Friday, 6 December 2019

ಪಗಡಿ ಹಾಕೆ ಪೋರಿ ತ್ರಿಗುಣಗಳೆಲ್ಲ ಮಾರಿ purandara vittala

ರಾಗ ನಾದನಾಮಕ್ರಿಯ ಆದಿ ತಾಳ

ಪಗಡಿ ಹಾಕೆ ಪೋರಿ
ತ್ರಿಗುಣಗಳೆಲ್ಲ ಮಾರಿ ||ಪ ||

ನೇಮದ ಸೀರೆಯನುಟ್ಟು ನಿನ್ನ
ಕಾಮದ ಕಚ್ಚೆಯ ಕಟ್ಟು
ಪ್ರೇಮದ ಸಜ್ಜನರೊಳಗೆ ನಿಂತು
ಮಾತನಾಡೋಣ ಬಾರೆ ||

ಹಿಂದಕೆ ಹೋಗಲುಬೇಡ ನೀ
ಮುಂದಕೆ ಬಂದು ನಿಲ್ಲು
ಹಿಂದಿನ ಮುಂದಿನ ಹಂಬಲ ಬಿಟ್ಟು
ಒಂದಾಟ ಆಡೋಣ ಬಾರೆ ||

ತೊಡೆಯ ತೆರೆಯಬೇಡ ನಿ-
ನ್ನೊಡೆಯನು ನಗುತಾನೆ
ತೊಡೆಯ ತೆರೆದು ತೋರಿದರೆ
ನಾಚಿಕೊಂಬರಲ್ಲೆ ||

ನೇಮ ನಿಷ್ಠೆಯ ನೀಗಿ ಅದು
ಸಾಮದಾನವಾಗಿ
ಝಾಮ ಝಾಮ ಉಸಿರು ಬಿಡದೆ
ಆಟವಾಡೋಣ ಬಾರೆ ||

ಪಗಡಿ ಎಂಬುದು ಅಲ್ಲ
ಪುಗಡಿ ಎಂಬುದು ಸೊಲ್ಲ
ಪಗಡಿ ಸೊಗಸು ಪುರಂದರ
ವಿಠಲನೊಬ್ಬ ಬಲ್ಲ ||
***

pallavi

pagaDi hAke pOri triguNagaLella mAri

caraNam 1

nEmada sIreyanuTTi ninna kAmada kacceya kaTTu prEmada sajjanaroLage nintu mAtanADONa bAre

caraNam 2

hindige hOgalu bEDa nI mundage bandu nillu hindina mundina hambala biTTu ondADa ADONa bAre

caraNam 3

toDeya tereya bEDa ninnoDeyanu nagutAne toDeya teredu tOridare ncikombarella

caraNam 4

nEma niSTeya nIgi adu sama dAnavAgi jhAma jhAma usiru biDade ADvADONa bAre

caraNam 5

pagaDi embuvudu alla pugaDi embudu solla pagaDi sogasu purandara viTTlanobba balla
***

No comments:

Post a Comment