕ್ಷ್ಮೀಪತಿಭಕ್ತಿ ಹುಸಿಯಿಂದಲಿ ಅ-
ಪೇಕ್ಷೆ ಪರಪುರುಷಗೆ ಪ್ರೀತಿಯಲಿ ರಾತ್ರಿಯೊಳು
ಭಿಕ್ಷವ ನೀಡಿ ಬಿಗಿದಪ್ಪುವಳಯ್ಯ ||

ಉಂಡು ತಿಂದು ಮೂಳಿ ಗಂಡುಗತ್ತರಿಯೆಂದು
ಕಂಡವರ್ಹೇಳುತಿರುವಾಗ ಇಷ್ಟು
ದಂಡಿಸುವ ನಮ್ಮ ಶ್ರೀ ಪುರಂದರವಿಠಲ
ಮಂಡೆ ಬೋಳಾದರೆ ಮನ ಬೋಳಾಯಿತೆ ||
***

pallavi

kooLige biddiruva bOLige ninagiSTu gayyALitanaveke

caraNam 1

AcAra nODidare allEnu haruDilla mOci saNNa mOga musukutidda
vAcAma gOcara haraDeya haraTuta nIca muNDege nEma niSTegaLa

caraNam 2

lakSa battiya mADi lakSa namaskarisi lakSmIpati bhakti husiyindali
pEkSa parapuruSarige prIyiyali rAtriyoLu bhIkSava nIDi bigidappuvanayya

caraNam 3

uNDu tindu mULi kaNDugattariyendu kaNDavar hELutiruvAga iSTu
daNDisuva namma purandara viTTala maNDe bOLAdare mana bOLAyite
***

No comments:

Post a Comment